ಮಂಗಳೂರು(ನ.09): 2020ರಲ್ಲಿ ಚುನಾವಣೆ ಆಗಬಹುದು. ಈಗ ಸದ್ಯ ಬಿ. ಎಸ್. ಯಡಿಯೂರಪ್ಪ ಅವರು ಮುಂದುವರಿಯಲಿ. ನಮಗೆ ಪಕ್ಷ ಸಂಘಟನೆಗೆ ಸಮಯ ಬೇಕು ಎಂದು ಮಾಜಿ ಪ್ರಧಾನಿ  ಎಚ್‌. ಡಿ. ದೇವೇಗೌಡ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, 2020ಕ್ಕೆ ರಾಜ್ಯದಲ್ಲಿ‌ ಚುನಾವಣೆ ಆಗುವ ಸಾಧ್ಯತೆ ಇದೆ. ಇದು ನನ್ನ ಮನಸ್ಸಿಗೆ ಬಂದಿದೆ. ಅನರ್ಹರ ತೀರ್ಪು ಯಾವ ರೀತಿ ಬರುತ್ತೆ ಅಂತ ನೋಡೋಣ. ಬಹುಶಃ ಚುನಾವಣೆ ಆಗಬಹುದು ಎನ್ನುವುದು ನನ್ನ ಭಾವನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪಕ್ಷದಿಂದ ಹೊರ ಹಾಕಿದವರಿಗೆ ಪಕ್ಷ ಕಟ್ಟಲು ನಾನೇ ಬೇಕಾಯ್ತು! ಗೌಡರ ಗುದ್ದು

ಸದ್ಯಕ್ಕೆ ಯಡಿಯೂರಪ್ಪನವರೇ ಮುಂದುವರಿಯಲಿ. ನಮಗೆ ಪಕ್ಷ ಸಂಘಟಿಸಲು‌ ಸಮಯ ಕೂಡ ಬೇಕಾಗಿದೆ. ಮುಂದೆ ಜೆಡಿಎಸ್ ಪಕ್ಷವನ್ನು ಬಿಟ್ಟು ಯಾವ ಪಕ್ಷಕ್ಕೂ ಸರ್ಕಾರ ಮಾಡೋಕೆ ಆಗಲ್ಲ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಎಸ್‌ವೈ ಸರ್ಕಾರವನ್ನು ಸದ್ಯದ ಮಟ್ಟಿಗೆ ಜೆಡಿಎಸ್ ಬೆಂಬಲಿಸುತ್ತದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

ಕುಮಾರಸ್ವಾಮಿ ಸಿಎಂ ಆಗಲು ಡಿಕೆಶಿ ಸಂಪೂರ್ಣ ಬೆಂಬಲ :HDD