ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್ ಉದ್ಘಾಟಿಸಿರುವ ಸಿಸಿಒ ಟಿಮ್ ಕುಕ್ ಇಂದು ಪ್ರಧಾನಿ ನರೇಂದ್ರ ಮೋದಿ ಬಳಿಕ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭೇಟಿಯಾಗಿದ್ದಾರೆ. ಭಾರತದ ಡಿಜಿಟಲ್ ಪಯಣದ, ಆರ್ಥಿಕತೆ, ರಫ್ತುವಿನ ಕುರಿತು ಚರ್ಚಿಸಿದ್ದಾರೆ. ಇದೇ ವೇಳೆ ಮೋದಿ ದೂರದೃಷ್ಟಿ ನಾಯಕತ್ವವನ್ನು ಕೊಂಡಾಡಿದ್ದಾರೆ. 

ನವದೆಹಲಿ(ಏ.19): ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್ ಉದ್ಘಾಟಿಸಿರುವ ಸಿಸಿಒ ಟಿಮ್ ಕುಕ್ ಇಂದು ಪ್ರಧಾನಿ ನರೇಂದ್ರ ಮೋದಿ ಬಳಿಕ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭೇಟಿಯಾಗಿದ್ದಾರೆ. ಭಾರತದ ಡಿಜಿಟಲ್ ಪಯಣದ, ಆರ್ಥಿಕತೆ, ರಫ್ತುವಿನ ಕುರಿತು ಚರ್ಚಿಸಿದ್ದಾರೆ. ಭಾರತದಲ್ಲಿ ಆ್ಯಪಲ್ ಪಾಲುದಾರಿಕೆ ಹಾಗೂ ಸುದೀರ್ಘ ಪಾಲುದಾರಿಕೆ ಕುರಿತು ಚರ್ಚಿಸಿದ್ದಾರೆ. ಡಿಜಿಟಲ್ ಇಂಡಿಯಾ ಪಯಣದಲ್ಲಿ ಆ್ಯಪಲ್ ಪಾಲುದಾರಿಕೆ ಕುರಿತು ಮಾತುಕತೆ ನಡೆಸಿದ್ದಾರೆ. ಯುವಕರ ಕೌಶಲ್ಯ ವೃದ್ಧಿ, ಆರ್ಥಿಕ ಹಾಗೂ ಉದ್ಯೋಗ ಸೃಷ್ಟಿಯನ್ನು ವಿಸ್ತರಿಸುವ ಕುರಿತೂ ಚರ್ಚೆ ನಡೆಸಲಾಗಿದೆ.

ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್ ಉದ್ಘಾಟನೆಗಾಗಿ ಭಾರತಕ್ಕೆ ಆಗಮಿಸಿದ ಸಿಇಒ ಟಿಮ್ ಕುಕ್ ಹತ್ತು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಪ್ರಧಾನಿ ಮೋದಿ ಬೇಟಿ ಬಳಿಕ ಕೇಂದ್ರದ ಹಲವು ಸಚಿವರ ಜೊತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಟಿಮ್ ಕುಕ್ ಜೊತೆಗಿನ ಮಾತುಕತೆ ಬಳಿ ಟ್ವೀಟ್ ಮಾಡಿರುವ ರಾಜೀವ್ ಚಂದ್ರಶೇಖರ್, ಟಿಮ್ ಕುಕ್ ಭೇಟಿಯಿಂದ ಸಂತೋಷವಾಗಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

Scroll to load tweet…

ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಕುಕ್ ಮಾತುಕತೆ ನಡೆಸಿದ್ದಾರೆ. ಈ ವೇಳೆ ಹಲವು ವರ್ಷಗಳ ಹಿಂದಯೇ ಪ್ರಧಾನಿ ನರೇಂದ್ರ ಮೋದಿ, ಭಾರತವನ್ನು ಎಲೆಕ್ಟ್ರಾನಿಕ್ ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ್ದರು. ಈ ದೂರದೃಷ್ಟಿ ನಾಯಕತ್ವವನ್ನು ಟಿಮ್ ಕುಕ್ ಕೊಂಡಾಡಿದ್ದಾರೆ. 

ಮಾಧುರಿ ದೀಕ್ಷಿತ್ ಮೀಟ್ ಆಗ್ಬೇಕು ಅಂತ ಟಿಮ್‌ ಕುಕ್ ಕೇಳಿದ್ದೇಕೆ?

ಏಪ್ರಿಲ್ 18 ರಂದು ಟಿಮ್ ಕುಕ್, ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಭಾರತದ ಮೊಟ್ಟ ಮೊದಲ ಆ್ಯಪಲ್ ಸ್ಟೋರ್ ಉದ್ಘಾಟನೆ ಮಾಡಿದ್ದರು. ಜಿಯೋ ವಲ್ಡ್‌ರ್‍ ಡ್ರೈವ್‌ ಮಾಲ್‌ನಲ್ಲಿ ಮಳಿಗೆ ತರೆಯಲಾಗಿದ್ದು, ಇದಕ್ಕೆ ‘ಆ್ಯಪಲ್‌ ಬಿಕೆಸಿ’ ಎಂದು ಹೆಸರಿಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಮ್‌ ಕುಕ್‌, ‘ಮುಂಬೈನಲ್ಲಿ ಆ್ಯಪಲ್‌ ಸ್ಟೋರ್‌ ಆರಂಭಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ಸ್ಫೂರ್ತಿದಾಯಕವಾಗಿದೆ. ಅತ್ಯದ್ಭುತ ಪ್ರತಿಕ್ರಿಯೆ ನೋಡುತ್ತುತ್ತಿದ್ದೇವೆ. ಭಾರತದ ಮೊದಲ ಆ್ಯಪಲ್‌ ಬಿಕೆಸಿ ಸ್ಟೋರ್‌ ಆರಂಭಿಸಲು ಸಂತಸವಾಗುತ್ತಿದೆ’ ಎಂದಿದ್ದರು. 

ಆ್ಯಪಲ್‌ ಈಗ ಸ್ಮಾರ್ಚ್‌ಫೋನ್‌ ಮಾರುಕಟ್ಟೆಯಲ್ಲಿ ಶೇ.3ರಷ್ಟುಪಾಲು ಹೊಂದಿದೆ. ಭಾರತದಲ್ಲಿ 2500 ಜನರಿಗೆ ಉದ್ಯೋಗ ಕಲ್ಪಿಸಿದೆ. ಅಲ್ಲದೆ ತನ್ನ ಉತ್ಪನ್ನಗಳ ಮಾರಾಟದ ಮೂಲಕ ಪರೋಕ್ಷವಾಗಿ 10 ಲಕ್ಷ ಉದ್ಯೋಗ ಸೃಷ್ಟಿಸಲು ಕಾರಣವಾಗಿದೆ.