ಬೆಂಗಳೂರು (ನ.09): ಅಯೋಧ್ಯೆ ತೀರ್ಪು ಶನಿವಾರ ಬರ್ತಾ ಇದೆ ಎಂಬ ಸುದ್ದಿ ಶುಕ್ರವಾರ ರಾತ್ರಿ ಬೆಂಕಿಯಂತೆ ಹಬ್ಬಿತ್ತು.

ಮುಂದೇನು? ಎಲ್ಲರಿಗೂ ‘ಮುಂದೇನು’ ಎಂಬ ಚಿಂತೆ ಶುರುವಾಗಿ ಬಿಡ್ತು! ತೀರ್ಪು ಏನಾಗುತ್ತೆ ಎಂಬ ಚಿಂತೆ ಅಂತಾ ಭಾವಿಸ್ಕೊಂಡ್ರಾ? ಅಯೋಧ್ಯೆ ವಿವಾದ ಏನು? ಅಯೋಧ್ಯೆ ಸಮಸ್ಯೆ ಹೇಗೆ ಶುರುವಾಯ್ತು? ಅಯೋಧ್ಯೆ ಕಾನೂನು ಸಮರ ಹೇಗೆ ನಡೆಯಿತು? ಇತ್ಯಾದಿ ಹುಡುಕಾಟ ನಡೆಸಿದ್ರು ಎಂದು ಭಾವಿಸದ್ರಾ? ಸ್ಸಾರಿ, ಅದು ನಿಮ್ಮ ತಪ್ಪು ತಿಳುವಳಿಕೆ! 

ನೆಟ್ಟಿಗರು, ವಿಶೇಷವಾಗಿ ಯುವಜನರ ತಲೆಯಲ್ಲೇನಿದೆ ಎಂದು ತಿಳಿಬೇಕಾದ್ರೆ ಗೂಗಲ್ ಮಹಾಶಯನನ್ನ ಕೇಳಿದ್ರೆ ಸಾಕು. ಎಲ್ಲಾ ಗೊತ್ತಾಗುತ್ತೆ. ಹಾಗಾದ್ರೆ ಜನ ಗೂಗಲ್‌ನಲ್ಲಿ ಏನ್ ಹುಡುಕಿದ್ರು ಗೊತ್ತಾ? ಅದು ಗೊತ್ತಾದ್ರೆ ನೀವು ಬೆಸ್ತುಬೀಳುವುದು ಪಕ್ಕಾ....

ದುರಾದೃಷ್ಟವಶಾತ್ ಅಯೋಧ್ಯೆ ಕೋಮುಸೂಕ್ಷ ವಿಷಯ. ತೀರ್ಪು ಪ್ರಕಟವಾಗುತ್ತೆ ಎಂಬ ಹಿನ್ನೆಲೆಯಲ್ಲಿ, ಶಾಂತಿ & ಸುವ್ಯವಸ್ಥೆ ಕಾಪಾಡಲು ಸರ್ಕಾರ ಹಲವೆಡೆ ಸೆಕ್ಷನ್ 144 ಜಾರಿಗೊಳಿಸಿದೆ. ಇಲ್ಲೇ ಇದೇ ನೋಡಿ ಉತ್ರ!

ಹೌದು, ಜನ ಗೂಗಲ್ ಗೆ ಕೇಳಿದ್ದು ಇದೇ ಪ್ರಶ್ನೆ What is Section 144?!!!

ಮತ್ತೆ ನೆಕ್ಸ್ಟ್ ಪ್ರಶ್ನೆ ಏನು? 
...
...
...
ಹೌದು, ಸರಿಯಾಗಿಯೇ ಊಹಿಸ್ತಾ ಇದ್ದೀರಿ.  ‘ನಾಳೆ ರಜೆಯೋ’ ಎಂದು ಜನ ಗೂಗಲ್ ಅನ್ನ ಕೇಳಿದ್ದಾರೆ.  ಮುಂಜಾಗೃತ ಕ್ರಮವಾಗಿ ಸರ್ಕಾರಗಳು ಮದ್ಯ ಮಾರಾಟವನ್ನು ನಿಷೇಧಿಸಿದ್ದವು. ಶಾಲಾ-ಕಾಲೇಜುಗಳಿಗೆ ರಜೆ ಇದೆಯೋ ಇಲ್ಲವೋ ಎಂಬುವುದನ್ನ ಜನ ಗೂಗಲ್ ಹತ್ರ ವಿಚಾರಿಸಿದ್ದಾರೆ.

ಇವುಗಳ ಹೊರತು ಜನರ ಕುತೂಹಲ ಏನ್ ವಿಚಾರದ ಬಗ್ಗೆ ಅಂತಾ ನೋಡಿದ್ರೆ ಅಬ್ಬಬ್ಬಾ!

ಚೀಫ್ ಜಸ್ಟಿಸ್ ರಂಜನ್ ಗೊಗೊಯ್ ಯಾರು? ಯಾವ ರಾಜ್ಯದವರು? ಯಾವ ಧರ್ಮದವರು ಎಂದು ಜನ ಗೂಗಲ್‌ಗೆ ಕೇಳಿದ್ದಾರೆ!

ಇರಲಿ ಬಿಡಿ... ಯಾರ್ಯಾರಿಗೋ ಏನೇನೋ ಕುತೂಹಲ ಇರುತ್ತೆ ಬಿಡಿ. ಸುಪ್ರೀಂ ಕೋರ್ಟ್ ಅಯೋಧ್ಯೆ ಬಗ್ಗೆ ತೀರ್ಪನ್ನು ಪ್ರಕಟಿಸಿಯಾಗಿದೆ.

ನಮ್ಗೆ ಗೊತ್ತಾಗಿರುವಂತೆ ನಮ್ ಜನ ಅದನ್ನ ಬಹಳ ಸೌಹಾರ್ದತೆಯಿಂದ ಸ್ವೀಕರಿಸಿದ್ದಾರೆ. ಶಾಂತಿಯುತವಾಗಿ, ಸಂಯಮದಿಂದ, ತಾಳ್ಮೆಯಿಂದ ವರ್ತಿಸಿದ್ದಾರೆ. ಅದಕ್ಕೇ ನಮ್ ಇಂಡಿಯಾ ಯಾವಾಗ್ಲೂ ಗ್ರೇಟ್....  ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ ಹಾಡೋಣ.... ಮುಂದೆ ಹೆಜ್ಜೆ ಹಾಕೋಣ...