Asianet Suvarna News Asianet Suvarna News

HSRP ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಗಡುವು ವಿಸ್ತರಿಸಿದ ಸರ್ಕಾರ, ಏನಿದು ಹೊಸ ಫಲಕ?

ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ ಗಡುವನ್ನು ಕರ್ನಾಟಕ ಸರ್ಕಾರ 3 ತಿಂಗಳಿಗೆ ವಿಸ್ತರಿಸಿದೆ. ಈ ಮೂಲಕ ಆತಂಕಗೊಳಗಾಗಿದ್ದ ವಾಹನ ಮಾಲೀಕರು ನಿರಾಳರಾಗಿದ್ದಾರೆ. ಏನಿದು HSRP ನಂಬರ್ ಪ್ಲೇಟ್? ಇಲ್ಲಿದೆ ವಿವರ.
 

Karnataka Govt extend HSRP Number plate fix deadline for Vehicle till 17th February 2024 ckm
Author
First Published Nov 14, 2023, 9:44 PM IST

ಬೆಂಗಳೂರು(ನ.14) ಕರ್ನಾಟಕ ಸಾರಿಗೆ ಇಲಾಖೆ ವಾಹನಗಳಿಗೆ HSRP ನಂಬರ್ ಪ್ಲೇಟ್ ಕಡ್ಡಾಯ ಗಡುವನ್ನು 3 ತಿಂಗಳಿಗೆ ವಿಸ್ತರಣೆ ಮಾಡಿದೆ. ನವೆಂಬರ್ 17ಕ್ಕೆ ಅಂತ್ಯವಾಗಬೇಕಿದ್ದ HSRP ನಂಬರ್ ಪ್ಲೇಟ್ ಅವಧಿಯನ್ನು ಇದದೀಗ ಫೆಬ್ರವರಿ 17ರ ವರೆಗೆ ವಿಸ್ತರಣೆ ಮಾಡಿದೆ. ಈ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಮಾಹಿತಿ ನೀಡಿದ್ದಾರೆ. 90 ದಿನಗಳ ಕಾಲಾವಕಾಶವನ್ನು ಸರ್ಕಾರ ಕಲ್ಪಿಸಿದ್ದು, ಎಲ್ಲರೂ ಆದಷ್ಟು ಬೇಗ HSRP ನಂಬರ್ ಪ್ಲೇಟ್ ಹಾಕುವಂತೆ ಮನವಿ ಮಾಡಿದ್ದಾರೆ. 

2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು 90 ದಿನಗಳಲ್ಲಿ ಎಚ್‌ಎಸ್‌ಆರ್‌ಪಿ ಫಲಕ ಹೊಂದಬೇಕು ಎಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕೆಲ ಗೊಂದಲ, ಅವಧಿ ವಿಸ್ತರಣೆ ಬಳಿಕ ನವೆಂಬರ್ 17, 2023 ಕೊನೆಯ ದಿನಾಂಕ ನೀಡಲಾಗಿತ್ತು. ಇದರ ನಡುವೆ ಕೋರ್ಟ್‌ನಲ್ಲಿ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಗಡುವು ವಿಸ್ತರಿಸಲು ರಾಜ್ಯಕ್ಕೆ ಸೂಚನೆ ನೀಡಿತ್ತು. ಇದರಂತೆ ಸಾರಿಗೆ ಇಲಾಖೆ 90 ದಿನಗಳಿಗೆ ಮತ್ತೆ ಅವಧಿ ವಿಸ್ತರಣೆ ಮಾಡಿದೆ.

Defective Number Plates ಬೆಂಗಳೂರಲ್ಲಿ HSRP ನಂಬರ್ ಪ್ಲೇಟ್ ಇಲ್ಲ ಎಂದು ದಂಡ, ನಿಯಮ ಹೇಳುವುದೇನು?

2019ರ ಎಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾಗಿರುವ 2 ಕೋಟಿ ವಾಹನಗಳ ಪೈಕಿ ಕೇವಲ 2.6 ಲಕ್ಷ ವಾಹನಗಳು ಮಾತ್ರ HSRP ನಂಬರ್ ಪ್ಲೇಟ್ ಹಾಕಲಾಗಿದೆ. ಇನ್ನುಳಿದ ವಾಹನಗಳು ಇನ್ನೂ HSRP ನಂಬರ್ ಪ್ಲೇಟ್ ಹಾಕಿಲ್ಲ. ಇನ್ನು 90 ದಿನಗಳಲ್ಲಿ ಈ ವಾಹನಗಳು HSRP ನಂಬರ್ ಪ್ಲೇಟ್ ಹಾಕಬೇಕಿದೆ. 

ಹೆಚ್‌ಎಸ್ಆರ್‌ಪಿ ನಂಬರ್ ಪ್ಲೇಟ್, ಎಂದರೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಶನ್ ಪ್ಲೇಟ್(HSRP). ಅತೀ ಸುರಕ್ಷಿತ ನಂಬರ್ ಪ್ಲೇಟ್ ಕರ್ನಾಟಕದಲ್ಲಿನ ವಾಹನಕ್ಕೆ ಕಡ್ಡಾಯ ಮಾಡಲಾಗಿದೆ. ಎಚ್‌ಎಸ್‌ಆರ್‌ಪಿ ಅಳವಡಿಸದಿದ್ದರೆ ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ, ನಕಲಿ ಆರ್‌ಸಿ, ವಿಮೆ ಅಪ್ಡೇಟ್‌, ಸಾಮರ್ಥ್ಯ ಅನುಮೋದನೆ ಇತ್ಯಾದಿ ಸಾಧ್ಯವಿಲ್ಲ. ಎಚ್‌ಎಸ್‌ಆರ್‌ಪಿ ನಂಬರ್‌ ಅಳವಡಿಕೆ ಮಾಡಿಕೊಂಡ ಮಾಹಿತಿಯನ್ನು ವಾಹನ್‌ ತಂತ್ರಾಂಶದಲ್ಲಿ ಮಾಲೀಕರ ಮಾಹಿತಿ ಲಭ್ಯವಾಗುತ್ತದೆ. ಅಧಿಕೃತವಾಗಿಲ್ಲದ ವಾಹನಗಳು ರಸ್ತೆಯಲ್ಲಿ ಓಡಾಡುವುದನ್ನು ಸುಲಭವಾಗಿ ಪತ್ತೆ ಹಚ್ಚಲು ಇದು ಸಹಾಯಕವಾಗಲಿದೆ.

‘ಮೋಟಾರು ವಾಹನ ಕಾಯ್ದೆ-1989’ರ ಸೆಕ್ಷನ್‌ 50 ಮತ್ತು 51ರಂತೆ ಎಲ್ಲ ವಾಹನಗಳಿಗೆ ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಗರಿಷ್ಠ ಭದ್ರತೆಯ (ಹೈ ಸೆಕ್ಯೂರಿಟಿ) ನಂಬರ್‌ ಪ್ಲೇಟ್‌ಗಳನ್ನು ಅಳವಡಿಸಬೇಕು. ಈ ಬಗ್ಗೆ 2018ರಲ್ಲಿ ಸುಪ್ರೀಂಕೋರ್ಟ್‌ ಹಾಗೂ ಕೇಂದ್ರ ಸರ್ಕಾರ ಆದೇಶ ಹೊರಡಿಸಿವೆ.

ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ: ಭಾರೀ ದಂಡದ ಎಚ್ಚರಿಕೆ ಕೊಟ್ಟ ಸಾರಿಗೆ ಇಲಾಖೆ

ವಾಹನಗಳ ಮಾಲೀಕರು ಶೋ ರೂಂ ಅಥವಾ ಡೀಲರ್‌ಗಳಲ್ಲಿ ನಂಬರ್‌ ಪ್ಲೇಟ್‌ ಬದಲಾವಣೆಗೆ ಕೋರಿಕೆ ಸಲ್ಲಿಸಬಹುದು. ನಾಲ್ಕುಚಕ್ರದ ವಾಹನಗಳಿಗೆ 400ರಿಂದ 500 ರು.ಗಳವರೆಗೆ ಶುಲ್ಕ ಇರುತ್ತದೆ. ಒರಿಜಿನಲ್‌ ಇಕ್ಯುಪ್‌ಮೆಂಟ್‌ ಮ್ಯಾನುಫ್ಯಾಕ್ಚರರ್‌ರಿಂದ(ಒಇಎಂ) ಅಧಿಕೃತ ಫೋರ್ಟಲ್‌ನಲ್ಲಿ ನಮೂದಿಸಿದ ಮೇಲೆ ಎಚ್‌ಎಸ್‌ಆರ್‌ಪಿ ಅಳವಡಿಸಲಾಗುತ್ತದೆ. 2019ರ ಏ.1ರ ನಂತರ ನಿರ್ಮಾಣವಾದ ವಾಹನಗಳಿಗೆ ತಯಾರಿಕಾ ಸಂಸ್ಥೆಗಳೇ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ ಅಳವಡಿಸುವ ಜವಾಬ್ದಾರಿ ಹೊಂದಿವೆ.
 

Follow Us:
Download App:
  • android
  • ios