ಪಕ್ಷದಿಂದ ಹೊರ ಹಾಕಿದವರಿಗೆ ಪಕ್ಷ ಕಟ್ಟಲು ನಾನೇ ಬೇಕಾಯ್ತು! ಗೌಡರ ಗುದ್ದು
ಮಾಗಡಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿಕೆ/ ನಾವು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ/ ಉಪಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ.
ರಾಮನಗರ[ನ. 07] ಉಪ ಚುನಾವಣೆಯಲ್ಲಿ ನಾವು ಸ್ಪರ್ಧಿಸುತ್ತೇವೆ. ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳಲ್ಲ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮಾಗಡಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ,
ಪಕ್ಷದಿಂದ ಹೊರಗೆ ಹಾಕಿದ್ದವರಿಗೆ, ಪಕ್ಷ ಕಟ್ಟಲು ನಾನೇ ಬೇಕಾಯ್ತು. ಒಂದು ಜಾತಿಗೆ ಸೀಮಿತವಾದ ರಾಜಕಾರಣ ನಾನು ಎಂದೂ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹರಿಹಾಯ್ದರು.
ಅಲ್ಲೋಲ-ಕಲ್ಲೋಲ ಸೃಷ್ಟಿಸಿದ ಗೌಡರ ಈ ಒಂದು ಹೇಳಿಕೆ
ಅಲ್ಲೊಬ್ಬ ಅಹಿಂದ ಅಹಿಂದ ಅಂತಾನೆ. ನಾನು ನೋಡದಿರೋ ಅಹಿಂದ ನಾ. ಅಹಿಂದ ದಿಂದ ಯಾವ ಜಾತಿಗೆ ಎಷ್ಟು ಲಾಭ ಇದೇ ಅಂತಾ ಟೈಮ್ ಬರಲಿ ಹೇಳ್ತೇನೆ
ಬಿಜೆಪಿ ಹಾಗೂ ಕಾಂಗ್ರೆಸ್ ಇಬ್ಬರ ವಿರುದ್ದವೂ ನಾನು ಹೋರಾಟ ಮಾಡಿದ್ದೇನೆ ಎಂದು ಹೇಳಿದರು.
ಕನಕಪುರದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿಗೆ ಕಾರಣವನ್ನು ಗೌಡರು ಹೇಳಿದರು. ಕನಕಪುರದಲ್ಲಿ ನಮ್ಮ ಶಕ್ತಿ ಕಡಿಮೆ ಇದೆ. ಡಿಕೆಶಿ ಅಲ್ಲಿ ಪ್ರಬಲರಾಗಿರುವ ಹಿನ್ನೆಲೆ ನಾವು 4 ಕಡೆ ಸ್ಪರ್ಧೆ ಮಾಡಿದ್ದೇವೆ. ಆ ಹಿನ್ನಲೆ ನಗರಸಭೆ ಚುನಾವಣೆಯಲ್ಲಿ ನಾವು ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಸ್ಥಳೀಯ ಕಾರ್ಯಕರ್ತರು ಬಿಜೆಪಿಗೆ ಅವಕಾಶ ಕೊಡಬಾರದು ಅಂತಾ ನಿರ್ಧರಿಸಿದ್ದಾರೆ, ಹೆಚ್ಡಿಕೆಗೆ ಡಿಕೆಶಿ ಬಲ ಕೊಟ್ಟು ಸಿಎಂ ಆಗುವಂತೆ ಬೆಂಬಲಿಸಿದ್ದರು ಎಂದರು.
ರಾಜ್ಯದ ಬೇರೆ ಬೇರೆ ಜಿಲ್ಲೆಯ ಎಲ್ಲ ಕಡೆ ನಾವು ಸ್ಪರ್ಧೆ ಮಾಡಿದ್ದೇವೆ. ಇದರಲ್ಲಿ ಬೇರೇನು ಅರ್ಥ ಕಲ್ಪಿಸುವ ಅಗತ್ಯತೆ ಇಲ್ಲ. ನಮ್ಮ ಶಕ್ತಿ ಎಷ್ಟಿದೆಯೋ ಅಷ್ಟಕ್ಕೆ ಸ್ಪರ್ಧೆ ಮಾಡಿದ್ದೇವೆ. ಇಬ್ಬರ ಜೊತೆ ಮೈತ್ರಿ ಮಾಡಿ ನೋಡಿ ಆಗಿದೆ ಎಂದು ಇತಿಹಾಸವನ್ನು ಮತ್ತೆ ಉಲ್ಲೇಖ ಮಾಡಿದರು.