ಅಪಘಾತದಲ್ಲಿ ದ್ವಿಚಕ್ರ ವಾಹನ ಸಾವರರು, ರೈಡರ್ ಅಪಾಯದ ಪ್ರಮಾಣ ಹೆಚ್ಚು. ಸುರಕ್ಷತಾ ಹೆಲ್ಮೆಟ್ ಇದ್ದರೂ ಸಾವಿನ ನೋವಿನ ಪ್ರಮಾಣ ಹೆಚ್ಚು. ಇದೀಗ ಹೊಸ ಹೆಲ್ಮೆಟ್ ಬರುತ್ತಿದೆ. ಬೈಕ್‌ನಿಂದ ಬೀಳುತ್ತಿದ್ದಂತೆ, ಅಪಘಾತವಾಗುತ್ತಿದ್ದಂತೆ ಇಡೀ ದೇಹವನ್ನು ಹೆಲ್ಮೆಟ್‌ನ ಏರ್‌ಬ್ಯಾಗ್ ಕವರ್ ಮಾಡುತ್ತದೆ. ಈ ವಿಡಿಯೋ ನಿಜವೇ?

ಬೀಜಿಂಗ್ (ನ.18) ಪ್ರಯಾಣಿಕರ ಸುರಕ್ಷತಗೆ ಹಲವು ಕಾನೂನು, ಇತ್ತ ಆಟೋಮೊಬೈಲ್ ಕಂಪನಿಗಳ ತಂತ್ರಜ್ಞಾನ, ಇತರ ಸುರಕ್ಷತಾ ಕವಚಗಳನ್ನು ಬಳಸುತ್ತಿದೆ. ಆದರೂ ಅಪಘಾತದ ವೇಳೆ ಸಾವು ನೋವಿನ ಪ್ರಮಾಣ ಹೆಚ್ಚಾಗುತ್ತಿದೆ. ದಿಚಕ್ರ ವಾಹನ ಸವಾರರ ಸುರಕ್ಷತೆಗೆ ಹೆಲ್ಮೆಟ್ ಕಡ್ಡಾಯ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಹೆಲ್ಮೆಟ್ ಕುರಿತ ವಿಡಿಯೋ ಒಂದು ಭಾರಿ ಚರ್ಚೆಯಾಗುತ್ತಿದೆ. ದ್ವಿಚಕ್ರ ವಾಹನ ಸವಾರರಿಗೆ ಏರ್‌ಬ್ಯಾಗ್ ಹೆಲ್ಮೆಟ್ ಮೂಲಕ ಹೆಚ್ಚಿನ ಸುರಕ್ಷತೆ ಒದಗಿಸುವ ಹೆಲ್ಮೆಟ್ ಇದಾಗಿದೆ. ಅಪಘಾತವಾದಾಗ, ಬಿದ್ದಾಗ ತಕ್ಷಣ ಈ ಹೆಲ್ಮೆಟ್‌ನ ಏರ್‌ಬ್ಯಾಗ್ ಇಡೀ ತಲೆ ಸೇರಿದಂತೆ ಇಡೀ ದೇಹವನ್ನು ಕವರ್ ಮಾಡಿ ಸುರಕ್ಷತೆ ನೀಡುತ್ತದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ. ಆದರೆ ಈ ವಿಡಿಯೋ ಅಸಲಿ ಅಲ್ಲ, ನಕಲಿ ಅನ್ನೋ ಮಾತುಗಳು ಕೇಳಿಬಂದಿದೆ.

ಏನಿದು ಹೊಸ ಏರ್ ಬ್ಯಾಗ್ ಹೆಲ್ಮೆಟ್

ಚೀನಾದಲ್ಲಿ ಹೊಸ ತಂತ್ರಜ್ಞಾನದ ಹೆಲ್ಮೆಟ್ ಪರೀಕ್ಷೆ ನಡೆಯಿತ್ತಿದೆ ಎಂದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ರೈಡರ್ ಓಬ್ಬ ವೇಗವಾಗಿ ಬೈಕ್ ರೈಡಿಂಗ್ ಮಾಡುತ್ತಾ ಬರುತ್ತಿದ್ದಾನೆ. ಪರೀಕ್ಷಾರ್ಥವಾಗಿ ಹಲವು ಮಾಧ್ಯಮಗಳು, ವ್ಲಾಗರ್ಸ್ ಚಿತ್ರೀಕರಣಕ್ಕೆ ನಿಂತಿದ್ದಾರೆ. ವೇಗವಾಗಿ ಬಂದ ಬೈಕ್ ರಸ್ತೆ ಗುಂಡಿಗೆ ತಾಗಿ ರೈಡರ್ ರಸ್ತೆ ಮೇಲೆ ಬೀಳುತ್ತಾನೆ. ಆದರೆ ರೈಡರ್ ಬೀಳುತ್ತಿದ್ದಂತೆ ಹೆಲ್ಮೆಟ್‌ನ ಏರ್‌ಬ್ಯಾಗ್ ತೆರೆದುಕೊಳ್ಳುತ್ತದೆ. ರೈಡರ್‌ನ ತಲೆಯಿಂದ ಇಡೀ ದೇಹವನ್ನು ಆವರಿಸುವ ಏರ್‌ಬ್ಯಾಗ್ ರೈಡರ್‌ಗೆ ಸಂಪೂರ್ಣ ಸುರಕ್ಷತೆ ನೀಡುತ್ತದೆ. ಕೆಲವೇ ಹೊತ್ತಲ್ಲಿ ಬೈಕ್ ಸವಾರ ಏರ್ ಬ್ಯಾಗ್ ಒಳಗಿನಿಂದ ಹೊರಬರುತ್ತಾನೆ. ಯಾವುದೇ ಗಾಯಗಳಿಲ್ಲದೆ, ಅತ್ಯಂತ ಸುರಕ್ಷಿತವಾಗಿ ಹೊರಬರುತ್ತಿರುವ ವಿಡಿಯೋ ಇದಾಗಿದೆ

ಜಂಟಿ ಕಂನಿಗಳ ಪ್ರಯೋಗ ನಿಜವೆ

ಈ ವಿಡಿಯೋ ಕುರಿತು ಸತ್ಯಾಸತ್ಯತೆ ಇನ್ನಷ್ಟೇ ಹೊರಬರಬೇಕಿದೆ. ಆದರೆ ಈ ಕುರಿತ ಹೆಲ್ಮೆಟ್ ಚೀನಾದಲ್ಲಿ ಅಭಿವೃದ್ಧಿಯಾಗುತ್ತಿದೆ ಅನ್ನೋ ವರದಿಗಳಿವೆ. ಲ್ಯಾನ್‌ಕ್ಸಿ ಯೆಮಾ ಮೋಟರ್‌ಸೈಕಲ್ ಫಿಟ್ಟಿಂಗ್ಸ್ ಕಂಪನಿ ಹಾಗೂ ಯಾನ್‌ಫೆಂಗ್ ಆಟೋಮೊಟಿವ್ ಕಂಪನಿ ಜಂಟಿಯಾಗಿ ಏರ್‌ಬ್ಯಾಗ್ ಹೆಲ್ಮೆಟ್ ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಚೀನಾದ ಲ್ಯಾನ್‌ಕ್ಸಿ ಕಂಪನಿ ಚೀನಾದ ಅತೀ ದೊಡ್ಡ ಹೆಲ್ಮೆಟ್ ತಯಾರಕ ಕಂಪನಿ. ಇನ್ನು ಯಾನ್‌ಫೆಂಗ್ ಕಾರು ಸೇರಿದಂತೆ ವಾಹನಗಳ ಏರ್‌ಬ್ಯಾಗ್ ನಿರ್ಮಾಣ ಕಂಪನಿಯಾಗಿದೆ. ಈ ಕಂಪನಿಗಳು ಅತ್ಯಂತ ಸುರಕ್ಷಿತ ಹಾಗೂ ರೈಡರ್‌ಗೆ ಯಾವುದೇ ರೀತಿ ಗಾಯಗಳಾಗದಂತೆ ತಡೆಯುವ ಹೆಲ್ಮೆಟ್ ಅಭಿವೃದ್ಧಪಡಿಸುತ್ತಿದೆ ಅನ್ನೋ ಕುರಿತು ಹಲವು ವರದಿಗಳಿವೆ.

ಆದರೆ ಈ ಎರಡು ಕಂಪನಿಗಳು ಈ ವಿಡಿಯೋ ಕುರಿತು, ಹೆಲ್ಮೆಟ್ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇಷ್ಟೇ ಅಲ್ಲ ಇದು ಚೀನಾ ಅಭಿವೃದ್ಧಿಪಡಿಸುತ್ತಿರುವ ಹೆಲ್ಮೆಟ್ ಎಂದು ವಿಡಿಯೋ ಹರಿದಾಡುತ್ತಿದೆ. ಆದರೆ ಈ ವಿಡಿಯೋದಲ್ಲಿರುವ ಹೆಲ್ಮೆಟ್ ಬ್ರ್ಯಾಂಡ್‌ನ ಲೋಗೋ ಇಟಲಿಯ ಎಜಿವಿ ಲೋಗೋ ಇದೆ. ಸವಾರನ ಜಾಕೆಟ್ ಕೂಟ ಇಟಲಿ ಬ್ರ್ಯಾಂಡ್ ಆಗಿದೆ. ಹೀಗಾಗಿ ಇದು ಎಐ ಸೃಷ್ಟಿಸಿದ ವಿಡಿಯೋ ಎಂದು ಹಲವರು ವಾದಿಸಿದ್ದಾರೆ.

ಇಟಲಿಯಲ್ಲಿ ಹೆಲ್ಮೆಟ್ ಏರ್‌ಬ್ಯಾಗ್ ಪರೀಕ್ಷೆಗಳು ನಡೆದಿದೆ. ಆದರೆ ಸದ್ಯ ಹರಿದಾಡುತ್ತಿರುವ ವಿಡಿಯೋ ಅಸಲಿ ಎಂದು ಹೇಳುವ ಯಾವುದೇ ಅಧಿಕೃತ ಪ್ರಕಟಣೆಯಾಗಲಿ, ಮಾಹಿತಿಯಾಗಲ್ಲ ಲಭ್ಯವಿಲ್ಲ.

Scroll to load tweet…