Asianet Suvarna News Asianet Suvarna News

43 ವರ್ಷದ ಬಳಿಕ ಡ್ರೈವಿಂಗ್ ಟೆಸ್ಟ್ ಪಾಸ್ ಆದ ಬಾಲಿವುಡ್ ನಟ, ನಿಮ್ಮ ಡಿಎಲ್ ಕ್ಯಾನ್ಸಲ್ ಎಂದಿದ್ಯಾಕೆ?

ಬಾಲಿವುಡ್ ನಟ ಚಂಕಿ ಪಾಂಡೆ ಕಳೆದ 43 ವರ್ಷಗಳಿಂದ ಸತತ ಪ್ರಯತ್ನ ಮಾಡಿದ್ದಾರೆ. ಆದರೆ ಡ್ರೈವಿಂಗ್ ಟೆಸ್ಟ್ ಪಾಸ್ ಆಗಿರಲಿಲ್ಲ. ಆದರೆ ಪ್ರಯತ್ನ ಮಾತ್ರ ಬಿಟ್ಟಿರಲಿಲ್ಲ. ಕೊನೆಗೆ ಡ್ರೈವಿಂಗ್ ಟೆಸ್ಟ್ ಪಾಸ್ ಮಾಡಿ ನಿಟ್ಟುಸಿರು ಬಿಟ್ಟಿದ್ದಾರೆ.
 

Bollywood actor chunky pandey pass driving test after 43 years ckm
Author
First Published Sep 15, 2024, 6:11 PM IST | Last Updated Sep 15, 2024, 6:11 PM IST

ಮುಂಬೈ(ಸೆ.15) ಬಾಲಿವುಡ್ ನಟ ಚಂಕಿ ಪಾಂಡೆ ಬಳಿಕ ಐಷಾರಾಮಿ ಕಾರುಗಳಿವೆ. ಆದರೆ ಇದುವರೆಗೂ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ಹಲವು ಬಾರಿ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಪರೀಕ್ಷೆ ಬರೆದಿದ್ದಾರೆ. ಆದರೆ ಚಂಕಿ ಪಾಂಡೆ ಪಾಸ್ ಆಗಲೇ ಇಲ್ಲ. ಹೀಗೆ ಪ್ರಯತ್ನ ಕಳೆದ 43 ವರ್ಷಗಳಿಂದ ನಡೆಯುತ್ತಲೇ ಇತ್ತು. ಕೊನೆಗೂ ಚಂಕಿ ಪಾಂಡೆ ಡ್ರೈವಿಂಗ್ ಟೆಸ್ಟ್ ಪಾಸ್ ಆಗಿದ್ದಾರೆ. ಈ ಕುರಿತು ಸ್ವತಃ ಚಂಕಿ ಪಾಂಡೆ ಸಂಭ್ರಮ ಹಂಚಿಕೊಂಡಿದ್ದಾರೆ.

ಚಂಕಿ ಪಾಂಡೆ ಕಾರು ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದರೆ, ಮುಂಬೈ ಪೊಲೀಸರು ಕೋ ಡ್ರೈವರ್ ಸೀಟಿನಲ್ಲಿ ಕುಳಿತು ಪರೀಕ್ಷೆ ನಡೆಸಿದ್ದಾರೆ. ಡ್ರೈವಿಂಗ್ ಟೆಸ್ಟ್ ಪಾಸ್ ಆಗುತ್ತಿದ್ದಂತೆ ಚಂಕಿ ಪಾಂಡೆ ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ಪೊಲೀಸರ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಚಂಕಿ ಪಾಂಡೆ 43 ವರ್ಷದ ಬಳಿಕ ಡ್ರೈವಿಂಗ್ ಟೆಸ್ಟ್ ಪಾಸ್ ಆಗಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಮುಂಬೈ ಆರ್‌ಟಿಒ ಧನ್ಯವಾದ ತಿಳಿಸಿದ್ದಾರೆ.

ನಿರ್ದೇಶಕರ ಪೈಜಾಮ ಬಿಚ್ಚಲು ಮಾಡಿದ ಸಹಾಯಕ್ಕಾಗಿ ಸಿನಿಮಾದಲ್ಲಿ ಅವಕಾಶ ಪಡೆದ ಅನನ್ಯಾ ಪಾಂಡೆ ಅಪ್ಪ

ಚಂಕಿ ಪಾಂಡೆ ಕಾರು ಡ್ರೈವಿಂಗ್ ತಿಳಿದಿದ್ದರೂ ಲೈಸೆನ್ಸ್ ಇರಲಿಲ್ಲ. 43 ವರ್ಷದ ಹಿಂದೆ ಕಾರು ಲೈಸೆನ್ಸ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಡ್ರೈವಿಂಗ್ ಟೆಸ್ಟ್‌ನಲ್ಲಿ ಫೇಲ್ ಆಗಿದ್ದರು. ಬಳಿಕ ಚಂಕಿ ಪಾಂಡೆ ಲೈಸೆನ್ಸ್ ಇಲ್ಲದೆ ಇದುವರೆಗೂ ತಿರುಗಾಡಿದ್ದಾರೆ. ಬಹುತೇಕ ಚಂಕಿ ಪಾಂಡೆ ಡ್ರೈವರ್ ಕಾರು ಓಡಿಸಿದ್ದಾರೆ. ಈ ಫೋಟೋ ಹಂಚಿಕೊಂಡ ಬೆನ್ನಲ್ಲೇ ಹಲವು ಬಾಲಿವುಡ್ ಸೆಲೆಬ್ರೆಟಿಗಳು ಕಮೆಂಟ್ ಮಾಡಿದ್ದಾರೆ. ಈ ಪೈಕಿ ನಟಿ ಸೋನಮ್ ಖಾನ್ ಕಮೆಂಟ್ ಭಾರಿ ವೈರಲ್ ಆಗಿದೆ.ಅಭಿನಂದನೆಗಳು ಚಂಕಿ ಪಾಂಡೆ, ಹಾಗಾದರೆ ಇಲ್ಲೀವರೆಗೆ ಡ್ರೈವಿಂಗ್ ಗೊತ್ತಿರಲಿಲ್ಲವೇ? ದೇವರೆ ನಿನಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು, ಚಂಕಿ ಪಾಂಡೆ ಜೊತೆ ನನಗೆ ಯಾವುದೇ ಕಾರಿನಲ್ಲಿ ತೆರಳುವ ಸೀನ್ ಇರಲಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

 

 

ಈ ಫೋಟೋಗೆ ಕಮೆಂಟ್ ಹಾಕಿದ ಅಭಿಮಾನಿಯೊರ್ವ, ಡ್ರೈವಿಂಗ್ ಸೀಟಿನಲ್ಲಿ ಕುಳಿತ ಚಂಕಿ ಪಾಂಡೆ, ಪಕ್ಕದಲ್ಲಿ ಕುಳಿತ ಆಫೀಸರ್ ಇಬ್ಬರೂ ಸೀಟ್ ಬೆಲ್ಟ್ ಹಾಕಿಲ್ಲ. ಇಬ್ಬರ ಲೈಸೆನ್ಸ್ ಕ್ಯಾನ್ಸಲ್ ಎಂದು ಕಮೆಂಟ್ ಮಾಡಿದ್ದಾರೆ. ಸೀಟ್ ಬೆಲ್ಟ್ ಹಾಕದೇ ಪಾಸ್ ಆದ್ರಾ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇಷ್ಟು ವರ್ಷ ಯಾವ ಧೈರ್ಯದಲ್ಲಿ ಕಾರು ಚಲಾಯಿಸಿದ್ದೀರಿ ಎಂದು ಹಲವರು ಪ್ರಶ್ನಿಸಿದ್ದಾರೆ.

 ಅನೇಕ ಮಹಿಳೆಯರ ಜೊತೆ ಸಂಬಂಧ ಹೊಂದಿದ್ದರು; ಪತಿ ಚಂಕಿ ಪಾಂಡೆ ಡೇಟಿಂಗ್ ವಿಚಾರ ಬಿಚ್ಚಿಟ್ಟ ಅನನ್ಯಾ ಪಾಂಡೆ ತಾಯಿ
 

Latest Videos
Follow Us:
Download App:
  • android
  • ios