ಕುಮಾರಸ್ವಾಮಿ ಸಿಎಂ ಆಗಲು ಡಿಕೆಶಿ ಸಂಪೂರ್ಣ ಬೆಂಬಲ :HDD

ರಾಮನಗರದ ಹಲವು ಕಡೆ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯ ಪ್ರಚಾರದಲ್ಲಿ ದೇವೇಗೌಡರು ಪಾಲ್ಗೊಂಡು ಮುಂದಿನ ರಾಜಕೀಯ ನಡೆಗಳ ಬಗ್ಗೆಯೂ ಮಾತಾಡಿದ್ದು, ಮೈತ್ರಿ ಸರ್ಕಾರ ರಚನೆ ವೇಳೆ ಡಿಕೆಶಿ ಮಾಡಿದ ಬೆಂಬಲವನ್ನು ನೆನೆದರು.

JDS Contest Independently in Karnataka By Election Says HD Devegowda

ಮಾಗಡಿ [ನ.08]:  ಸ್ಥಳೀಯ ಸಂಸ್ಥೆ ಹಾಗೂ ವಿಧಾನಸಭೆಯ ಉಪ ಚುನಾವಣೆಗಳಲ್ಲಿ ಯಾವುದೇ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳದೆ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಎಂದು ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದರು. 

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆ ಮತ್ತು ಪುರಸಭೆ ಚುನಾವಣೆಗಳಲ್ಲಿ ನಮಗೆ ಹೆಚ್ಚು ಶಕ್ತಿ ಇರುವ ವಾರ್ಡುಗಳಲ್ಲಿ ಅಭ್ಯರ್ಥಿಗಳನ್ನು ಹಾಕಿದ್ದೇವೆ. ಆದರೆ, ಅನರ್ಹ ಶಾಸಕರ ಕ್ಷೇತ್ರಗಳ ಉಪಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ ಎಂದರು.

ಅನರ್ಹ ಶಾಸಕರ ಪ್ರಕರಣ ನ್ಯಾಯಾಲಯ ದಲ್ಲಿದ್ದು, ಅವರ ಪರವಾಗಿ ತೀರ್ಪು ಬಂದರೆ ಉಪ ಚುನಾವಣೆ ನಡೆಯುವುದಿಲ್ಲ, ಒಂದು ವೇಳೆ ಅನರ್ಹರ ವಿರುದ್ಧ ತೀರ್ಪು ಬಂದು ಚುನಾವಣೆಯ ಘೋಷಣೆಯಾದರೆ ಜೆಡಿಎಸ್ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಸ್ಪಷ್ಟಪಡಿಸಿದರು. ಮಾಗಡಿ, ಕನಕಪುರ, ಕೋಲಾರ, ಮಂಗಳೂರು ಸೇರಿದಂತೆ ಕೆಲ ತಾಲೂಕುಗಳಲ್ಲಿ ಪುರಸಭೆ ಹಾಗೂ ನಗರ ಸಭೆಯ 400 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು,  268 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕನಕಪುರದಲ್ಲಿ ಜೆಡಿಎಸ್ ಶಕ್ತಿ ಕಡಿಮೆ ಇರುವುದರಿಂದ ಹೆಚ್ಚಿನ ವಾರ್ಡು ಗಳಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ ಎಂದರು.

ಡಿಕೆಶಿ ಹಿಡಿತ: ತಾವು ಕನಕಪುರ ಲೋಕಸಭಾ ಸಂಸದನಾದ ನಂತರ ಕನಕಪುರ ಕ್ಷೇತ್ರವನ್ನು ಡಿ.ಕೆ. ಶಿವಕುಮಾರ್ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಅಲ್ಲಿ ನಮ್ಮ ಶಕ್ತಿ ಕಡಿಮೆ ಇದೆ. ಎಚ್.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಲು ಡಿ.ಕೆ. ಶಿವಕುಮಾರ್ ಸಂಪೂರ್ಣ ಬೆಂಬಲ ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಾರಿ ನಿರ್ದೇಶನಾಲಯದ ಹೊಡೆತದಿಂದ ಡಿ.ಕೆ. ಶಿವಕುಮಾರ್ ನೋವಿನಲ್ಲಿದ್ದಾರೆ. ಕನಕಪುರದಲ್ಲಿ ಬಿಜೆಪಿಗೆ ಅಧಿಕಾರ ಸಿಗಬಾರದು ಎನ್ನುವ ಉದ್ದೇಶ ದಿಂದ 4 ಸ್ಥಾನಗಳಿಗೆ ಮಾತ್ರ ಪಕ್ಷದ ಅಭ್ಯರ್ಥಿಗಳು  ಸ್ಪರ್ಧಿಸಿದ್ದು, ಯಾವ ಕಾರಣಕ್ಕೂ ನಾವು ಪ್ರಚಾರಕ್ಕೆ ಹೋಗುವುದಿಲ್ಲ ಎಂದು ತಿಳಿಸಿದರು. ತಾವು ಒಂದು ಜಾತಿಗೆ ಸೀಮಿತವಾಗಿ ರಾಜ ಕಾರಣ ಮಾಡುತ್ತಿಲ್ಲ, ಜೆಡಿಎಸ್ ಪಕ್ಷದಿಂದ ಮಡಿವಾಳ, ಮುಸ್ಲಿಂ, ಬೆಸ್ತ ಸಮುದಾಯ, ಕುರುಬರು ಸೇರಿದಂತೆ ಎಲ್ಲಾ ಜಾತಿಯ ಮುಖಂಡರನ್ನು ಬೆಳೆಸಿ ಅವರಿಗೆ ಅಧಿಕಾರ ನೀಡಿದ್ದೇನೆ. 

ಆದರೆ, ತಮ್ಮಲ್ಲಿಯೇ ಬೆಳೆದವರೊಬ್ಬರು ಆಹಿಂದ, ಅಹಿಂದ ಎನ್ನುತ್ತಿದ್ದಾರೆ. ಅಹಿಂದವನ್ನು ಸ್ಥಾಪಿಸಿ ಎಷ್ಟು ಮುಖಂಡರಿಗೆ ಅಧಿಕಾರ ನೀಡಿದ್ದಾರೆ. ಅಹಿಂದದಿಂದ ಯಾವ ಜಾತಿಗೆ ಎಷ್ಟು ಲಾಭವಾಗಿದೆ ಎಂಬುದನ್ನು ಸಮಯ ಬರಲಿ ಹೇಳುತ್ತೇನೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯಅವರನ್ನು ದೇವೇಗೌಡರು ಟೀಕಿಸಿದರು.

ಪುರುಷರಷ್ಟೇ ಮಹಿಳೆಯರಿಗೂ ಸಹ ರಾಜಕೀ ಯದ ಸಮಾನ ಸ್ಥಾನ ಸಿಗಬೇಕು ಎನ್ನುವ ಉದ್ದೇಶದಿಂದ ತಾವು ಪ್ರಧಾನ ಮಂತ್ರಿಯಾದ ಸಮಯದಲ್ಲಿ ಮಹಿಳಾ ಮೀಸಲಾತಿಯನ್ನು ತರಲಾಯಿತು. ಇಂದು ಹಲವು ಮಹಿಳೆಯರು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ತಮ್ಮ ಗರಡಿಯಲ್ಲಿ ಪಳಗಿದ ಬಹಳಷ್ಟು ಮಂದಿ ಇಂದು ಬಿಜೆಪಿ ಸರಕಾರದಲ್ಲಿ ಸಚಿವರಾಗಿದ್ದಾರೆ, ಇನ್ನು ಕೆಲವರು ಮುಖ್ಯಮಂತ್ರಿ ಸಹ ಆಗಿದ್ದಾರೆ ಎಂದು ಹೇಳಿದರು. 

Latest Videos
Follow Us:
Download App:
  • android
  • ios