ದೀಪಾವಳಿಗೆ ಭರ್ಜರಿ ಗಿಫ್ಟ್, ಎಲೆಕ್ಟ್ರಿಕ್ ವಾಹನ ಖರೀದಿಗೆ 1 ಲಕ್ಷ ರೂ ಸಬ್ಸಡಿ ಘೋಷಿಸಿದ ಯೋಗಿ ಸರ್ಕಾರ!
ದೀಪಾವಳಿ ಹಬ್ಬಕ್ಕೆ ಸಾಮಾನ್ಯವಾಗಿ ಆಟೋಮೊಬೈಲ್ ಕಂಪನಿಗಳು ವಾಹನಗಳ ಮೇಲೆ ಡಿಸ್ಕೌಂಟ್ ಆಫರ್ ನೀಡುತ್ತದೆ. ಈ ಬಾರಿ ಸರ್ಕಾರ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಭರ್ಜರಿ ಡಿಸ್ಕೌಂಟ್ ಆಫರ್ ಮೂಲಕ ಗಿಫ್ಟ್ ನೀಡಿದೆ. ಈ ಕುರಿತು ವಿವರ ಇಲ್ಲಿದೆ.
ಲಖನೌ(ಅ.13): ದೀಪಾವಳಿ ಹಬ್ಬಕ್ಕೆ ಕೆಲ ದಿನಗಳು ಮಾತ್ರ. ಈಗಿನಿಂದಲೇ ಬೆಳಕಿನ ಹಬ್ಬ ಆಚರಿಸಲು ತಯಾರಿಗಳು ಆರಂಭಗೊಂಡಿದೆ. ಇದರ ಬೆನ್ನಲ್ಲೇ ಹಲವು ಆಟೋಮೊಬೈಲ್ ಕಂಪನಿಗಳು ಮಾರಾಟ ಹೆಚ್ಚಿಸಿಕೊಳ್ಳಲು ಡಿಸ್ಕೌಂಟ್ ಆಫರ್ ಘೋಷಣೆಗೆ ಮುಂದಾಗಿದೆ. ಆದರೆ ಇದಕ್ಕಿಂತ ಮೊದಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಭರ್ಜರಿ ದೀಪಾವಳಿ ಗಿಫ್ಟ್ ಘೋಷಿಸಿದೆ. ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಗರಿಷ್ಠ 1 ಲಕ್ಷ ರೂಪಾಯಿ ಸಬ್ಸಡಿ ಆಫರ್ ಘೋಷಿಸಿದೆ. ಇದು ಉತ್ತರ ಪ್ರದೇಶ ಸರ್ಕಾರ ಘೋಷಿಸಿದ ಕೊಡುಗೆಯಾಗಿದೆ. ಇದರಿಂದ ಉತ್ತರ ಪ್ರದೇಶದಲ್ಲಿ ದೀಪಾವಳಿಗೆ ಎಲೆಕ್ಟ್ರಿಕ್ ವಾಹನ ಖರೀದಿಸುವ ಮಂದಿಗೆ ಕಡಿಮೆ ಬೆಲೆಯಲ್ಲಿ ವಾಹನ ಲಭ್ಯವಾಗಲಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಶೂನ್ಯ ಕಾರ್ಬನ್ ಗುರಿ ತಲುಪಲು ಮಹತ್ವದ ಕೂಡುಗೆ ನೀಡಲಾಗಿದೆ. ದ್ವಿಚಕ್ರ ವಾಹನ, ಮೂರು ಚಕ್ರದ ವಾಹನ, ಕಾರು ಹಾಗೂ ಬಸ್‌ಗಳಿಗೆ ಬೇರೆ ಬೇರೆ ಸಬ್ಸಡಿ ಆಫರ್ ನೀಡಲಾಗಿದೆ.
ಎಲೆಕ್ಟ್ರಿಕ್ ಬಸ್(Electric Bus) ಖರೀದಿಸುವವರಿಗೆ ಬರೋಬ್ಬರಿ 20 ಲಕ್ಷ ರೂಪಾಯಿ ಸಬ್ಸಡಿ(EV Subsidy) ನೀಡಲಾಗುತ್ತದೆ ಎಂದು ಯೋಗಿ ಆದಿತ್ಯನಾಥ್(Yogi Adityanath) ಘೋಷಿಸಿದ್ದಾರೆ. ಆರಂಭಿಕ 400 ಬಸ್‌ಗಳಿಗೆ ಈ ಸಬ್ಸಡಿ ಆಫರ್ ಅನ್ವಯವಾಗಲಿದೆ. ಇದು ಭಾರದದಲ್ಲಿ ನೀಡಲಾಗಿರುವ ಅತ್ಯಂತ ಗರಿಷ್ಠ ಸಬ್ಸಡಿ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ(Electric Vehicle) ಖರೀದಿಸುವವರಿಗೆ ಶೇಕಡಾ 15 ರಷ್ಟು ಸಬ್ಸಡಿ ಘೋಷಿಸಲಾಗಿದೆ. ಅಂದರೆ ಗರಿಷ್ಠ 5,000 ರೂಪಾಯಿ ಸರ್ಕಾರದಿಂದ ಸಬ್ಸಿಡಿ ದೊರೆಯಲಿದೆ. ಈ ಸಬ್ಸಿಡಿ ಕೊಡುಗೆ ಆರಂಭಿಕ 2 ಲಕ್ಷ ದ್ವಿಚಕ್ರ ವಾಹನಗಳಿಗೆ ಅನ್ವಯಿಸಲಿದೆ. ಇನ್ನು ಮೂರು ಚಕ್ರದ ಎಲೆಕ್ಟ್ರಿಕ್ ವಾಹನ ಖರೀದಿ 12,000 ರೂಪಾಯಿ ಸಬ್ಸಡಿ(Uttar Pradesh Govt) ಘೋಷಿಸಲಾಗಿದೆ. ಈ ಆಫರ್ ಆರಂಭಿಕ 50,000 ತ್ರಿಚಕ್ರವಾಹನಗಳ ಖರೀದಿಗೆ ಅನ್ವಯಸಲಿದೆ.
ಯೋಗಿಯೇ ಈ ದೇಶದ ಮುಂದಿನ ಬಲಿಷ್ಠ ಪ್ರಧಾನಿ; ಅನಿರುಧ್ ಮಿಶ್ರಾ ಭವಿಷ್ಯ!
ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ 1 ಲಕ್ಷ ರೂಪಾಯಿ ಸರ್ಕಾರದಿಂದ ಸಬ್ಸಡಿ ಸಿಗಲಿದೆ. ಅಂದರೆ ಇತ್ತೀಚೆಗೆ ಬಿಡುಗಡೆಯಾದ ಟಾಟಾ ಟಿಯಾಗೋ ಎಲೆಕ್ಟ್ರಿಕ್ ವಾಹನದ ಬೆಲೆ 8.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಯೋಗಿ ಸರ್ಕಾರದ ಸಬ್ಸಿಡಿ ಬಳಿಕ ಈ ಬೆಲೆ 7.49 ಲಕ್ಷ ರೂಪಾಯಿ ಆಗಲಿದೆ. ಅತೀ ಕಡಿಮೆ ಬೆಲೆಗೆ ಎಲೆಕ್ಟ್ರಿಕ್ ಕಾರು ಲಭ್ಯವಾಗಲಿದೆ. ಈ ಆಫರ್ ಆರಂಭಿಕ 25,000 ಎಲೆಕ್ಟ್ರಿಕ್ ಕಾರುಗಳ ಖರೀದಿಗೆ ಅನ್ವಯಸಲಿದೆ.
ಇದರೊಂದಿಗೆ ಈಗಾಗಲೇ ಉತ್ತರ ಪ್ರದೇಶದ ಸರ್ಕಾರಿ ನೌಕರರು ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜಿಸಲು ಹಲವು ಕೂಡುಗೆಗಳನ್ನು ನೀಡಲಾಗಿದೆ. ಸುಲಭ ಹಾಗೂ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ಸೇರಿದಂತೆ ಹಲವು ಕೊಡುಗಳಳನ್ನು ನೀಡಲಾಗಿದೆ. ಇದೀಗ ದೀಪಾವಳಿ ಹಬ್ಬಕ್ಕೆ ಜನ ಸಾಮಾನ್ಯರಿಗೆ ಹೊಸ ಕೊಡುಗೆ ಘೋಷಿಸಲಾಗಿದೆ. ಇದರ ಜೊತೆಗೆ ಯೋಗಿ ಆದಿತ್ಯನಾಥ್ ಸರ್ಕಾರ ಉತ್ತರ ಪ್ರದೇಶದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆ, ವಿತರಣೆಗೆ ಹೆಚ್ಚಿನ ಆದ್ಯತೆ ನೀಡಿದೆ. ಇದರಿಂದ ಕೆಲ ಪ್ರತಿಷ್ಠಿತ ಕಂಪನಿಗಳು ಉತ್ತರ ಪ್ರದೇಶದಲ್ಲಿ ಎಲೆಕ್ಟ್ರಿಕ್ ಉತ್ಪಾದನಾ ಘಟಕಕ್ಕೆ ಹೂಡಿಕೆ ಮಾಡಿದೆ.
ತಮಿಳುನಾಡಿನಲ್ಲಿ ವಕ್ಫ್ ಆಸ್ತಿ ಕಬಳಿಸಿದ ಬೆನ್ನಲ್ಲೇ ಅಲರ್ಟ್ ಆದ ಯೋಗಿ , ಕೆರಳಿದ ಒವೈಸಿ!