ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ: ಭಾರೀ ದಂಡದ ಎಚ್ಚರಿಕೆ ಕೊಟ್ಟ ಸಾರಿಗೆ ಇಲಾಖೆ

ದೇಶದಲ್ಲಿ ವಾಹನಗಳಿಗೆ ಏಕರೂಪ ನೋಂದಣಿ ಸಂಖ್ಯೆ ಫಲಕ ಅಳವಡಿಕೆ ಕುರಿತಂತೆ ಸಾರಿಗೆ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, 2019ರ ಏಪ್ರಿಲ್‌ 1ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳು ನವೆಂಬರ್‌ 17ರೊಳಗೆ ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್‌ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳುವಂತೆ ಆದೇಶಿಸಿದೆ.

karnataka all old vehicles have hsrp number plates by november 17 gvd

ಬೆಂಗಳೂರು (ಆ.23): ದೇಶದಲ್ಲಿ ವಾಹನಗಳಿಗೆ ಏಕರೂಪ ನೋಂದಣಿ ಸಂಖ್ಯೆ ಫಲಕ ಅಳವಡಿಕೆ ಕುರಿತಂತೆ ಸಾರಿಗೆ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, 2019ರ ಏಪ್ರಿಲ್‌ 1ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳು ನವೆಂಬರ್‌ 17ರೊಳಗೆ ಹೈ ಸೆಕ್ಯುರಿಟಿ ರಿಜಿಸ್ಪ್ರೇಷನ್‌ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಅಳವಡಿಸಿಕೊಳ್ಳುವಂತೆ ಆದೇಶಿಸಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 2019ರ ಏಪ್ರಿಲ್‌ 1ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯವಾಗಿದೆ. ಅದರ ಅನುಷ್ಠಾನವನ್ನು ಈವರೆಗೆ ಮಾಡಿರದ ಸಾರಿಗೆ ಇಲಾಖೆ, ಇದೀಗ ಆ ಕುರಿತು ಆದೇಶ ಹೊರಡಿಸಿದೆ. ನವೆಂಬರ್‌ 17ರೊಳಗೆ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಒಂದು ವೇಳೆ ನಿಗದಿತ ಅವಧಿಯೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳದಿದ್ದರೆ ವಾಹನಗಳಿಗೆ 500ರಿಂದ 1 ಸಾವಿರ ರು. ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಲಾಗಿದೆ.

ಸಾಲು- ಸಾಲು ರಜೆಗಳು ಹಿನ್ನೆಲೆ: ಮಂತ್ರಾಲಯದ ರಾಯರ ಮಠಕ್ಕೆ ಮತ್ತೆ ಹರಿದುಬಂತು ಕೋಟಿ ಗಟ್ಟಲೆ ಕಾಣಿಕೆ

HSRP ನಂಬರ್ ಪ್ಲೇಟ್ ವಿಶೇಷತೆ ಏನು?: ಇದು ಶಾಶ್ವತ ಗುರುತಿನ ಸಂಖ್ಯೆ ಹೊಂದಿರುವ ನಂಬರ್ ಪ್ಲೇಟ್ ಆಗಿದೆ. ಹಾಲೋಗ್ರಾಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುವಂತೆ ಈ ನಂಬರ್ ಪ್ಲೇಟ್ ಸಿದ್ದಪಡಿಸಲಾಗಿದೆ. ಈ ನಂಬರ್ ಪ್ಲೇಟ್ ಗಳನ್ನು ಟ್ಯಾಂಪರ್ ಮಾಡಲು ಸಾಧ್ಯವಿಲ್ಲ. ಏಕರೂಪದ ನಂಬರ್ ಪ್ಲೇಟ್ ಇದಾಗಿರುವುದರಿಂದ ದಾಖಲೆಗಳನ್ನು ಖಚಿತಪಡಿಸಿಕೊಳ್ಳಲು ಇದು ನೆರವಾಗುತ್ತದೆ. ಎರಡು ವಾಹನಗಳಿಗೆ ಒಂದೇ ಸಂಖ್ಯೆಯ ನಂಬರ್ ಪ್ಲೇಟ್ ಪಡೆಯಲು ಸಾಧ್ಯವಿಲ್ಲ. 

ಮತ್ತೆ ಕಾಂಗ್ರೆಸ್‌ ಕದ ತಟ್ಟಿದರೆ ಮರ್ಯಾದೆಗೇಡು: ಸಿ.ಟಿ.ರವಿ

ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಕೋಡ್ ಇರಲಿದ್ದು, ತ್ರಿಚಕ್ರ ಮತ್ತು ಘನ ವಾಹನಗಳಿಗೆ ಡಿಜಿಟಲ್ ಸ್ಟಿಕ್ಕರ್ ಅಳವಡಿಸಲಾಗುತ್ತದೆ. ಈ ಸ್ಟಿಕ್ಕರ್‌ನಲ್ಲಿ ಇಂಜಿನ್ ಸಂಖ್ಯೆ, ಚಾಸಿಸ್ ನಂಬರ್, ವಾಹನದ ಮಾದರಿ, ನೋಂದಣಿ ಸಂಖ್ಯೆ ಸೇರಿದಂತೆ ಮಾಲಿಕರ ವಿವರಗಳು ಇರಲಿವೆ. ಏಪ್ರಿಲ್ 01 , 2019ಕ್ಕೂ ಮುನ್ನ ಸುಮಾರು ಎರಡು ಕೋಟಿಗಳಷ್ಟು ವಾಹನಗಳು ನೋಂದಣಿಯಾಗಿವೆ. ವಾಹನ ತಯಾರಕರು ಈಗಾಗಲೇ HSRP  ತಯಾರಕರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಹಳೆ ವಾಹನ ಮಾಲಿಕರು ಅಧಿಕೃತ ಡೀಲರ್ ಗಳೊಂದಿಗೆ ಈ ನಂಬರ್ ಪ್ಲೇಟ್ ಗಳನ್ನು ಆರ್ಡರ್ ಮಾಡಬಹುದಾಗಿದೆ.

Latest Videos
Follow Us:
Download App:
  • android
  • ios