ಮಹೀಂದ್ರ ಸ್ಕಾರ್ಪಿಯೋ ಡ್ಯಾನ್ಸಿಂಗ್ ಕಾರು ಸೀಝ್, ಮಾಲೀಕನಿಗೆ 41 ಸಾವಿರ ರೂ ಫೈನ್!

ವಾಹನ ಮಾಡಿಫಿಕೇಶನ್ ಕಾನೂನು ಉಲ್ಲಂಘನೆಯಾಗಿದೆ. ನಿಯಮ ಉಲ್ಲಂಘಿದರೆ ದುಬಾರಿ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಆದರೆ ಭಾರತದಲ್ಲಿ ಮಾಡಿಫಿಕೇಶನ್ ಕ್ರೇಝ್ ಸ್ವಲ್ಪ ಹೆಚ್ಚೇ ಇದೆ. ಅದರಲ್ಲೂ ಚಿತ್ರ ವಿಚಿತ್ರವಾಗಿ ಮಾಡಿಫಿಕೇಶ್ ಮಾಡಿದ ಕಾರುಗಳೂ ಇವೆ. ಹೀಗೇ ಮಾಡಿಫೈ ಮಾಡಿ ಡ್ಯಾನ್ಸಿಂಗ್ ಸ್ಕಾರ್ಪಿಯೋ ಎಂದೇ ಗುರುತಿಸಿಕೊಂಡಿದ್ದ ಕಾರನ್ನು ಪೊಲೀಸರು ಸೀಝ್ ಮಾಡಿದ್ದಾರೆ. ಇಷ್ಟೇ ಅಲ್ಲ ಮಾಲೀಕರಿಗೆ ದುಬಾರಿ ದಂಡ ಹಾಕಿದ್ದಾರೆ

Heavily modified Mahindra Scorpio owner fined 41k and seized by Ghaziabad Police ckm

ದೆಹಲಿ(ಡಿ.29): ಮೋಟಾರು ವಾಹನ ಕಾಯ್ದೆ ಪ್ರಕಾರ ವಾಹನ ಪರಿವರ್ತನೆ ಮಾಡುವುದು ಕೂಡ ಕಾನೂನು ಉಲ್ಲಂಘನೆಯಾಗಿದೆ. ಮಾಡಿಫಿಕೇಶ್ ಮಾಡಿದರೆ ದುಬಾರಿ ದಂಡ ಕಟ್ಟಬೇಕಾಗುತ್ತದೆ. ಹೀಗೆ ಮಾಡಿಫಿಕೇಶನ್  ಮಾಡಿದ ಹಲವು ಕಾರುಗಳು ಇದೀಗ ಪೊಲೀಸರ ವಶದಲ್ಲಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದ ಡ್ಯಾನ್ಸಿಂಗ್ ಸ್ಕಾರ್ಪಿಯೋ ಕಾರು ಇದೀಗ ಪೊಲೀಸರ ಕೈಸೇರಿದೆ.

 

ಜಾತಿ ಸ್ಟಿಕ್ಕರ್ ಅಂಟಿಸಿದರೆ ವಾಹನವೇ ಸೀಝ್; ಕಟ್ಟು ನಿಟ್ಟಿನ ಆದೇಶ ಜಾರಿ!

ಗಾಝಿಯಾಬಾದ್ ನಿವಾಸಿ ತಮ್ಮ ಮಹೀಂದ್ರ ಸ್ಕಾರ್ಪಿಯೋವನ್ನು ಮಾಡಿಫೈ ಮಾಡಿದ್ದರು. ಹಳದಿ, ನೀಲಿ, ಕಪ್ಪು ಬಣ್ಣ ಹಾಗೂ ಕೆಲ ವಿಶೇಷ ವಿನ್ಯಾಸ ಮಾಡಿಸಿಕೊಂಡಿದ್ದರು. ಇನ್ನು ಆರ್ಕೆಸ್ಟ್ರಾ ರೀತಿಯ ಸೌಂಡ್ ಸಿಸ್ಟಮ್ ಕೂಡ ಅಳವಡಿಸಿದ್ದರು. ಇಷ್ಟೇ ಆಗಿದ್ದರೆ ಪೊಲೀಸರ ಕಣ್ಣು ತಪ್ಪಿಸಿ ಹೋಗಬಹುದಿತ್ತೇನೋ. ಆದರೆ ಮಾಲೀಕ ಮತ್ತೊಂದು ತಪ್ಪನ್ನು ಮಾಡಿದ್ದ.

ಹೆದ್ದಾರಿಯಲ್ಲಿ ಮಾರಾಕಾಸ್ತ್ರಗಳಿಂದ ಕಾರು ದರೋಡೆ ಯತ್ನ, ಚಾಲಕನ ಸಮಯಪ್ರಜ್ಞೆಯಿಂದ ಬಚಾವ್!

ಡ್ಯಾನ್ಸಿಂಗ್ ಕಾರಿನ ಮೂಲಕ ದಾರಿಯಲ್ಲಿ ಸ್ಟಂಟ್ ಮಾಡುತ್ತಿದ್ದ, ಇನ್ನು ಅತೀಯಾದ ಮ್ಯೂಸಿಕ್ ಸೌಂಡ್ ಬಳಕೆ ಮಾಡುತ್ತಿದ್ದ. ಹೀಗಾಗಿ ಇಲ್ಲಿನ ನಿವಾಸಿಗಳು ದೂರು ನೀಡಿದ್ದರು. ಇನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದ ವೇಳೆ ಈ ಡ್ಯಾನ್ಸಿಂಗ್ ಸ್ಕಾರ್ಪಿಯೋ ಕಾರನ್ನು ಗಮಮಿಸಿದ್ದಾರೆ. ಬಳಿಕ ಮಾಡಿಫಿಕೇಶನ್ ಕಾರಣ ವಾಹನ ಸೀಝ್ ಮಾಡಿದ್ದಾರೆ. ಇಷ್ಟೇ ಅಲ್ಲ ಮಾಲೀಕನಿಗೆ 41,500 ರೂಪಾಯಿ ದಂಡ ಹಾಕಿದ್ದಾರೆ.

 

Latest Videos
Follow Us:
Download App:
  • android
  • ios