ಬೈಕ್ ಸವಾರನನ್ನು ಹಿಗ್ಗಾ ಮುಗ್ಗ ಎಳೆ​ದಾ​ಡಿದ ಪೊಲೀಸ್..!

ಹೊಸ ಸಂಚಾರ ನಿಯಮಗಳು ಜಾರಯಾದ ಮೇಲೆ ಸುಮ್ಮಸುಮ್ಮನೆ ಬೈಕ್‌ ಸವಾರರನ್ನು ತಡೆದು ತಪಾಸಣೆ ಮಾಡುವುದು, ಫೈನ್ ಹಾಕುವ ಘಟನೆಗಳು ನಡೆಯುತ್ತಲೇ ಇವೆ. ಬಂಟ್ವಾಳದಲ್ಲಿ ಸಂಚಾರ ನಿಯಮ ಪಾಲಿಸದ ಬೈಕ್‌ ಸವಾರನನ್ನು ಟ್ರಾಫಿಕ್ ಪೊಲೀಸ್ ಹಿಗ್ಗಾ ಮುಗ್ಗ ಎಳೆದಾಡಿದ್ದಾರೆ.

traffic police clash with bike rider for not following rules

ಮಂಗಳೂರು(ನ.01): ಬಂಟ್ವಾಳ ಟ್ರಾಫಿಕ್‌ ಪೊಲೀಸರೊಬ್ಬರು ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ವಾಹನ ಸವಾರರೊಬ್ಬರ ನಡುವಿನ ಮಾತಿನ ಚಕಮಕಿ ಹಾಗೂ ಸವಾರನನ್ನು ಎಳೆದಾಡಿದ ಘಟನೆಯ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಪೊಲೀಸರ ಈ ನಡೆಗೆ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೀಡಿಯೋ ತುಣುಕು ಬಂಟ್ವಾಳ ತಾಲೂಕಿನ ಮೆಲ್ಕಾರ್‌ ಜಂಕ್ಷನ್‌ ಸಮೀಪದ ಗುಡ್ಡೆಯಂಗಡಿ ರಸ್ತೆಯಲ್ಲಿ ಗುರು​ವಾರ ನಡೆದಿದೆ ಎನ್ನಲಾಗುತ್ತಿದ್ದು, ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

'ಗಾಂಧೀಜಿ, ಅಂಬೇಡ್ಕರ್‌ ಪಾಠ ರದ್ದು ಮಾಡಿದ್ರೂ ಅಚ್ಚರಿ ಇಲ್ಲ'..!

ಮೆಲ್ಕಾರ್‌ ಟ್ರಾಫಿಕ್‌ ಠಾಣೆ ಎಎ​ಸ್‌ಐ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸವಾರನ ನಡುವೆ ವಾಗ್ವಾದ ಉಂಟಾಗಿದೆ ಎನ್ನಲಾಗಿದ್ದು, ಬಳಿಕ ಎಎಸ್ಸೈ ಅವರು ಸವಾ​ರ​ನ ಬಟ್ಟೆಹಿಡಿದು ಎಳೆದಾಡಿದ ಸನ್ನಿವೇಶವನ್ನು ಇನ್ನೋರ್ವ ಸವಾರ ಮೊಬೈಲ್‌ ಮೂಲಕ ಚಿತ್ರೀಕರಿಸಿದ್ದಾರೆ. ಪೊಲೀಸರ ಈ ದುರ್ವತನೆಗೆ ಆಕ್ರೋಶ ವ್ಯಕ್ತಪಡಿಸಿ, ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಪರಿ​ಶೀ​ಲ​ನೆಗೆ ಎಸ್ಪಿ ಆದೇ​ಶ:

ಈ ಘಟನೆಯ ವಾಸ್ತವಾಂಶದ ಬಗ್ಗೆ ವರದಿ ನೀಡಲು ಸಹಾಯಕ ಪೊಲೀಸ್‌ ಅಧೀಕ್ಷಕರು, ಬಂಟ್ವಾಳ ಉಪವಿಭಾಗ ಇವರಿಗೆ ದ.ಕ. ಜಿಲ್ಲಾ ಪೊಲೀಸ್‌ ವರೀಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್‌ ಆದೇಶಿಸಿದ್ದಾರೆ. ಈ ಬಗ್ಗೆ ವರದಿ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯ ಪ್ರಕಟಣೆ ತಿಳಿಸಿದೆ.

Latest Videos
Follow Us:
Download App:
  • android
  • ios