Asianet Suvarna News

ಮಂಗಳೂರು: 60 ವಾರ್ಡ್‌ಗಳ 180 ಮಂದಿ ಭವಿಷ್ಯ ಇಂದು ಪ್ರಕಟ

ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾಡ್ ಗರ್ಳಲ್ಲಿ ಕಣಕ್ಕಿಳಿದ 180 ಮಂದಿ ಸ್ಪರ್ಧಿಗಳ ಭವಿಷ್ಯ ನ.14ರಂದು ತೀರ್ಮಾನವಾಗಲಿದೆ. 21 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ನಡೆದಿದ್ದು, 24 ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. 9 ವಾರ್ಡ್ ಗಳಲ್ಲಿ ತಲಾ 4 ಅಭ್ಯರ್ಥಿಗಳಿದ್ದರೆ, 6 ವಾರ್ಡ್‌ಗಳಲ್ಲಿ ಗರಿಷ್ಠ ತಲಾ 5 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ನಿರ್ಧಾರವಾಗಲಿದೆ.

mangalore corporation polls result to be announced on November 14
Author
Bangalore, First Published Nov 14, 2019, 8:29 AM IST
  • Facebook
  • Twitter
  • Whatsapp

ಮಂಗಳೂರು(ನ.14): ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾಡ್ ಗರ್ಳಲ್ಲಿ ಕಣಕ್ಕಿಳಿದ 180 ಮಂದಿ ಸ್ಪರ್ಧಿಗಳ ಭವಿಷ್ಯ ನ.14ರಂದು ತೀರ್ಮಾನವಾಗಲಿದೆ. 21 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ನಡೆದಿದ್ದು, 24 ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

9 ವಾರ್ಡ್ ಗಳಲ್ಲಿ ತಲಾ ೪ ಅಭ್ಯರ್ಥಿಗಳಿದ್ದರೆ, 6 ವಾರ್ಡ್‌ಗಳಲ್ಲಿ ಗರಿಷ್ಠ ತಲಾ 5 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ನಿರ್ಧಾರವಾಗಲಿದೆ. ಪಾಲಿಕೆಯ ಎಲ್ಲ 60 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಜೆಡಿಎಸ್-12, ಸಿಪಿಐ-1, ಸಿಪಿಎಂ-7, ಎಸ್‌ಡಿಪಿಐ-6, ಜೆಡಿಯು-2, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ -3, ಕರ್ನಾಟಕ ರಾಷ್ಟ್ರ ಸಮಿತಿ-2, ಪಕ್ಷೇತರರು- 27 ಮಂದಿ ಅದೃಷ್ಟ ಪರೀಕ್ಷಿಸಿದ್ದಾರೆ.

ಮಾಜಿಗಳ ಮುಖಾಮುಖಿ :

ಸಾಮಾನ್ಯವಾಗಿ ಪಾಲಿಕೆ ಚುನಾವಣೆಯಲ್ಲಿ ಮಾಜಿ ಸದಸ್ಯರು ಮುಖಾಮುಖಿಯಾಗುವುದು ಕಡಿಮೆ. ಆದರೆ ಈ ಬಾರಿ ಮೀಸಲು ಬದಲಾದ ಕಾರಣ ಅನಿವಾರ್ಯವಾಗಿ ಕೆಲವರ ವಾರ್ಡ್ ಬದಲಾಗಿದೆ. ಪರಿಣಾಮ 5 ವಾರ್ಡ್‌ಗಳಲ್ಲಿ ಮಾಜಿಗಳ ನಡುವೆ ಸ್ಪರ್ಧೆ ನಡೆದಿದೆ. ಕೊಡಿಯಾಲ್‌ಬೈಲ್ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಪ್ರಕಾಶ್ ಸಾಲಿಯಾನ್ ವಿರುದ್ಧ ಬಿಜೆಪಿಯ ಸುಧೀರ್ ಶೆಟ್ಟಿ , ಕೋರ್ಟ್ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಎ.ಸಿ.ವಿನಯರಾಜ್ ವಿರುದ್ಧ ಬಿಜೆಪಿಯ ರಂಗನಾಥ ಕಿಣಿ ಸ್ಪರ್ಧಿಸಿದ್ದಾರೆ.

ಮೂವರು ಮಾಜಿಗಳು :

ಕಂಕನಾಡಿ ವಾರ್ಡ್‌ನಲ್ಲಿ ಮೂವರು ಮಾಜಿಗಳು ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನ ಪ್ರವೀಣ್ ಚಂದ್ರ ಆಳ್ವ ವಿರುದ್ಧ ಬಿಜೆಪಿಯ ವಿಜಯಕುಮಾರ್ ಶೆಟ್ಟಿ ಮತ್ತು ಕಾಂಗ್ರೆಸ್‌ನ ಮಾಜಿ ಸದಸ್ಯ ಬಿ.ವಿಶ್ವನಾಥ್ ಸ್ಪರ್ಧಿಸಿದವರು. ಸೆಂಟ್ರಲ್ ಮಾರ್ಕೆಟ್ ವಾರ್ಡ್‌ನಲ್ಲಿ ಬಿಜೆಪಿಯ ಪೂರ್ಣಿಮಾ ವಿರುದ್ಧ ಕಾಂಗ್ರೆಸ್‌ನ ಮಾಜಿ ಸದಸ್ಯ ಮಮತಾ ಶೆಣೈ ಅದೃಷ್ಟ ಪರೀಕ್ಷಿಸಿದರೆ, ಫಳ್ನೀರ್ ವಾಡ್ ನರ್ಲ್ಲಿ ಕಾಂಗ್ರೆಸ್‌ನ ಮಾಜಿ ಮೇಯರ್ ಜೆಸಿಂತಾ ವಿಜಯ ಆಲ್ಪ್ರೆಡ್ ವಿರುದ್ಧ ಕಾಂಗ್ರೆಸ್‌ನ ಮಾಜಿ ಸದಸ್ಯ ಆಶಾ ಡಿಸಿಲ್ವ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿರುವುದು ಕುತೂಹಲ ಸೃಷ್ಟಿಸಿದೆ.

29 ವಾರ್ಡ್‌ಗಳಲ್ಲಿ 82 ಮಹಿಳೆಯರು:

ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧಿಸಿರುವ ೧೮೦ ಅಭ್ಯರ್ಥಿಗಳ ಪೈಕಿ 82ಮಂದಿ ಮಹಿಳೆಯರು. 60 ವಾರ್ಡ್‌ಗಳಲ್ಲಿ 29 ವಾರ್ಡ್‌ಗಳು ಮಹಿಳಾ ಮೀಸಲು ಹೊಂದಿದೆ. ಕಾಂಗ್ರೆಸ್ ಮಹಿಳಾ ಮೀಸಲು ಕ್ಷೇತ್ರಗಳಿಗೆ ಸೀಮಿತವಾಗಿ 29 ಮಂದಿಗೆ ಅವಕಾಶ ನೀಡಿದೆ. ಬಿಜೆಪಿ ಹೆಚ್ಚುವರಿಯಾಗಿ ಎರಡು ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಿದ್ದು, ಬಿಜೆಪಿಯ 31 ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಪಾಲಿಕೆಯ 60 ವಾರ್ಡ್‌ಗಳ ಪೈಕಿ 18 ವಾರ್ಡ್ ಸಾಮಾನ್ಯ ಮಹಿಳೆ, 8 ವಾರ್ಡ್ ಹಿಂದುಳಿದ ವರ್ಗ ಎ ಮಹಿಳೆ , ಎರಡು ವಾರ್ಡ್ ಹಿಂದುಳಿದ ವರ್ಗ ಬಿ ಮಹಿಳೆ, ೧ವಾರ್ಡ್ ಪರಿಶಿಷ್ಟ ಜಾತಿ ಮಹಿಳೆ ಮೀಸಲು ಹೊಂದಿದೆ.

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ : ಮತ ಎಣಿಕೆ ಆರಂಭ

ಬಿಜೆಪಿಯಿಂದ 31, ಕಾಂಗ್ರೆಸ್-29, ಜೆಡಿಎಸ್-3, ಸಿಪಿಎಂ-3, ಎಸ್‌ಡಿಪಿಐ-2, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ -1, ಸಿಪಿಐ-1 ಮಹಿಳೆಯರು ಅಭ್ಯರ್ಥಿಗಳಾಗಿದ್ದಾರೆ. 12 ಮಂದಿ ಮಹಿಳೆಯರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ.

ಬಿಜೆಪಿಯಿಂದ ಅಲ್ಪಸಂಖ್ಯಾತ ಅಭ್ಯರ್ಥಿಗಳು :

ಬಿಜೆಪಿಯಿಂದ 4 ಮಂದಿ ಅಲ್ಪಸಂಖ್ಯಾತರು ಸ್ಪರ್ಧಿಸಿದ್ದಾರೆ. ಆಶಾ ಡಿಸಿಲ್ವ (ಫಳ್ನೀರ್), ಅರ್ಶದ್ (ಕುದ್ರೋಳಿ), ಜೆಸ್ಸೆಲ್ ವಿಯೋಲಾ ಡಿಸೋಜಾ (ಬೆಂದೂರು ) ಮತ್ತು ಸುರೈಯಾ(ಕಾಟಿಪಳ್ಳ) ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ. ಎಂಬಿಎ ಪದವೀಧರೆ 26ರ ಹರೆಯದ ಜೆಸ್ಸೆಲ್ ವಿಯೋಲಾ ಡಿಸೋಜಾ ಬೆಂದೂರು ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಹಿರಿಯ ಸದಸ್ಯ ನವೀನ್ ಡಿಸೋಜಾ ವಿರುದ್ಧ ಅದೃಷ್ಟ ಪರೀಕ್ಷಿಸಲಿದ್ದಾರೆ. 10ನೇ ತರಗತಿಯಲ್ಲಿರುವಾಗ ಥೈರಾಯ್ಡ್ ಸಂಬಂಧಿತ ಕ್ಯಾನ್ಸರ್ ನಿಂದ ಬಳಲಿದ್ದ ಜೆಸ್ಸೆಲ್, ಕ್ಯಾನ್ಸರ್ ಮಹಾಮಾರಿ ವಿರುದ್ದ ಹೋರಾಡಿ ಈಗ ಯಶಸ್ವಿ ಬದುಕು ರೂಪಿಸಿಕೊಂಡವರು.

ಇತರ ಕ್ಷೇತ್ರದಲ್ಲಿ ಅವಕಾಶ:

ಪರಿಶಿಷ್ಟ ಮೀಸಲು ಇರುವ ಬೈಕಂಪಾಡಿ ವಾರ್ಡ್‌ನಲ್ಲಿ ಬಿಜೆಪಿ ಮಾಜಿ ಉಪ ಮೇಯರ್ ಸುಮಿತ್ರ ಅವರು ಸ್ಪರ್ಧಿಸಿದ್ದಾರೆ. ಈ ವಾರ್ಡ್‌ನಲ್ಲಿ ಕಾಂಗ್ರೆಸ್ ನಿಂದ ಸುಧಾಕರ್ ಅಭ್ಯರ್ಥಿಯಾಗಿದ್ದಾರೆ. ಸಾಮಾನ್ಯ ಮೀಸಲು ಇರುವ ಬೆಂದೂರ್ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ನವೀನ್ ಡಿಸೋಜ ವಿರುದ್ಧ ಬಿಜೆಪಿ ಜೆಸ್ಸೆಲ್ ಡಿಸೋಜಾ ಸ್ಪರ್ಧಿಸಿದ್ದಾರೆ. ಈ ವಾರ್ಡ್‌ಗಳಲ್ಲಿ ಮಹಿಳಾ ಮೀಸಲು ಇಲ್ಲವಾದರೂ ಬಿಜೆಪಿ ಮಹಿಳೆಯರಿಗೆ ಅವಕಾಶ ಕಲ್ಪಿಸಿದೆ.

ಮಂಗಳೂರಿಗೆ ಬಂದ ಎರಡನೇ ಪ್ರವಾಸಿ ನೌಕೆ, ಕರಾವಳಿಯ ಸೊಬಗು ಸವಿದ ವಿದೇಶಿಗರು

ಥಿ ಬಿಜೆಪಿ - ಹೇಮಲತಾ ರಘು ಸಾಲ್ಯಾನ್, ಪೂರ್ಣಿಮಾ , ಸುಮಿತ್ರಾ, ಆಶಾ ಡಿಸಿಲ್ವ ಥಿ ಕಾಂಗ್ರೆಸ್- ಪ್ರತಿಭಾ ಕುಳಾಯಿ, ಜೆಸಿಂತಾ ವಿಜಯ ಅಲ್ಫ್ರೆಡ್, ರತಿಕಲಾ ಥಿ ಜೆಡಿಎಸ್- ರಮೀಜಾ ಬಾನು ಥಿ ಪಕ್ಷೇತರ- ರೇವತಿ ಪುತ್ರನ್, ಗುಲ್ಜಾರ್‌ಬಾನು

15 ವಾರ್ಡ್‌ಗಳಲ್ಲಿ ನೇರ ಸ್ಪರ್ಧೆ ಮಹಿಳಾ ಮೀಸಲು ಇರುವ 15 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಸ್ಪರ್ಧೆ ಇದೆ. 11 ವಾರ್ಡ್‌ಗಳಲ್ಲಿ ತ್ರಿಕೋನ ಸ್ಪರ್ಧೆ ಇದ್ದರೆ, ಕಾಟಿಪಳ್ಳ ಕೃಷ್ಣಾಪುರ ವಾರ್ಡ್‌ನಲ್ಲಿ ೪ ಮಂದಿ ಮಹಿಳೆಯರು ಕಣದಲ್ಲಿದ್ದಾರೆ. ಕಾಟಿಪಳ್ಳ ಉತ್ತರ, ಇಡ್ಯಾ ಪೂರ್ವ ಮತ್ತು ಪಣಂಬೂರು ವಾರ್ಡ್‌ನಲ್ಲಿ ಗರಿಷ್ಠ ತಲಾ ಐದು ಮಂದಿ ಮಹಿಳಾ ಅಭ್ಯರ್ಥಿಗಳಿದ್ದಾರೆ.

ಮಂಗಳೂರು ಪಾಲಿಕೆ ಚುನಾವಣೆ: ಆಕ್ಸಿಜನ್ ಪೈಪ್ ಹಿಡ್ಕೊಂಡೇ ಓಟ್ ಮಾಡಿದ್ರು..

29 ಮಂದಿ ನಿಕಟಪೂರ್ವ ಸದಸ್ಯರು ಸಹಿತ 41 ಮಂದಿ ಸದಸ್ಯರು ಮತ್ತೆ ಸ್ಪರ್ಧೆ ಥಿ ಜೀವನ ನಿರ್ವಹಣೆಗೆ ಮನೆಮನೆಗೆ ಆಹಾರ ವಿತರಣೆ ಮಾಡುತ್ತಿದ್ದ ಫುಡ್ ಡೆಲಿವರಿ ಗರ್ಲ್ ಮೇಘನಾದಾಸ್ ಮಣ್ಣಗುಡ್ಡೆ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ. ಥಿ ಕಾಂಗ್ರೆಸ್‌ನ ಮಾಜಿ ಸದಸ್ಯ ಬಿ.ವಿಶ್ವನಾಥ್ ಕಂಕನಾಡಿ ವಾರ್ಡ್‌ನಿಂದ, ಮಾಜಿ ಮೇಯರ್ ಗುಲ್ಜಾರ್‌ಬಾನು ಕಾಟಿಪಳ್ಳ ಉತ್ತರ ವಾರ್ಡ್‌ನಿಂದ ಪಕ್ಷೇತರರಾಗಿ ಸ್ಪರ್ಧೆ.

ಮಂಗಳೂರು: ಪಾಲಿಕೆ ಮತದಾನ ಶಾಂತಿಯುತ, ನೀರಸ

ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ 14 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ  ಪ್ರಕಟವಾಗಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಒಟ್ಟು 409 ವಾರ್ಡ್‌ಗಳಿಗೆ ಮಂಗಳವಾರ ಮತದಾನ ನಡೆದಿದ್ದು, ಗುರುವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳಲಿದೆ. 

Follow Us:
Download App:
  • android
  • ios