'ಗಾಂಧೀಜಿ, ಅಂಬೇಡ್ಕರ್ ಪಾಠ ರದ್ದು ಮಾಡಿದ್ರೂ ಅಚ್ಚರಿ ಇಲ್ಲ'..!
ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದುಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರ, ಈಗ ಟಿಪ್ಪು ಇತಿಹಾಸವನ್ನು ಶಾಲಾ ಪಠ್ಯದಿಂದ ತೆಗೆದುಹಾಕಲು ಹೊರಟಿದೆ. ಮುಂದೆ ಗಾಂಧೀಜಿ ಹಾಗೂ ಅಂಬೇಡ್ಕರ್ ಕುರಿತ ಪಠ್ಯವನ್ನೂ ತೆಗೆದುಹಾಕಿದರೆ ಆಶ್ಚರ್ಯಪಡಬೇಕಾಗಿಲ್ಲ. ಬಿಜೆಪಿಯ ಈ ತೀರ್ಮಾನದಿಂದಾಗಿ ಟಿಪ್ಪುವಿನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುವುದಿಲ್ಲ, ಅಲ್ಲದೆ ಕಾಂಗ್ರೆಸ್‌ಗೂ ಯಾವುದೇ ನಷ್ಟಇಲ್ಲ ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರು(ನ.01): ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದುಗೊಳಿಸಿದ ರಾಜ್ಯ ಬಿಜೆಪಿ ಸರ್ಕಾರ, ಈಗ ಟಿಪ್ಪು ಇತಿಹಾಸವನ್ನು ಶಾಲಾ ಪಠ್ಯದಿಂದ ತೆಗೆದುಹಾಕಲು ಹೊರಟಿದೆ. ಮುಂದೆ ಗಾಂಧೀಜಿ ಹಾಗೂ ಅಂಬೇಡ್ಕರ್ ಕುರಿತ ಪಠ್ಯವನ್ನೂ ತೆಗೆದುಹಾಕಿದರೆ ಆಶ್ಚರ್ಯಪಡಬೇಕಾಗಿಲ್ಲ. ಬಿಜೆಪಿಯ ಈ ತೀರ್ಮಾನದಿಂದಾಗಿ ಟಿಪ್ಪುವಿನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುವುದಿಲ್ಲ, ಅಲ್ಲದೆ ಕಾಂಗ್ರೆಸ್‌ಗೂ ಯಾವುದೇ ನಷ್ಟಇಲ್ಲ ಎಂದು ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿ ಹಾಗೂ ಪಠ್ಯ ವಿಚಾರ ತೆಗೆದುಹಾಕುವ ಬಿಜೆಪಿ ನಿರ್ಧಾರದ ಬಗ್ಗೆ ನಾನೇನೂ ಹೇಳುವುದಿಲ್ಲ. ಟಿಪ್ಪುವಿನ ವಿಚಾರಕ್ಕೆ ಬಿಜೆಪಿ ಸರ್ಕಾರ ಅಡ್ಡಗಾಲು ಹಾಕಿದರೆ, ಇಂಗ್ಲೆಂಡ್‌ನಲ್ಲಿರುವ ಟಿಪ್ಪು ಮ್ಯೂಸಿಯಂನ ಇತಿಹಾಸ ತೆಗೆದುಹಾಕಲು ಆಗುತ್ತದೆಯೇ? ಬೇರೆ ಬೇರೆ ದೇಶಗಳಲ್ಲಿ ಟಿಪ್ಪುವಿನ ಇತಿಹಾಸ ಇದೆ ಎಂದಿದ್ದಾರೆ.
ಮಂಗಳೂರು: 'ಮಹಾ' ಅಬ್ಬರಕ್ಕೆ ಸಿಲುಕಿದ ಮೀನುಗಾರಿಕಾ ದೋಣಿ
ದೇವನಹಳ್ಳಿ ಕೋಟೆ, ಶ್ರೀರಂಗಪಟ್ಟಣ ದೇವಸ್ಥಾನ, ಕೊಲ್ಲೂರಿನಲ್ಲಿ ಟಿಪ್ಪು ಸಲಾಂ ಆರತಿ, ಶೃಂಗೇರಿ ಮಠಕ್ಕೆ ಟಿಪ್ಪು ಕೊಡುಗೆ, ನಂಜನಗೂಡಿ, ಪಾಣೆಮಂಗಳೂರಿನಲ್ಲಿ ಟಿಪ್ಪು ಐತಿಹ್ಯದ ಕುರುಹನ್ನು ನಾಶಪಡಿಸಲು ಬಿಜೆಪಿಯಿಂದ ಸಾಧ್ಯವೇ? ಆದರೆ ವಿದ್ಯಾರ್ಥಿಗಳಿಗೆ ಟಿಪ್ಪುವಿನ ಹೋರಾಟ ಹಾಗೂ ಆಡಳಿತದ ಬಗ್ಗೆ ತಿಳಿದುಕೊಳ್ಳಲು ಆಗುವುದಿಲ್ಲ. ಆದರೂ ರಾಷ್ಟ್ರಪತಿಗಳು ಕೂಡ ಈ ಹಿಂದೆ ರಾಜ್ಯದ ವಿಧಾನಸಭೆಯಲ್ಲಿ ಟಿಪ್ಪುವಿನ ಬಗ್ಗೆ ಹೊಗಳಿಕೆ ಮಾತನ್ನಾಡಿದ್ದರು. ಬಿಜೆಪಿ ಇದೇ ರೀತಿಯ ಮನೋಸ್ಥಿತಿಯನ್ನು ಮುಂದುವರಿಸಿದರೆ, ಮುಂದೆ ಶಾಲಾ ಪಠ್ಯಗಳಿಂದ ಗಾಂಧೀಜಿ, ಅಂಬೇಡ್ಕರ್ ವಿಚಾರ ಕೂಡ ಕಣ್ಮರೆಯಾದರೆ ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ.
ನೆರೆ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ:
ರಾಜ್ಯದಲ್ಲಿ ನೆರೆ ಸಂತ್ರಸ್ತರ ಬವಣೆ ಇನ್ನೂ ನೀಗಿಲ್ಲ. ಸಂತ್ರಸ್ತರಿಗೆ ಪ್ರಕಟಿಸಿದ 50 ಸಾವಿರ ರು. ಮೊತ್ತ ನೀಡಲು ಕೂಡ ಸರ್ಕಾರದ ಬಳಿ ದುಡ್ಡಿಲ್ಲ. ಕೊಡಗಿನಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಎಲ್ಲ ಸಿದ್ಧತೆ ನಡೆಸಿದ್ದು ಮೈತ್ರಿ ಸರ್ಕಾರ. ಈಗ ಸಂತ್ರಸ್ತರಿಗೆ ಕೀ ಹಸ್ತಾಂತರಿಸುವುದು ಬಿಜೆಪಿಗರು ಎಂದು ಖಾದರ್ ಹೇಳಿದರು. ಮಂಗಳೂರು ತಾ.ಪಂ. ಅಧ್ಯಕ್ಷ ಮೊಹಮ್ಮದ್ ಮೋನು, ಮುಖಂಡರಾದ ಪದ್ಮನಾಭ ನರಿಂಗಾನ, ಸದಾಶಿವ ಉಳ್ಳಾಲ್, ಅಲ್ವಿನ್ ಡಿಸೋಜಾ, ಉಮ್ಮರ್ ಇದ್ದರು.
‘ಕ್ಯಾರ್’ ಆಯ್ತು, ಈಗ ‘ಮಹಾ’ ಸೈಕ್ಲೋನ್ ಭೀತಿ!.