ಕೊರಗಜ್ಜ ಕಟ್ಟೆ ಪ್ರಕರಣ: ಪರ - ವಿರೋಧದ ಕೂಗು

ಕೊರಗಜ್ಜ ಕಟ್ಟೆಯ ಗರ್ಭಗುಡಿಯ ಬೀಗ ಮುರಿದು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಸಹಕಾರ ಸಂಘಗಳ ಉಪ ನಿಬಂಧಕರನ್ನು ಅಮಾನತುಗೊಳಿಸಬೇಕೆಂದು ರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ವಾದ) ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಹಾಗೂ ಮಂಗಳೂರು ತಾಲೂಕು ಶಾಖೆ ನೇತೃತ್ವದಲ್ಲಿ ಮೌನ ಪ್ರತಿಭಟನೆ ನಡೆದಿದೆ.

Protest against those who forcefully  entered korgajja katte

ಮಂಗಳೂರು(ಅ.17): ಪದವಿನಂಗಡಿಯ ಕೊರಗಜ್ಜ ಕಟ್ಟೆಯ ಗರ್ಭಗುಡಿಯ ಬೀಗ ಮುರಿದು ಧಾರ್ಮಿಕ ನಂಬಿಕಗಳಿಗೆ ಸಹಕಾರ ಸಂಘಗಳ ಉಪ ನಿಬಂಧಕರು ಧಕ್ಕೆ ಉಂಟುಮಾಡಿದ್ದಾರೆ. ಅವರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ವಾದ) ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಹಾಗೂ ಮಂಗಳೂರು ತಾಲೂಕು ಶಾಖೆ ನೇತೃತ್ವದಲ್ಲಿ ನಗರದ ಜಿಎಚ್‌ಎಸ್‌ ರಸ್ತೆಯ ಜನತಾ ಬಜಾರ್‌ ಕಟ್ಟಡದ ಮುಂದೆ ಮೌನ ಪ್ರತಿಭಟನೆ ನಡೆಯಿತು.

ಕೊರಗಜ್ಜನ ಪವಾಡ ! ಆಭರಣ ಕದ್ದ ಕಳ್ಳರು ವರ್ಷದ ನಂತರ ಹಿಂತಿರುಗಿಸಿದರು

ನಾಡಿನ ಸರ್ವಜನರು ನಂಬಿಕೊಂಡು ಬಂದಿರುವ ಕೊರಗಜ್ಜ ಕಟ್ಟೆಯ ಗರ್ಭಗುಡಿಯ ಬೀಗ ಮುರಿದು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಮಾಡಿದ್ದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಕೊರಗಜ್ಜನ ಪವಾಡ ಇಂದಿಗೂ ನಡೆಯುತ್ತಾ?

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಸೇಸಪ್ಪ ನೆಕ್ಕಿಲು, ಮೂಡುಬಿದಿರೆ ತಾಲೂಕು ಸಂಚಾಲಕ ಹೊನ್ನಯ್ಯ ತೋಡಾರು, ತಾಲೂಕು ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಪದವಿನಂಗಡಿ ಕೊರಗಜ್ಜ ಕಟ್ಟೆಭಕ್ತರು ಇದ್ದರು.

‘ಉಪ ನಿಬಂಧಕರ ಕ್ರಮ ಸ್ವಾಗತಾರ್ಹ’

ಉಪ ನಿಬಂಧಕರ ಕ್ರಮವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನಾ ವಾದ) ಘಟಕವು ಸ್ವಾಗತಿಸಿದೆ. ನ್ಯಾಯಾಲಯದ ಆದೇಶದಂತೆ ಸರ್ಕಾರದಿಂದ ಕೊರಗಜ್ಜ ಕ್ಷೇತ್ರದ ಅಭಿವೃದ್ಧಿ ನಡೆಸಲಾಗಿದೆ. ಕ್ಷೇತ್ರದ ಆಡಳಿತ ಮಂಡಳಿಯಲ್ಲಿ ಉಂಟಾದ ಸಮಸ್ಯೆಗಳ ಬಗ್ಗೆ ಒಂದು ಗುಂಪು ನ್ಯಾಯಾಲಯದ ಮೆಟ್ಟಲೇರಿತ್ತು.

ರಕ್ಷಿತ್ ಶೆಟ್ಟಿ ಕೈ ಹಿಡಿದ ಕೊರಗಜ್ಜನ ಪವಾಡ

ದೂರುದಾರರು ನೀಡಿದ ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಲಯ, ಭಕ್ತರ ಧಾರ್ಮಿಕ ಭಾವನೆಗಳನ್ನು ಉಳಿಸಿಕೊಂಡು ಪಾರಂಪರಿಕವಾಗಿ ಉಳಿದು ಬಂದಿರುವ ನಂಬಿಕೆ, ಆಚರಣೆಯನ್ನು ಉಳಿಸಿಕೊಂಡು ಸಂಪೂರ್ಣ ಸುಧಾರಣೆ ನಡೆಸಿ ಕ್ಷೇತ್ರವನ್ನು ಬೆಳಗಿಸುವಂತೆ ಸಹಕಾರ ಸಂಘಗಳ ಜಂಟಿ ನಿಬಂಧಕರಿಗೆ ಸೂಕ್ತ ನಿರ್ದೇಶನ ನೀಡಿದೆ. ಅದರಂತೆ ಉಪ ನಿಬಂಧಕರು ಕ್ಷೇತ್ರದ ಪಾವಿತ್ರ್ಯತೆಯನ್ನು ಅರಿತು ಸುಧಾರಣೆ ನಡೆಸುತ್ತಿರುವುದು ಸ್ವಾಗತಾರ್ಹ ಎಂದು ಪರಿವರ್ತನಾ ವಾದ ಘಟಕದ ಅಶೋಕ್‌ ಕೊಂಚಾಡಿ ಹೇಳಿದ್ದಾರೆ.

ಸುಮ್‌ ಸುಮ್ನೆ BPL ಕಾರ್ಡ್ ಇಡ್ಕೊಂಡ್ರೆ ಕ್ರಿಮಿನಲ್ ಕೇಸ್ ಪಕ್ಕಾ..!

Latest Videos
Follow Us:
Download App:
  • android
  • ios