Asianet Suvarna News Asianet Suvarna News

ಮಂಗಳೂರು: ಆಟೋ ನಿಲ್ದಾಣದ ಬಳಿ ಪೈರು ಕಟಾವಿಗೆ ಸಿದ್ಧ!

ಮಂಗಳೂರಿನ ಆಟೋ ನಿಲ್ದಾಣದ ಹತ್ತಿರ ಪೈರು ಕಟಾವಿಗೆ ಸಿದ್ಧವಾಗಿದೆ. ಹಚ್ಚ ಹಸಿರಾಗಿ ಕಂಗೊಳಿಸ್ತಿರೋ ತೆನೆ ಭರಿತ ಪೈರನ್ನು ಇನ್ನೇನು ಕಟಾವು ಮಾಡಬಹುದು. ಹಾಗಿದ್ರೆ ಈ ಆಟೋ ನಿಲ್ದಾಣ ಎಷ್ಟು ಕೆಸರುಮಯವಿರಬಹುದು ನೀವೇ ಯೋಚಿಸಿ.

Paddy ready to harvest in auto stand
Author
Bangalore, First Published Oct 22, 2019, 8:22 AM IST

ಮಂಗಳೂರು(ಅ.22): ರಾಷ್ಟ್ರೀಯ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಅವ್ಯವಸ್ಥೆಯ ಆಗರವಾಗಿರುವ ಮೂಲ್ಕಿ ಪೇಟೆಯ ಸಮೀಪ ವಿಜಯ ಬ್ಯಾಂಕ್‌ ಎದುರುಗಡೆಯ ಮೂಲ್ಕಿ ರಿಕ್ಷಾ ನಿಲ್ದಾಣದಲ್ಲಿ ಪೈರು ಕಟಾವಿಗೆ ಸಿದ್ಧವಾಗಿದೆ.

ಕೆಲ ಸಮಯದ ಹಿಂದೆ ಇಲ್ಲಿ ಆಟೋ ಚಾಲಕರು ನೆಟ್ಟಿದ್ದ ಬತ್ತದ ನೇಜಿ ಪೈರಾಗಿ ಬೆಳೆದು ಕಟಾವಿಗೆ ಸಿದ್ಧವಾಗಿದ್ದು, ಹಸಿರಿನಿಂದ ಕಂಗೊಳಿಸುತ್ತಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣವಾದ ಬಳಿಕ ಮೂಲ್ಕಿಗೆ ಸೂಕ್ತ ರಿಕ್ಷಾ ನಿಲ್ದಾಣ ಇದುವರೆಗೂ ದೊರೆತಿಲ್ಲ. ಹೆದ್ದಾರಿ ಬದಿಯಲ್ಲಿಯೇ ಅಪಾಯಕಾರಿಯಾಗಿ ನಿಲ್ದಾಣ ರೂಪಿಸಿಕೊಂಡು ಜೀವನ ಸಾಗಿಸುತ್ತಿರುವ ರಿಕ್ಷಾ ಚಾಲಕರು ಸೂಕ್ತ ನಿಲ್ದಾಣ ಒದಗಿಸುವಂತೆ ಅನೇಕ ಬಾರಿ ಸ್ಥಳೀಯ ಸಂಸದರು ಹಾಗೂ ಶಾಸಕರನ್ನು ಒತ್ತಾಯಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ.

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

ಮೂಲ್ಕಿ ವಿಜಯಾ ಸನ್ನಿಧಿ ಬಳಿಯ ಹೆದ್ದಾರಿ ಬದಿಯಲ್ಲಿ ಮೂಲ್ಕಿ ನಗರ ಪಂಚಾಯತಿ ಸೂಕ್ತ ಜಾಗ ಗುರುತಿಸಿ ನಿಲ್ದಾಣ ಒದಗಿಸಿದ್ದರೂ ಅಸಮರ್ಪಕ ವ್ಯವಸ್ಥೆಯಿಂದ ನಿಲ್ದಾಣ ಕೆಸರುಮಯವಾಗಿದೆ. ಕೆಸರುಮಯ ರಿಕ್ಷಾ ನಿಲ್ದಾಣದಲ್ಲಿ ರಿಕ್ಷಾ ಚಾಲಕರು ನೇಜಿ ನೆಟ್ಟಿದ್ದು ಹುಲುಸಾಗಿ ಬೆಳೆದಿದೆ.

ಕೂಡಲೇ ಸ್ಥಳೀಯ ಆಡಳಿತ ಮೂಲ್ಕಿಗೆ ಸೂಕ್ತ ರಿಕ್ಷಾ ನಿಲ್ದಾಣವನ್ನು ಒದಗಿಸಬೇಕು. ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಸರ್ವಿಸ್‌ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಆಟೋ ಯೂನಿಯನ್‌ ಅಧ್ಯಕ್ಷ ಮೋಹನ್‌ ಕುಬೆವೂರು ಒತ್ತಾಯಿಸಿದ್ದಾರೆ.

'ಓಟ್ ಬೇಕಾ, ರಸ್ತೆ ಸರಿ ಮಾಡಿ ಬನ್ನಿ', ಕೆಲ್ಸ ಮಾಡ್ಸೋಕೆ ಬ್ಯಾನರ್ ಹಾಕಿದ್ರು ಜನ..!

Follow Us:
Download App:
  • android
  • ios