ಅತಿ ಕಡಿಮೆ ಅವಧಿಯಲ್ಲಿ ಕಂಬಳಕರೆ ನಿರ್ಮಾಣ ದಾಖಲೆ 11 ನೇ ವರ್ಷದ ಮೂಡೂರು ಪಡೂರು ಜೋಡುಕರೆ ಬಯಲು ಕಂಬಳ ಕಂಬಳ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ಹೇಳಿಕೆ

ಮಂಗಳೂರು: ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕೂಡಿಬೈಲಿನಲ್ಲಿ 11 ನೇ ವರ್ಷದ ಮೂಡೂರು ಪಡೂರು ಜೋಡುಕರೆ ಬಯಲು ಕಂಬಳ ಎ.17 ರಂದು ನಡೆಯಲಿದೆ ಎಂದು ಮಾಜಿ ಸಚಿವ, ಕಂಬಳ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ (Ramanath Rai) ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.ಅತೀ ಕಡಿಮೆ ಅವಧಿಯಲ್ಲಿ ಕಂಬಳದ ಕರೆ ನಿರ್ಮಿಸಿ , ಕಂಬಳ ಕೂಟವನ್ನು ಆಯೋಜಿಸಿರುವುದು ಕಂಬಳ ಇತಿಹಾಸದಲ್ಲಿ ಪ್ರಥಮವಾಗಿದೆ ಎಂದು ಹೇಳಿದರು.

ಬಯಲು ಕಂಬಳ (Kambala) ಕೂಟದಲ್ಲೇ ವಿಶಿಷ್ಠ, ವಿನೂತನ ಶೈಲಿಯಲ್ಲಿ ತಾಲೂಕಿನ ಕಾವಳಕಟ್ಟೆಯಲ್ಲಿ ನಡೆಯುತ್ತಿದ್ದ ಮೂಡೂರು-ಪಡೂರು (Mudoor Padur) ಜೋಡುಕರೆ ಬಯಲು ಕಂಬಳವು ಕಾರಣಾಂತರಗಳಿಂದ ಕೆಲ ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ಕಂಬಳ ಅಭಿಮಾನಿಗಳ ಆಶಯದಂತೆ ಮತ್ತೆ ಬಂಟ್ವಾಳ (Bantwala) ನಗರ ಪ್ರದೇಶದಿಂದ ಮೂರು ಕಿ.ಮೀ.ದೂರದ ನಾವೂರದ ಪ್ರಕೃತಿ ರಮಣೀಯವಾದ ಸ್ಥಳದಲ್ಲಿ ಮೂಡೂರು-ಪಡೂರು ಹೆಸರಿನಲ್ಲಿಯೇ ಬಂಟ್ವಾಳ ಕಂಬಳ ವಾಗಿ ಮೂಡಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಕಟೀಲ್ ಮಿಮಿಕ್ರಿ ಮಾಡುವ ಎಕ್ಸ್ ಪರ್ಟ್‌ಗಳು ಇದ್ದಾರೆಯೇ?'

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ (Veerendra Hegde) ಶುಭಾರ್ಶೀವಾದದೊಂದಿಗೆ ಕಂಬಳಕೂಟವನ್ನು ಸೊಲೂರು, ಕರ್ನಾಟಕ ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಅಲ್ಲಿಪಾದೆ ಸಂತ ಅಂತೋನಿ ಚಚ್‌ರ್‍ನ ಧರ್ಮಗುರು ಫೆಡ್ರಿಕ್‌ ಮೊಂತೆರೊ, ಸುಲ್ತಾನ್‌ ನಗರ ಬದ್ರಿಯಾ ಜುಮಾ ಮಸೀದಿ ಧರ್ಮಗುರು ಜ. ಮೊಹಮ್ಮದ್‌ ನಾಸೀಹ್‌ ದಾರಿಮಿ ಮೊದಲಾದವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಕಂಬಳವೀರ ಶ್ರೀನಿವಾಸ ಗೌಡ ಹೊಸ ದಾಖಲೆ
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಧಾನಪರಿಷತ್‌ನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ , ಎಸ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ. ಎಂ. ಎನ್‌. ರಾಜೇಂದ್ರಕುಮಾರ್‌ ಸಹಿತ ಹಲವಾರು ಗಣ್ಯರು ಸಾಮಾಜಿಕ, ರಾಜಕೀಯ ಮುಖಂಡರು, ತುಳು ಚಲನಚಿತ್ರ ಕಲಾವಿದರು ಭಾಗವಹಿಸಲಿದ್ದಾರೆ ಎಂದರು. ನೂತನ ಕಂಬಳ ಸಮಿತಿಯನ್ನು ಸಮಿತಿ ಗೌರವಾಧ್ಯಕ್ಷ ರಮಾನಾಥ ರೈ ಅವರು ಘೋಷಿಸಿದರು. ಕಂಬಳದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್‌ ಎಲ್‌ .ರೋಡ್ರಿಗಸ್‌, ಸಂಚಾಲಕ ಪದ್ಮಶೇಖರ್‌ ಜೈನ್‌, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್‌ ಶೆಟ್ಟಿತುಂಬೆ, ಉಪಾಧ್ಯಕ್ಷರಾದ ಅವಿಲ್‌ ಮಿನೇಜಸ್‌, ಬೇಬಿಕುಂದರ್‌, ಸುದೀಪ್‌ ಕುಮಾರ್‌ ಶೆಟ್ಟಿ, ಸುದರ್ಶನ ಜೈನ…, ಮಾಯಿಲಪ್ಪ ಸಾಲ್ಯಾನ್‌, ಕಂಬಳ ಸಮಿತಿ ಸದಸ್ಯರಾದ ಶಬೀರ್‌, ಡೆನ್ಜಿಲ್‌ ಮತ್ತಿತರರು ಉಪಸ್ಥಿತರಿದ್ದರು.