ಭಾರತದ ಮೊದಲ ಆ್ಯಪಲ್ ಸ್ಟೋರ್ ಸಿಬ್ಬಂದಿ ಸ್ಯಾಲರಿ ಮಾಹಿತಿ ಕೇಳಿದರೆ ತಲೆ ತಿರುಗುತ್ತೆ!

ಇತ್ತೀಚೆಗೆ ಭಾರತದಲ್ಲಿ ಮೊಟ್ಟ ಮೊದಲ ಆ್ಯಪಲ್ ಸ್ಟೋರ್ ಉದ್ಘಾಟನೆಗೊಂಡಿದೆ. ಈ ಮಳಿಗೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ತಿಂಗಳ ಸ್ಯಾಲರಿ ಮಾಹಿತಿ ಬಹಿರಂಗಗೊಂಡಿದೆ. ಸಾಮಾನ್ಯ ಮಳಿಗೆಗೂ ಆ್ಯಪಲ್ ಸ್ಟೋರ್‌ಗೆ ಇರುವ ವ್ಯತ್ಯಾಸ ಸಂಬಳದಲ್ಲೇ ಸ್ಪಷ್ಟವಾಗಿದೆ.

Apple store mumbai and Delhi employees earns RS 1 lakh per month higher than other tech brand retails ckm

ಮುಂಬೈ(ಏ.26): ಭಾರತದಲ್ಲಿ ಆ್ಯಪಲ್ ತನ್ನ ಮೊದಲ ಆ್ಯಪಲ್ ಸ್ಟೋರ್ ಆರಂಭಿಸಿದೆ. ಮುಂಬೈನ ಬಾಂದ್ಲಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ನೂತನ ಆ್ಯಪಲ್ ಮಳಿಗೆ ತೆರೆಯಲಾಗಿದೆ. ಸ್ವತಃ ಆ್ಯಪಲ್ ಸಿಇಒ ಟಿಮ್ ಕುಕ್ ಈ ಮಳಿಗೆ ಉದ್ಘಾಟನೆ ಮಾಡಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಭಾರತದ ಮೊದಲ ಆ್ಯಪಲ್ ಸ್ಟೋರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡಿತ್ತು. ಭಾರತದಲ್ಲಿ ಆ್ಯಪಲ್ ವ್ಯವಹಾರ ವಿಸ್ತರಣೆ ಭಾಗವಾಗಿ ಮಳಿಗೆ ಆರಂಭಗೊಂಡಿದೆ. ಸಾಮಾನ್ಯ ಮಳಿಗೆಯಲ್ಲಿನ ಸಿಬ್ಬಂದಿಗಳ ವೇತನ ಗರಿಷ್ಠ ಅಂದರೆ 35 ಸಾವಿರ ದಾಟಲ್ಲ. ಆದರೆ ಇತ್ತೀಚೆಗೆ ಉದ್ಘಾಟನೆಗೊಂಡ ಆ್ಯಪಲ್ ಸ್ಟೋರ್ ಸಿಬ್ಬಂದಿಗಳ ವೇತನ ತಿಂಗಳಿಗೆ ಬರೋಬ್ಬರಿ 1 ಲಕ್ಷ ರೂಪಾಯಿ. 

ಆ್ಯಪಲ್ ಸ್ಟೋರ್‌ನಲ್ಲಿರುವ ಸಾಮಾನ್ಯ ಸಿಬ್ಬಂದಿಯ ಸ್ಯಾಲರಿ 1 ಲಕ್ಷ ರೂಪಾಯಿ ಪ್ರತಿ ತಿಂಗಳಿಗೆ. ಇನ್ನು ಮ್ಯಾನೇಜರ್ ಲೆವೆಲ್, ಟೀಮ್ ಲೀಡರ್ , ಅನುಭವಿಗಳ ವೇತನ ದುಪ್ಪಟ್ಟು. ಈಗಾಗಲೇ 170 ಸಿಬ್ಬಂದಿಗಳನ್ನು ಆ್ಯಪಲ್ ನೇಮಕ ಮಾಡಿದೆ. ಇವರ ಕನಿಷ್ಠ ಸ್ಯಾಲರಿ ತಿಂಗಳಿಗೆ 1ಲಕ್ಷ ರೂಪಾಯಿ ಸ್ಯಾಲರಿ ನೋಡಿ ಅದೃಷ್ಠವಂತರು ಎಂದು ಸುಮ್ಮನಾಗಬೇಡಿ. ಭಾರತದಲ್ಲಿ ಮತ್ತಷ್ಟು ಆ್ಯಪಲ್ ಸ್ಟೋರ್ ಆರಂಭಗೊಳ್ಳುತ್ತಿದೆ. ಇದಕ್ಕಾಗಿ ಮತ್ತಷ್ಟು ಸಿಬ್ಬಂದಿಗಳ ನೇಮಕ ಮಾಡಲು ಆ್ಯಪಲ್ ಮುಂದಾಗಿದೆ. ಆಯಾ ರಾಜ್ಯದಲ್ಲಿ ಆಯಾ ಭಾಷೆಯ ಸಿಬ್ಬಂದಿಗಳಿಗೂ ಅವಕಾಶಸಿಗಲಿದೆ. 

ಸಚಿವ ರಾಜೀವ್ ಚಂದ್ರಶೇಖರ್ ಬೇಟಿಯಾದ ಕುಕ್, ಮೋದಿ ದೂರದೃಷ್ಟಿ ಪ್ರಶಂಸಿಸಿದ ಆ್ಯಪಲ್ ಸಿಇಒ!

ಯಾವುದೇ ಎಲೆಕ್ಟ್ರಾನಿಕ್ ಮಳಿಗೆಯಲ್ಲಿನ ಸಾಮಾನ್ಯ ಸಿಬ್ಬಂದಿ ವೇತನ 20 ರಿಂದ 30 ಸಾವಿರ ರೂಪಾಯಿ. ಇನ್ನು ಮ್ಯಾನೇಜರ್, ಟೀಮ್ ಲೀಡರ್ ಸೇರಿದಂತೆ ಇತರ ಅನುಭವದ ಮೇಲೆ ಗರಿಷ್ಠ 50 ಸಾವಿರ ರೂಪಾಯಿ. ಆದರೆ ಆ್ಯಪಲ್ ಸಿಬ್ಬಂದಿಗೆ 1 ಲಕ್ಷ ರೂಪಾಯಿ ವೇತನ ನೀಡುತ್ತಿದೆ.ಭಾರತದಲ್ಲಿ ಆ್ಯಪಲ್ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ. ಇದರ ಜೊತೆಗೆ ಭಾರತದಿಂದ ಗರಿಷ್ಠ ಪ್ರಮಾಣದಲ್ಲಿ ಆ್ಯಪಲ್ ಉತ್ಪನ್ನಗಳು ರಫ್ತಾಗುತ್ತಿದೆ.

ಆ್ಯಪಲ್ ಸ್ಟೋರ್ ಉದ್ಘಾಟನೆ ಬಳಿಕ ಟಿಮ್ ಕುಕ್ ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌ ಅವರು ಭೇಟಿ ಮಾಡಿದ್ದರು.  ಭಾರತದಲ್ಲಿ ಆ್ಯಪಲ್‌ ಕಂಪನಿಯ ವಿಸ್ತರಣೆ ಕುರಿತು ಚರ್ಚೆ ನಡೆಸಿದರು. ಈ ವೇಳೆ ಭಾರತದಲ್ಲಿ ಆ್ಯಪಲ್‌ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ವಿಸ್ತರಿಸುವ ಕುರಿತಾಗಿ ಚರ್ಚೆ ನಡೆಸಲಾಯಿತು. ಅಲ್ಲದೇ ಈ ಉತ್ಪನ್ನಗಳ ರಫ್ತು, ಯುವಕರಿಗೆ ಕೌಶಲ್ಯ ತರಬೇತಿ, ಉದ್ಯೋಗ ಸೃಷ್ಟಿಮತ್ತು ಸಂಶೋಧನಾ ಆರ್ಥಿಕತೆಯ ವಿಸ್ತರಣೆಯ ಕುರಿತಾಗಿಯೂ ಚರ್ಚಿಸಲಾಯಿತು ಎಂದು ರಾಜೀವ್‌ ಚಂದ್ರಶೇಖರ್‌ ಅವರು ಹೇಳಿದರು.

ಮಾಧುರಿ ದೀಕ್ಷಿತ್ ಮೀಟ್ ಆಗ್ಬೇಕು ಅಂತ ಟಿಮ್‌ ಕುಕ್ ಕೇಳಿದ್ದೇಕೆ?

ಮುಂಬೈನಲ್ಲಿ ತೆರೆದಿರುವ ಆ್ಯಪಲ್ ಸ್ಟೋರ್ 20 ಸಾವಿರ ಚದರಡಿ ವಿಸ್ತೀರ್ಣ ಹೊಂದಿದೆ. ಎಲ್ಲ ಆ್ಯಪಲ್‌ ಉತ್ಪನ್ನಗಳೂ ಲಭ್ಯ ಇರುತ್ತವೆ. ಗ್ರಾಹಕರ ಜತೆ 20 ಭಾಷೆಗಳಲ್ಲಿ ಮಾತನಾಡಬಲ್ಲ 100 ಸಿಬ್ಬಂದಿಗಳೂ ಇರುತ್ತಾರೆ. ಆ್ಯಪಲ್‌ ಈಗ ಸ್ಮಾರ್ಚ್‌ಫೋನ್‌ ಮಾರುಕಟ್ಟೆಯಲ್ಲಿ ಶೇ.3ರಷ್ಟುಪಾಲು ಹೊಂದಿದೆ. ಭಾರತದಲ್ಲಿ 2500 ಜನರಿಗೆ ಉದ್ಯೋಗ ಕಲ್ಪಿಸಿದೆ. ಅಲ್ಲದೆ ತನ್ನ ಉತ್ಪನ್ನಗಳ ಮಾರಾಟದ ಮೂಲಕ ಪರೋಕ್ಷವಾಗಿ 10 ಲಕ್ಷ ಉದ್ಯೋಗ ಸೃಷ್ಟಿಸಲು ಕಾರಣವಾಗಿದೆ. ಮುಂಬೈ ಬಳಿಕ ದೆಹಲಿಯಲ್ಲಿ ಆ್ಯಪಲ್ ಮಳಿಗೆ ಉದ್ಘಾಟನೆಯಾಗಿದೆ. ಮತ್ತಷ್ಟು ನಗರದಲ್ಲಿ ಆ್ಯಪಲ್ ಮಳಿಗೆ ಶೀಘ್ರದಲ್ಲೇ ಕಾರ್ಯಾರಂಭಗೊಳ್ಳಲಿದೆ. 

Latest Videos
Follow Us:
Download App:
  • android
  • ios