Asianet Suvarna News

'ಕಟೀಲ್ ಮಿಮಿಕ್ರಿ ಮಾಡುವ ಎಕ್ಸ್ ಪರ್ಟ್‌ಗಳು ಇದ್ದಾರೆಯೇ?'

* ನಳಿನ್‌ಕುಮಾರ್ ಕಟೀಲ್ ರದ್ದು ಎನ್ನಲಾದ ಆಡಿಯೋ ವೈರಲ್ ವಿಚಾರ
* ಮಂಗಳೂರಿನಲ್ಲಿ ಮಾಜಿ ಸಚಿವ ರಮನಾಥ್ ರೈ ಪ್ರತಿಕ್ರಿಯೆ
*ನೀವು ನಳಿನ್‌ ಕುಮಾರ್ ಕಟೀಲ್ ಅವರ ಜೊತೆ ಮಾತನಾಡಿಲ್ವಾ.?
* ಅವರ ಮಿಮಿಕ್ರಿ ಮಾಡುವ ಎಕ್ಸ್ ಪರ್ಟ್‌ ಇಲ್ಲಿ ಇದ್ದಾರ..?

Nalin Kumar Kateel Viral Audio former minister B Ramanath Rai Reaction mah
Author
Bengaluru, First Published Jul 20, 2021, 7:37 PM IST
  • Facebook
  • Twitter
  • Whatsapp

ಮಂಗಳೂರು(ಜು. 20)  ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್  ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್  ಆಗಿದ್ದು ರಾಜಕಾರಣದ ಸಂಚಲನಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಂಗಳೂರಿನಲ್ಲಿ ಮಾಜಿ ಸಚಿವ, ಕಾಂಗ್ರೆಸ್ ನಾಯಕ ರಮಾನಾಥ್ ರೈ ಪ್ರತಿಕ್ರಿಯೆ ನೀಡಿದ್ದಾರೆ. ನೀವೆಲ್ಲಾ ಮಂಗಳೂರಿನವರು ಅಲ್ವಾ.. ನೀವು ನಳಿನ್‌ ಕುಮಾರ್ ಕಟೀಲ್ ಅವರ ಜೊತೆ ಮಾತನಾಡಿಲ್ವಾ. ಅವರ ಮಿಮಿಕ್ರಿ ಮಾಡುವ ಎಕ್ಸ್ ಪರ್ಟ್‌ ಗಳು ಇಲ್ಲಿ ಇದ್ದಾರ..? ಇದು ನಿಮಗೆ ಅರ್ಥ ಆಗ್ತದೆ ಅಲ್ವಾ.. ಎಂದು  ಪತ್ರಕರ್ತರಿಗೆ ಮರು ಪ್ರಶ್ನೆ ಕೇಳಿದ್ದಾರೆ.

ಆಡಿಯೋ ವೈರಲ್ ನಂತರ ಮಿತ್ರಮಂಡಳಿ ಅಲರ್ಟ್

ಏನಿದ್ರೂ ಅವರ ನಗುವನ್ನು ಮಿಮಿಕ್ರಿ ಮಾಡೋದಕ್ಕೆ ಯಾರಿಂದನೂ ಸಾಧ್ಯವಿಲ್ಲ. ಆಡಿಯೋ ಬಗ್ಗೆ ನಗುತ್ತಲೇ ವ್ಯಂಗ್ಯವಾಡಿ ತೆರಳಿದ್ದಾರೆ. 

Follow Us:
Download App:
  • android
  • ios