Asianet Suvarna News Asianet Suvarna News

ಲಾಕ್‌ಡೌನ್ ಕಾರಣ ಕಾರು ತೆಗೆಯುವಂತಿಲ್ಲ; ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ ವಾಹನ ನಿರ್ವಹಣೆಗೆ 7 ಟಿಪ್ಸ್!

  • ಲಾಕ್‌ಡೌನ್ ಕಾರಣ ನಿಲ್ಲಿಸಿದ್ದ ವಾಹನದ ನಿರ್ವಹಣೆ ಹೇಗೆ?
  • ಅನ್‍ಲಾಕ್ ಆಗುವಷ್ಟರಲ್ಲಿ ಕಾರು ಹಾಳಾಗದಂತೆ ನೋಡಿಕೊಳ್ಳಲು ಫೋರ್ಡ್ ಸಲಹೆ
  • ಫೋರ್ಡ್ ಇಂಡಿಯಾ ನೀಡಿದ ಸುಲಭ 7 ಟಿಪ್ಸ್ ವಿವರ ಇಲ್ಲಿವೆ.
Ford Shares Tips on How to Maintain Your Car During Lockdown ckm
Author
Bengaluru, First Published May 27, 2021, 2:18 PM IST

ಬೆಂಗಳೂರು(ಮೇ.27): ಲಾಕ್‍ಡೌನ್ ಕಾರಣ ವಾಹನಗಳನ್ನು ಪಾರ್ಕಿಂಗ್‌‌ನಿಂದ ತೆಗೆಯುವಂತಿಲ್ಲ. ತುರ್ತು ಹಾಗೂ ಅಗತ್ಯವಸ್ತುಗಳ ಖರೀದಿಗೆ ಹೊರತು ಪಡಿಸಿ ವಾಹನ ಓಡಾಟಕ್ಕೆ ಅವಕಾಶವೂ ಇಲ್ಲ. ಹೀಗಾಗಿ ಲಾಕ್‌ಡೌನ್‌ ವೇಳೆ ಪಾರ್ಕ್ ಮಾಡಿರುವ ವಾಹನ ನಿರ್ವಹಣೆ ಸವಾಲಾಗಿದೆ. ಹೆಚ್ಚಿನವರಿಗೆ ವರ್ಕ್ ಫ್ರಮ್ ಹೋಮ್. ಈ ರೀತಿ ಕಾರು ಪಾರ್ಕ್‌ಮಾಡಿದಲ್ಲೇ ನಿಂತಿದ್ದರೆ ವಾಹನ ಕೆಟ್ಟು ಹೋಗಲಿದೆ. ಇದಕ್ಕಾಗಿ ಫೋರ್ಡ್ ಇಂಡಿಯಾ ಮಹತ್ವದ 7 ಸಲಹೆಗಳನ್ನು ನೀಡಿದೆ.  

ಫೋರ್ಡ್ ಅತೀ ಕಡಿಮೆ ನಿರ್ವಹಣಾ ವೆಚ್ಚದ ಕಾರು; ಅಧ್ಯಯನ ವರದಿ ಬಹಿರಂಗ!.

1.   ಕಾರ್ ಶೆಡ್‍ನಲ್ಲಿ ಕಾರು ಪಾರ್ಕ್ ಮಾಡಿ ಅಥವಾ ಕಾರು ಕವರ್ ಬಳಸಿ: ಕಾರು ದೀರ್ಘಕಾಲ ನಿಂತಿರುವಾಗ ಅದನ್ನು ಕಾರು ಶೆಡ್‍ನಲ್ಲಿ ಸುರಕ್ಷಿತವಾಗಿ ಮತ್ತು ಸ್ವಚ್ಛವಾಗಿ ನಿಲ್ಲಿಸಿ. ಶೆಡ್ ಇಲ್ಲದಿದ್ದರೆ ಗುಣಮಟ್ಟದ ಕವರ್ ಕೊಂಡುಕೊಳ್ಳಿ ಅದು ಬಿಸಿಲಿಗೆ ಕಾರು ತುಕ್ಕು ಹಿಡಿಯುವುದು ಹಾಗೂ ಬಣ್ಣ ಕಳೆದುಕೊಳ್ಳುವುದರಿಂದ ರಕ್ಷಿಸುತ್ತದೆ. ಒಳಾಂಗಣದಲ್ಲಿ ಕವರ್ ಬಳಸಬೇಡಿ ಇದರಿಂದ ಮುಖ್ಯವಾಗಿ ಆದ್ರ್ರ ವಾತಾವರಣದಲ್ಲಿ ತೇವಾಂಶ ವೇಗವಾಗಿ ಆವಿಯಾಗುತ್ತದೆ.

2.   ಟೈರ್ ಪ್ರೆಷರ್ ಪರೀಕ್ಷಿಸಿ: ವಾಹನ ಮತ್ತು ರಸ್ತೆಯ ನಡುವೆ ಮೃದುವಾದ ಸಂಪರ್ಕಕ್ಕೆ ಕಾರಿನ ಟೈರುಗಳು ಅತಿಯಾಗಿ ಅಥವಾ ಕಡಿಮೆ ಗಾಳಿ ಹೊಂದುವಂತಿಲ್ಲ. ಕಾರು ದೀರ್ಘಕಾಲ ನಿಂತಿದ್ದರೆ ಟೈರುಗಳ ಒತ್ತಡ ಕಡಿಮೆಯಾಗುತ್ತದೆ. ಆದ್ದರಿಂದ ಟೈರ್ ಪ್ರೆಷರ್ ಅನ್ನು ನಿಯಮಿತವಾಗಿ ಅದರಲ್ಲಿಯೂ ಲಾಕ್‍ಡೌನ್ ಸಮಯದಲ್ಲಿ ಪರೀಕ್ಷಿಸುವುದು ಬಹಳ ಮುಖ್ಯ. ಅಲ್ಲದೆ ವಾಲ್ವ್‍ಗಳು ಮತ್ತು ವಾಲ್ವ್ ಕ್ಯಾಪ್‍ಗಳನ್ನು ಸೋರಿಕೆಗಾಗಿ ಪರೀಕ್ಷಿಸಿ.

ಹೊಚ್ಚ ಹೊಸ ಫೋರ್ಡ್ ಇಕೋಸ್ಪೋರ್ಟ್ ಬಿಡುಗಡೆ; ಹೆಚ್ಚಾಯ್ತು SUV ಪೈಪೋಟಿ!

3.   ಹ್ಯಾಂಡ್‍ಬ್ರೇಕ್ ಬಳಸಬೇಡಿ, ಕಾರನ್ನು ಗೇರ್‌ನಲ್ಲಿ ಪಾರ್ಕ್ ಮಾಡಿರಿ: ಕಾರನ್ನು ದೀರ್ಘಕಾಲ ಪಾರ್ಕ್ ಮಾಡಿರುವಾಗ ಸಮಾನವಾಗಿರುವ ಪ್ರದೇಶ ಕಂಡುಕೊಳ್ಳಿ ಹಾಗೂ ಹ್ಯಾಂಡ್‍ಬ್ರೇಕ್ ಬಳಸುವುದನ್ನು ತಪ್ಪಿಸಿ ಏಕೆಂದರೆ ಬ್ರೇಕ್ ಪ್ಯಾಡ್‍ಗಳು ಮತ್ತು ಡಿಸ್ಕ್/ಡ್ರಮ್ ನಡುವೆ ತುಕ್ಕು ಹಿಡಿದು ಅದು ಜಾಮ್ ಆಗಬಹುದು. ಪರ್ಯಾಯವಾಗಿ ಜಾಣ್ಮೆ ವಹಿಸಿ ಮತ್ತು ವ್ಹೀಲ್ ಚೋಕ್ಸ್ ಬಳಸಿ ಅದು ತಿರುಗುವಂತೆ ಮಾಡಿ ಮತ್ತು ಕಾರನ್ನು ಮೊದಲ ಗೇರ್‍ನಲ್ಲಿರಿಸಿ.

4.   ಫ್ಯೂಯೆಲ್ ಟ್ಯಾಂಕ್ ಭರ್ತಿ ಮಾಡಿ: ಕಾರನ್ನು ಬಳಸದೇ ಇರುವುದರಿಂದ ಉಂಟಾಗುವ ಮತ್ತೊಂದು ಸಮಸ್ಯೆಯೆಂದರೆ ಫ್ಯೂಯೆಲ್ ಟ್ಯಾಂಕ್ ಒಳಗಡೆ ತುಕ್ಕು ಹಿಡಿಯುವುದು. ಕಡಿಮೆ ಇಂಧನದ ಮಟ್ಟವು ಫ್ಯೂಯೆಲ್ ಪಂಪ್ ಮೇಲೆ ಹಾನಿಕಾರಕ ಪರಿಣಾಮ ಬೀರಬಲ್ಲದು. ಅದು ವೇಗವಾಗಿ ಪಂಪ್‍ಗೆ ಹಾನಿಯುಂಟು ಮಾಡಬಲ್ಲದು. ಕಡಿಮೆ ಇಂಧನ ಮಟ್ಟವು ಸವೆತವನ್ನೂ ಉಂಟು ಮಾಡಬಲ್ಲದು. ಆದ್ದರಿಂದ ಕಾರನ್ನು ಗುಣಮಟ್ಟದ ಇಂಧನ ತುಂಬಿ ಇರಿಸಿ ಮತ್ತು ಟ್ಯಾಕ್ ಅನ್ನು ಸರಿಯಾಗಿ ಮುಚ್ಚಿರುವುದನ್ನು ದೃಢಪಡಿಸಿಕೊಳ್ಳಿ.

5.   ಬ್ಯಾಟರಿ ಸಂಪರ್ಕ ತಪ್ಪಿಸಿ: ಕಾರು ಬಳಕೆಯಲ್ಲಿ ಇಲ್ಲದೇ ಇರುವಾಗ ಬ್ಯಾಟರಿ ಸಂಪರ್ಕ ನಿವಾರಿಸುವುದು ಒಳ್ಳೆಯ ಆಲೋಚನೆ. ಟರ್ಮಿನಲ್‍ಗಳು ಮತ್ತು ವೈರ್‍ನ ಅಂಚುಗಳಿಗೆ ಗ್ರೀಸ್ ಹಚ್ಚುವುದು ತುಕ್ಕು ಹಿಡಿಯುವುದನ್ನು ತಡೆಯುತ್ತದೆ. ಪರ್ಯಾಯವಾಗಿ ವಾಹನವನ್ನು ಪ್ರತಿ ನಾಲ್ಕು ಅಥವಾ ಐದನೇ ದಿನ ಸ್ಟಾರ್ಟ್ ಮಾಡಿ ಮತ್ತು ಕೆಲ ನಿಮಿಷಗಳವರೆಗೆ ಎಂಜಿನ್ ಐಡಲ್ ಆಗಿರಿಸಿ ಬ್ಯಾಟರಿ ಸಹಜವಾಗಿ ಕೆಲಸ ಮಾಡುತ್ತಿರುವುದನ್ನು ದೃಢಪಡಿಸಿಕೊಳ್ಳಿ.

6.   ನಿಯಮಿತವಾದ ಮಧ್ಯಂತರದಲ್ಲಿ ಎಂಜಿನ್ ಆಯಿಲ್ ಬದಲಾಯಿಸಿ: ಕಾರಿನ ಆರೋಗ್ಯವು ಪ್ರಮುಖವಾಗಿ ಅದರ ಎಂಜಿನ್ ಆಯಿಲ್ ಗುಣಮಟ್ಟ ಮತ್ತು ಸಮಗ್ರತೆಯಿಂದ ನಿರ್ಧರಿಸಲ್ಪಡುತ್ತದೆ ಅದು ಎಲ್ಲ ಚಲಿಸುವ ಭಾಗಗಳೂ ಚೆನ್ನಾಗಿ ಲ್ಯೂಬ್ರಿಕೇಟ್ ಆಗಿವೆ ಎನ್ನುವುದನ್ನು ದೃಢಪಡಿಸುತ್ತದೆ ಮತ್ತು ಧೂಳು, ಕೊಳೆ ಮತ್ತು ರಾಡಿಯಿಂದ ದೂರವಿರಿಸಿ ಹಾಳಾಗುವುದನ್ನು ಕನಿಷ್ಠಗೊಳಿಸುತ್ತದೆ.

7.   ಒಳಾಂಗಣ ಸ್ವಚ್ಛವಾಗಿರಿಸಿ: ಹೊರಾಂಗಣದಂತೆಯೇ ಕಾರಿನ ಒಳಾಂಗಣವನ್ನು ಸ್ವಚ್ಛವಾಗಿರಿಸುವುದು ಮುಖ್ಯ. ಪ್ರತಿ ನಾಲ್ಕು ಅಥವಾ ಐದನೇ ದಿನ ಕಾರು ಸ್ಟಾರ್ಟ್ ಮಾಡಿ ಮತ್ತು ಎಸಿ ಪ್ರಾರಂಭಿಸಿ ಕ್ಯಾಬಿನ್ ಒಳಗಡೆ ಬ್ಲೋವರ್ ಬಳಸಿ ಧೂಳು ಮತ್ತಿತರೆ ಅಂಶಗಳನ್ನು ನಿವಾರಿಸಿ. ಯಾವುದೇ ಆಹಾರ ವಸ್ತುಗಳನ್ನು ಕಾರಿನಲ್ಲಿ ಇರಿಸಬೇಡಿ ಹಾಗೂ ಕಾರಿನ ಕಿಟಕಿಗಳು ಮುಚ್ಚಿರುವುದನ್ನು ದೃಢಪಡಿಸಿಕೊಳ್ಳಿ.

ಫೋರ್ಡ್‍ಪಾಸ್ ಆ್ಯಪ್ ಗ್ರಾಹಕರಿಗೆ ವಾಹನದ ಆರೋಗ್ಯ ಪರೀಕ್ಷಿಸಲು ಹಾಗೂ ಸ್ಟಾರ್ಟ್/ಸ್ಟಾಪ್, ಲಾಕ್/ಅನ್‍ಲಾಕ್, ಲೊಕೇಟ್ ಯುವರ್ ವೆಹಿಕಲ್ ಇತ್ಯಾದಿ ರಿಮೋಟ್ ಫೀಚರ್‌ಗಳನ್ನು ಅವರ ಫೋರ್ಡ್‍ಪಾಸ್  ವಾಹನದಲ್ಲಿ ಒದಗಿಸುತ್ತದೆ.

Follow Us:
Download App:
  • android
  • ios