ಚೀನಾದ ಟೋವಿಂಗ್ ರೋಬೋಟ್ ವಾಹನ ವಿಡಿಯೋ ವೈರಲ್ ಆಗಿದೆ. ನಿಯಮ ಮೀರಿ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡಿದರೆ ಈ ರೋಬೋಟ್ ವಾಹನದ ಮೂಲಕ ಸುಲಭವಾಗಿ ಹಾಗೂ ವಾಹನಕ್ಕೆ ಯಾವುದೇ ಸಮಸ್ಯೆಯಾಗದಂತೆ ಟೋ ಮಾಡಲಾಗುತ್ತದೆ. ಆದರೆ ಬೆಂಗಳೂರಲ್ಲಿ ಈ ರೋಬೋ ವಾಹನ ವರ್ಕ್ ಆಗಲ್ಲ ಎಂದು ಕೆಲ ಕಾರಣವನ್ನೂ ನೀಡಿದ್ದಾರೆ. 

ಬೀಜಿಂಗ್(ನ.07) ಎಲ್ಲೆಂದೆಡೆ ಪಾರ್ಕಿಂಗ್ ಮಾಡಿದ ವಾಹನಗಳನ್ನು ಟ್ರಾಫಿಕ್ ಪೊಲೀಸರು ಟೋ ಮಾಡುತ್ತಾರೆ. ಬೆಂಗಳೂರಿನಲ್ಲಿನ ಟೋ ಹೆಸರಿನಲ್ಲಿ ಕೆಲ ಅಕ್ರಮಗಳು ನಡೆದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಇನ್ನೋ ಟೋ ವೇಳೆ ವಾಹನಕ್ಕೆ ಹಾನಿ ಸೇರಿದಂತೆ ಹಲವು ಆರೋಪಗಳು ಎದುರಾಗಿತ್ತು. ಈ ಎಲ್ಲಾ ಸಮಸ್ಯಗಳಿಗೆ ಮುಕ್ತಿ ಎಂಬಂತೆ ಚೀನಾದಲ್ಲಿ ರೋಬೋಟ್ ಟೋ ವಾಹನ ಅಭಿವೃದ್ಧಿಪಡಿಸಲಾಗಿದೆ. ಸುಲಭವಾಗಿ ವಾಹನಕ್ಕೆ ಹಾನಿಯಾಗದಂತೆ ವಾಹನಗಳನ್ನು ಟೋ ಮಾಡಲು ಈ ಮೂಲಕ ಸಾಧ್ಯವಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಈ ರೋಬೋ ಟೋ ವಾಹನ ಬೆಂಗಳೂರಲ್ಲಿ ವರ್ಕ್ ಆಗಲ್ಲ ಎಂದಿದ್ದಾರೆ.

ಚೀನಾ ಅಭಿವೃದ್ಧಿಪಡಿಸಿರುವುದು ರೋಬೋಟ್ ಟೋವಿಂಗ್ ವಾಹನ. ರಿಮೂಟ್ ಮೂಲಕ ಈ ಟೋವಿಂಗ್ ವಾಹನ ನಿಯಂತ್ರಣ ಮಾಡಬೇಕು. ಅತೀ ಸಣ್ಣ ಈ ಟೋವಿಂಗ್ ವಾಹನ ಕಾರಿನ ಅಡಿ ಭಾಗದಿಂದ ತೆರಳಿ ನಿಂತಿದ್ದ ಕಾರಿನ ಚಕ್ರ ಲಾಕ್ ಮಾಡಲಿದೆ. ಬಳಿಕ ಟೋವಿಂಗ್ ವಾಹನದ ಸಣ್ಣ ಚಕ್ರಗಳ ಮೂಲಕ ದೊಡ್ಡ ಗಾತ್ರದ ವಾಹನವನ್ನು ಎಳೆದು ತರಲಿದೆ.

ಮಾಲೀಕನ ಸಮೇತ ಸ್ಕೂಟರ್ ಟೋಯಿಂಗ್ ಮಾಡಿದ ಅಧಿಕಾರಿಗಳು: ವಿಡಿಯೋ ವೈರಲ್‌

ಈ ಟೋವಿಂಗ್ ವಾಹನದಲ್ಲಿ ಎಲೆಕ್ಟ್ರಿಕ್ ಮೋಟಾರ್ ಹಾಗೂ ಬ್ಯಾಟರಿ ಬಳಸಲಾಗಿದೆ. ಅದೆಷ್ಟೇ ದೊಡ್ಡ ಕಾರುಗಳನ್ನು ಈ ರೋಬೋ ವಾಹನ ಹೊತ್ತುಕೊಂಡು ಸಾಗಲಿದೆ. ಪೊಲೀಸರು ರಿಮೂಟ್ ಮೂಲಕ ವಾಹನಗಳನ್ನು ಪೊಲೀಸ್ ಠಾಣೆಗೆ ತರಲು ಸಾಧ್ಯವಿದೆ. ಇದರಿಂದ ವಾಹನಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇನ್ನು ಪೊಲೀಸರು ಒಂದಷ್ಟ ಟೋವಿಂಗ್ ಮಾಡುವವರನ್ನು ಕರೆದುಕೊಂಡು ಬಂದು ವಾಹನ ಎತ್ತಿ ಹಾಕಿ ಧರಧರನೇ ಎಳೆದುಕೊಂಡು ಹೋಗುವ ಅಗತ್ಯವೂ ಇಲ್ಲ. 

Scroll to load tweet…

ಚೀನಾದ ತಂತ್ರಜ್ಞಾನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ವೇಳೆ ಈ ತಂತ್ರಜ್ಞಾನ ಬೆಂಗಳೂರಿನಲ್ಲಿ ಜಾರಿಗೊಳಿಸದರೆ ಉತ್ತಮವೇ ಅನ್ನೋ ಚರ್ಚೆಗಳು ಸಾಮಾಜಿಕ ಮಾಧ್ಯಮದಲ್ಲಿ ಶುರುವಾಗಿದೆ. ಬಹುತೇಕರು ಈ ರೋಬೋ ಟೋ ವಾಹನ ಬೆಂಗಳೂರಿನಲ್ಲಿ ವರ್ಕೌಟ್ ಆಗಲ್ಲ ಎಂದಿದ್ದಾರೆ.ಇದಕ್ಕೆ ಹಲವು ಕಾರಣಗಳನ್ನು ನೀಡಿದ್ದಾರೆ.

ಟೋಯಿಂಗ್‌ಗೆ ಬ್ರೇಕ್‌ ಹಾಕಿದ ಸರ್ಕಾರ: ನಿಟ್ಟುಸಿರು ಬಿಟ್ಟ ಸಿಲಿಕಾನ್‌ ಸಿಟಿ ಮಂದಿ..!

ರೋಬೋ ಟೋ ವಾಹನ ಅತೀ ಸಣ್ಣ ಚಕ್ರಗಳನ್ನು ಹೊಂದಿದೆ. ಬೆಂಗಳೂರು ರಸ್ತೆಯಲ್ಲಿ ಈ ವಾಹನ 100 ಮೀಟರ್ ಚಲಿಸುವುದಲ್ಲ. ಬಹುತೇಕ ರಸ್ತೆಗಳು ಗುಂಡಿಗಳಿಂದ ತುಂಬಿದೆ. ಇನ್ನು ಸಾವಿರ ಹಂಪ್‌ಗಳಿಗೆ. ಹೀಗಾಗಿ ರೋಬೋವಾಹನದಲ್ಲಿ ನಿಂತರುವ ಪಕ್ಕಕ್ಕೆ ಸರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಹೀಗಾಗಿ ಬೆಂಗಳೂರನಲ್ಲಿ ಇಂತಹ ತಂತ್ರಜ್ಞಾನ ಕಾರ್ಯಾರಂಭಿಸಲು ಇಲ್ಲಿನ ಮೂಲಭೂತ ಸೌಕರ್ಯಗಳು ಆ ಮಟ್ಟಕ್ಕೆ ಬೆಳೆದಿಲ್ಲ ಎಂದಿದ್ದಾರೆ.