ಮಂಗಳೂರು(ನ.10): ಅಯೋಧ್ಯೆ ವಿವಾದ ಕುರಿತ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುವುದಾಗಿ ತಿಳಿಸಿರುವ ಮಾಜಿ ಪ್ರಧಾನಿ ದೇವೇಗೌಡ ಅವರು, ವಿವಾದಿತ ಕಟ್ಟಡ ಒಡೆದದ್ದು ತಪ್ಪು ಎಂದು ಸುಪ್ರೀಂ ಕೋರ್ಟ್ ಹೇಳಿರುವುದರಿಂದ ಅದಕ್ಕೆ ಸೂಕ್ತ ಪರಿಹಾರ ನೀಡಲು ಹೇಳಬಹುದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಿಸಲು ಪ್ರತ್ಯೇಕ ಟ್ರಸ್ಟ್ ರಚಿಸುವಂತೆ ಕೋರ್ಟ್ ನಿರ್ದೇಶನ ನೀಡಿದೆ. ಈ ಟ್ರಸ್ಟ್‌ನಲ್ಲಿ ಯಾರು ಇರಬೇಕು? ಟ್ರಸ್ಟ್‌ನ ವ್ಯಾಪ್ತಿ ಆರ್‌ಎಸ್‌ಎಸ್ ಅಥವಾ ಕೇಂದ್ರ ಸರ್ಕಾರದ್ದೋ? ಹೇಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇದೆ. ಏನೆಲ್ಲ ನಿಯಮ ರೂಪಿಸಿ ಮಂದಿರ ನಿರ್ಮಿಸುತ್ತಾರೆಂಬುದು ಸ್ಪಷ್ಟವಿಲ್ಲ ಎಂದಿದ್ದಾರೆ.

ಫೇಸ್‌ಬುಕ್, ಟ್ವಿಟರ್‌ ಮೇಲೆ ಇನ್ನೂ ಕೆಲ ದಿನ ಕಣ್ಣು..!

7 ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದಕ್ಕೆ ಶನಿವಾರ ತೆರೆ ಬಿದ್ದಿದ್ದು, ಸುಪ್ರೀಂ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ತೀರ್ಪು ನೀಡಿದೆ. ಯಾರ ಭಾವನೆಗೂ ಧಕ್ಕೆಯಾಗದಂತೆ ಬಾಬರಿ ಮಸೀದಿಗೂ ಅಯೋಧ್ಯೆಯಲ್ಲೇ ಪ್ರತ್ಯೇಕ ಜಾಗವನ್ನು ಕಲ್ಪಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

ಅಯೋಧ್ಯೆ ತೀರ್ಪು ಬರ್ತಾ ಇದೆಯಣ್ಣಾ... ಜನ ಇಂಟರ್ನೆಟ್ಟಲ್ಲಿ ಹುಡುಕಿದ್ದು ಇದನ್ನ!?