ಹೆದ್ದಾರಿಯಲ್ಲಿ ಮಾರಾಕಾಸ್ತ್ರಗಳಿಂದ ಕಾರು ದರೋಡೆ ಯತ್ನ, ಚಾಲಕನ ಸಮಯಪ್ರಜ್ಞೆಯಿಂದ ಬಚಾವ್!
ರಾತ್ರಿ ವೇಳೆ ಕಾರು ಪ್ರಯಾಣ ಅಪಾಯಕಾರಿ. ಹೆದ್ದಾರಿಗಳಲ್ಲಿ ದರೋಡೆಕೋರರು, ವಾಹನ ತಡೆದು, ವಾಹನ ಸೇರಿದಂತೆ ಎಲ್ಲವನ್ನೂ ದೋಚುವ ಪ್ರಕರಣಗಳು ನಡೆಯುತ್ತಲೇ ಇದೆ. ಇದೀಗ ಮಾರಾಕಾಸ್ತ್ರಗಳಿಂದ ಹೆದ್ದಾರಿಯಲ್ಲಿ ಕಾರು ದರೋಡೆ ಯತ್ನ ನಡೆದಿದೆ. ಆದರೆ ಚಾಲನಕ ಸಮಯಪ್ರಜ್ಞೆಯಿಂದ ಕೂದಲೆಲೆಯುವ ಅಂತರಿಂದ ಬಚಾವ್ ಆಗಿದ್ದಾರೆ.
ಜೈಪುರ(ಡಿ.24): ಭಾರತದಲ್ಲಿ ರಾತ್ರಿ ಕಾರು ಪ್ರಯಾಣ ಸುರಕ್ಷಿತವಲ್ಲ. ಇದಕ್ಕೆ ಹಲವು ಕಾರಣಗಳೂ ಇವೆ. ಇದರಲ್ಲಿ ಪ್ರಮುಖ ಕಾರಣ ದರೋಡೆ. ಹೆದ್ದಾರಿಗಳಲ್ಲಿ ಅವಿತುಕುಳಿತುಕೊಂಡಿರುವ ಗ್ಯಾಂಗ್ ಕಾರು ತಡೆದು ದೋಚಿರುವ ಪ್ರಕರಣಗಳು ನಡೆಯುತ್ತಲೇ ಇದೆ. ಈ ದರೋಡೆಕೋರರು ಕಾರಿನಲ್ಲಿದ್ದವರನ್ನು ಹತ್ಯೆ ಮಾಡಿ, ಕಾರು ಸಹಿತ ಪರಾರಿಯಾಗಿರುವ ಪ್ರಕರಣಗಳು ಇವೆ. ಇದೀಗ ಭಯಾನಕ ದೃಶ್ಯವೊಂದು ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮಾರದಲ್ಲಿ ಸೆರೆಯಾಗಿದೆ.
ಧರ್ಮಸ್ಥಳದ ಎತ್ತಿನ ಗಾಡಿ ಕಾರಿನ ವಿಡಿಯೋ ಟ್ವೀಟ್ ಮಾಡಿ ಟೆಸ್ಲಾಗೆ ಚಾಲೆಂಜ್ ಹಾಕಿದ ಮಹೀಂದ್ರ!.
ಈ ವಿಡಿಯೋ ಜೈಪುರ ಅಥವಾ ಒಡಿಶಾ ಹೆದ್ದಾರಿಯಲ್ಲಿ ನಡೆದ ಘಟನೆ ಎಂಬುದು ಪ್ರಾಥಮಿಕ ಮಾಹಿತಿಯಾಗಿದೆ. ಆದರೆ ಖಚಿತತೆ ಇಲ್ಲ. ಆದರೆ ಈ ಘಟನೆ, ತುರ್ತು ಕಾರಣಗಳಿಗಾಗಿ ರಾತ್ರಿ ವೇಳೆ ಸಂಚರಿಸುವವರು ಎಚ್ಚರಿಕೆ ವಹಿಸಲೇಬೇಕು. ಹೆದ್ದಾರಿಯಲ್ಲೇ ವೇಗವಾಗಿ ಚಲಿಸುತ್ತಿದ್ದ ವೇಳೆ ದೂರದಲ್ಲಿ ಯುವಕರ ಗುಂಪೊಂದು ಗಾರಿ ಮಧ್ಯ ಕಾರು ನಿಲ್ಲಿಸಲು ಸೂಚಿಸಿತ್ತು.
25 ಕೋಟಿ ರೂ ಕಾರಿಗೆ 52 ಕೋಟಿ ರೂ ನಂಬರ್ ಪ್ಲೇಟ್; ದುಬಾರಿ ರಿಜಿಸ್ಟ್ರೇಶನ್‌ಗೆ ದಂಗಾದ ಪೊಲೀಸ್!.
ಹಂಪ್ ಸನಿಹದಲ್ಲಿ ನಿಂತ ಈ ಯುವಕರ ಗುಂಪು, ಟಾರ್ಚ್ ಲೈಟ್ ಹಾಕುತ್ತಾ ಕಾರಿಗೆ ಅಡ್ಡಬಂದರು. ಆರಂಭದಲ್ಲಿ ಪೊಲೀಸ್ ಇರಬೇಕು ಎಂದು ಚಾಲಕ ಕಾರು ನಿಲ್ಲಿಸಿದ್ದಾನೆ. ಆದರೆ ಮಾರಾಕಾಸ್ತ್ರಗಳನ್ನು ನೋಡಿದ ಚಾಲಕನಿಗೆ ಇದು ದರೋಡೆ ಗ್ಯಾಂಗ್ ಎಂದು ಅರಿವಾಗಿದೆ. ಅಷ್ಟರಲ್ಲೇ ಕಾರು ಮುಂದೆ ಚಲಿಸದಂತೆ ಗ್ಯಾಂಗ್ ಅಡ್ಡವಾಗಿ ನಿಂತು ಮಾರಕಾಸ್ತ್ರ ತೋರಿಸುತ್ತಾ, ದರೋಡೆಗೆ ಮುಂದಾದರು.
ತಕ್ಷಣವೇ ಸಮಯಪ್ರಜ್ಞೆ ಮೆರೆದೆ ಚಾಲಕ, ರಿವರ್ಸ್ ಗೇರ್ ಹಾಕಿ ಒಂದೇ ಸಮನೆ ಕಾರನ್ನು ಹಿಂದಕ್ಕೆ ತೆಗೆದಿದ್ದಾನೆ. ಅಷ್ಟರಲ್ಲಿ ಯುವಕರು ತಮ್ಮಲ್ಲಿದ್ದ ಮಾರಾಕಾಸ್ತ್ರಗಳನ್ನು ಕಾರಿಗೆ ಎಸೆದಿದ್ದಾರೆ. ಇದರಿಂದ ಕಾರು ಡ್ಯಾಮೇಜ್ ಆಗಿದೆ. ಆದರೆ ಚಾಲಕ ವೇಗವಾಗಿ ರಿವರ್ಸ್ ಹೋಗೋ ಮೂಲಕ ದರೋಡೆ ಗ್ಯಾಂಗ್‌ನಿಂದ ತಪ್ಪಿಸಿಕೊಂಡಿದ್ದಾನೆ.
ಡ್ಯಾಶ್ ಬೋರ್ಡ್ ಕ್ಯಾಮರದಲ್ಲಿ ಈ ಘಟನೆ ದಾಖಲಾಗಿದೆ. ಸಾಮಾಜಿಕ ಮಾಧ್ಯದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಬಳಿಕ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ ಈ ಕುರಿತು ಪೊಲೀಸ್ ಇಲಾಖೆ ಪ್ರಯಾಣಿಕರ ಸುರಕ್ಷತೆಗೆ ಗಮನ ನೀಡಬೇಕು. ಇಷ್ಟೇ ಅಲ್ಲ, ರಾತ್ರಿ ಪ್ರಯಾಣಿಸುವವರೂ ಕೂಡ ಎಚ್ಚರಿಕೆ ವಹಿಸಬೇಕು,.