Asianet Suvarna News Asianet Suvarna News

ಫೆ.17 ಲಾಸ್ಟ್ ಡೇಟ್, ನಿಮ್ಮ ವಾಹನಕ್ಕೆ HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?

ಕರ್ನಾಟಕದಲ್ಲಿ ವಾಹನಗಳಿಗೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ ಮಾಡಲಾಗಿದೆ. ಇದೀಗ ಈ ಗಡುವು ಫೆಬ್ರವರಿ 17ಕ್ಕೆ ಅಂತ್ಯವಾಗಲಿದೆ. ಬಳಿಕ ದುಬಾರಿ ದಂಡ ಪಾವತಿಸುವ ಮೊದಲು ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪಡೆದುಕೊಳ್ಳಿ. ಎಲ್ಲೆಂದರಲ್ಲಿ ಈ ನಂಬರ್ ಪ್ಲೇಟ್ ಸಿಗುವುದಿಲ್ಲ. ಆನ್‌ಲೈನ್ ಮೂಲಕ ಬುಕ್ ಮಾಡಿದರೆ ಮಾತ್ರ HSRP ನಂಬರ್ ಪ್ಲೇಟ್ ಕೈಸೇರಲಿದೆ. ಹಾಗಾದರೆ HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ? ಇಲ್ಲಿದೆ ವಿವರ
 

How to apply HSRP Number plate or your vehicle in Karnataka fee and online process ckm
Author
First Published Jan 11, 2024, 1:48 PM IST

ಬೆಂಗಳೂರು(ಜ.11) ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕುರಿತು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ಈಗಾಗಲೇ ಹಲವು ಗಡುವುಗಳನ್ನು ನೀಡಿ ವಿಸ್ತರಿಸಿದೆ. ಫೆಬ್ರವರಿ 17 ಕೊನಯ ದಿನ. ಬಳಿಕ ದುಬಾರಿ ದಂಡ ಪಾವತಿ ತಲೆನೋವು ಶುರುವಾಗಲಿದೆ. ನಕಲಿ ನಂಬರ್ ಪ್ಲೇಟ್, ವಾಹನಗಳನ್ನು ಕಾನೂನು ಬಾಹಿರ ಚಟುವಟಿಕೆಗೆ ಬಳಕೆ ಮಾಡುವುದನ್ನು ತಪ್ಪಿಸಲು ಹಾಗೂ ವಾಹನಗಳನ್ನು ಟ್ರಾಕ್ ಮಾಡಲು ಸೇರಿದಂತೆ ಹಲವು ಕಾರಣಗಳಿಂದ  ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಗತ್ಯವಾಗಿದೆ. ಈ ನಂಬರ್ ಪ್ಲೇಟ್ ಎಲ್ಲೆಂದರಲ್ಲಿ ಸಿಗುವುದಿಲ್ಲ. ಮದ್ಯವರ್ತಿಗಳ ಅವಶ್ಯಕತೆ ಇಲ್ಲ. ಸುಲಭವಾಗಿ HSRP ನಂಬರ್ ಪ್ಲೇಟ್ ಪಡೆಯಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

2019ರ ಎಪ್ರಿಲ್‌ಗೂ ಮೊದಲು ರಿಜಿಸ್ಟ್ರೇಶನ್ ಆಗಿರುವ ಎಲ್ಲಾ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯವಾಗಿದೆ. 2019ರ ಎಪ್ರಿಲ್ ಬಳಿಕ ರಿಜಿಸ್ಟ್ರೇಶನ್ ಆಗಿರುವ ವಾಹನಗಳಿಗೆ ಹಾಕಲಾಗಿರುವ ನಂಬರ್ ಪ್ಲೇಟ್ HSRP ಆಗಿದೆ. ಹೀಗಾಗಿ ಯಾರ ವಾಹನ ಎಪ್ರಿಲ್ 2019ರ ಮೊದಲ ರಿಜಿಸ್ಟ್ರೇಶನ್ ಆಗಿದೆಯೋ ಆ ವಾಹನಗಳ ಮಾಲೀಕರು HSRP ನಂಬರ್ ಪ್ಲೇಟ್ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು.

 

HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಗಡುವು ವಿಸ್ತರಿಸಿದ ಸರ್ಕಾರ, ಏನಿದು ಹೊಸ ಫಲಕ?

HSRP ನಂಬರ್ ಪ್ಲೇಟ್ ಬುಕಿಂಗ್‌ನಲ್ಲಿ ನಗದು ವ್ಯವಹಾರವಿಲ್ಲ. ಆನ್‌ಲೈನ್ ಮೂಲಕವೇ ಬುಕಿಂಗ್, ಆನ್‌ಲೈನ್ ಮೂಲಕವೇ ಪಾವತಿ ಮಾಡಬೇಕು. ಕರ್ನಾಟಕದಲ್ಲಿ ವಾಹನ ಮಾಲೀಕರು HSRP ನಂಬರ್ ಪ್ಲೇಟ್ ಬುಕ್ ಮಾಡಲು ಅನುಸರಿಸಬೇಕಾದ ವಿಧಾನ ಇಲ್ಲಿದೆ

https://transport.karnataka.gov.in ಅಥವಾ www.siam.in  ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು
Book HSRP ಕ್ಲಿಕ್ ಮಾಡಿ
ನಿಮ್ಮ ವಾಹನ ತಯಾರಕ ಕಂಪನಿ ಆಯ್ಕೆ ಮಾಡಿಕೊಳ್ಳಿ
ನಿಮ್ಮ ವಾಹನದ ಮಾಹಿತಿಯನ್ನು ನಮೂದಿಸಿಕೊಳ್ಳಿ
ನಿಮ್ಮ ಹತ್ತಿರದ ಅಥವಾ ನಿಮ್ಮ  ಡೀಲರ್ ಶೋ ರೂಂ ಆಯ್ಕೆ ಮಾಡಿಕೊಳ್ಳಿ
HSRP ನಂಬರ್ ಪ್ಲೇಟ್‌ಗೆ ಪಾವತಿ ಮಾಡಿ
ಮೊಬೈಲ್ ನಂಬರ್‌ಗೆ ಬರವು ಒಟಿಪಿಯನ್ನು ನಮೂದಿಸಿ
HSRP ನಂಬರ್ ಪ್ಲೇಟ್ ಅಳವಡಿಸಲು ನಿಮ್ಮ ಅನುಕೂಲದ ದಿನಾಂಕವನ್ನು ನಿಗದಿಪಡಿಸಿಕೊಳ್ಳಿ

 

ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ: ಭಾರೀ ದಂಡದ ಎಚ್ಚರಿಕೆ ಕೊಟ್ಟ ಸಾರಿಗೆ ಇಲಾಖೆ

HSRP ನಂಬರ್ ಪಾವತಿ ವಿವರ
ದ್ವಿಚಕ್ರ ವಾಹನ: 400 ರೂಪಾಯಿ + 100 (ಕಲರ್ ಕೋಡ್ ಸ್ಟಿಕ್ಕರ್)
ಕಾರು ಸೇರಿದಂತೆ ನಾಲ್ಕು  ಚಕ್ರದ ವಾಹನ: 1,100 ರೂಪಾಯಿ (ಕಾರು ಇತರ ವಾಹನಗಳಿಗೆ ತಕ್ಕಂತೆ ಬದಲಾಗಲಿದೆ) + 100 (ಕಲರ್ ಕೋಡ್ ಸ್ಟಿಕ್ಕರ್)
 
ನೀವು ಆನ್‌ಲೈನ್ ಮೂಲಕಕ HSRP ನಂಬರ್ ಪ್ಲೇಟ್ ಬುಕ್ ಮಾಡಿದ ಬಳಿಕ ಮೂರರಿಂದ ಒಂದು ವಾರದೊಳಗೆ ಹೊಸ ನಂಬರ್ ಪ್ಲೇಟ್ ನೀವು ಆಯ್ಕೆ ಮಾಡಿದ ಡೀಲರ್ ಬಳಿ ತಲುಪಲಿದೆ. ಬಳಿಕ ನಿಗದಿಮಾಡಿದ ದಿನಾಂಕದಂದೂ ಡೀಲರ್ ಬಳಿ ತೆರಳಿ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳಿ. 

ಎಚ್ಎಸ್‌ಆರ್‌ಪಿ ಎಂಬುದು ವಾಹನಗಳ ನೋಂದಣಿ ನಂಬರ್ ಪ್ಲೇಟ್ ಆಗಿದ್ದು, ಅಲ್ಯಮಿನಿಯಂನಿಂದ ತಯಾರಿಸಲಾಗುತ್ತದೆ. ಅದರಲ್ಲಿ ಲೇಸರ್ ಕೋಡ್ ಇದ್ದು, ಸ್ಕ್ಯಾನ್ ಮಾಡಿದಾಗ ವಾಹನದ ಸಂಪೂರ್ಣ ಮಾಹಿತಿ ಹಾಗೂ ಅಶೋಕ ಚಕ್ರದ ಚಿತ್ರವನ್ನು ಒಳಗೊಂಡಿರುತ್ತದೆ. ನಕಲಿ ನಂಬರ್ ಪ್ಲೇಟ್‌ ಅಳವಡಿಸುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Follow Us:
Download App:
  • android
  • ios