ಬೆಂಗಳೂರು(ನ.10): ಅಯೋಧ್ಯೆ ವಿವಾದದ ತೀರ್ಪು ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇನ್ನೂ ಕೆಲ ದಿನಗಳ ಕಾಲ ಸಾಮಾಜಿಕ ಜಾಲತಾಣಗಳ ಮೇಲಿನ ಕಣ್ಗಾವಲನ್ನು ಮುಂದುವರೆಸಲು ರಾಜ್ಯ ಗೃಹ ಇಲಾಖೆ ನಿರ್ಧರಿಸಿದೆ.

ಶನಿವಾರ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತು ಮುಖ್ಯಮಂತ್ರಿಗಳಿಗೆ ಪ್ರಾಥಮಿಕ ಹಂತದ ವರದಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಈ ವಿಷಯ ತಿಳಿಸಿದ್ದಾರೆ.

5 ಎಕರೆ ಭೂಮಿಯ ಭಿಕ್ಷೆ ಬೇಡ: ಇದು ಒವೈಸಿ ರಿಯಾಕ್ಷನ್!

ತೀರ್ಪಿನ ಸಂಬಂಧ ಪರ, ವಿರುದ್ಧವಾಗಿ ವಿಜಯೋತ್ಸವ, ಪ್ರತಿಭಟನೆ ಹಾಗೂ ಘೋಷಣೆ ಕೂಗುವುದು ಸೇರಿ ಸಾರ್ವಜನಿಕ ಆಚರಣೆಗಳಿಗೆ ನಿರ್ಬಂಧಿಸಲಾಗಿದೆ. ಹೀಗಿದ್ದರೂ ಕೆಲ ಸಂಘಟನೆಗಳು ಹಾಗೂ ವ್ಯಕ್ತಿಗಳು, ಕೋಮು ಸಾಮರಸ್ಯ ಕದಡುವ ಕೃತ್ಯಕ್ಕೆ ಕೈ ಹಾಕಬಹುದು. ಈ ಹಿನ್ನೆಲೆಯಲ್ಲಿ ಇನ್ನು ಕೆಲ ದಿನಗಳು ಸಾಮಾಜಿಕ ಜಾಲತಾಣಗಳ ಮೇಲೆ ದಿನದ 24 ತಾಸು ಸೈಬರ್ ಕ್ರೈಂ ಹಾಗೂ ತಾಂತ್ರಿಕ ವಿಭಾಗದ ಪೊಲೀಸರು ನಿಗಾ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ರಾಮನ ಮಡಿಲಿಗೆ ಅಯೋಧ್ಯೆ: ಇವರೆಲ್ಲರ ಹೇಳಿಕೆಯಲ್ಲಿದೆ ಸಹೋದರತ್ವದ ವಿದ್ಯೆ!

ಅಯೋಧ್ಯೆ ತೀರ್ಪು ಪ್ರಕಟ ಬಳಿಕ ರಾಜ್ಯದ ವಾಸ್ತವ ಪರಿಸ್ಥಿತಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಾಥಮಿಕ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೇನೆ. ಬೆಂಗಳೂರಿನಲ್ಲೇ ಇದ್ದು ಭದ್ರತೆ ನಿರ್ವಹಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ಸೂಕ್ತ ಬಂದೋಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕೋಮು ಸೌಹಾರ್ದ ಕಾಪಾಡಿ:

ಎಲ್ಲರಿಗೂ ಒಪ್ಪಿತವಾಗುವ ತೀರ್ಮಾನವನ್ನು ಸರ್ವೋಚ್ಚ ನ್ಯಾಯಾಲಯ ನೀಡಿದೆ. ರಾಜ್ಯದಲ್ಲಿ ಎಲ್ಲೂ ಕೋಮು ಸಾಮರಸ್ಯಕ್ಕೆ ಭಂಗ ಉಂಟಾಗುವ ಘಟನೆಗಳು ನಡೆದಿಲ್ಲ. ಇದೇ ರೀತಿ ಕೋಮು ಸೌಹಾರ್ದವನ್ನು ಜನ ಕಾಪಾಡಿಕೊಳ್ಳಬೇಕು ಎಂದು ಇದೇ ವೇಳೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ಎರಡ್ಮೂರು ವಾರಗಳಿಂದಲೇ ಕಾನೂನು ಮತ್ತು ಸುವ್ಯವಸ್ಥೆ ಸಂಬಂಧ ತಯಾರಿ ಮಾಡಿ ಕೊಳ್ಳಲಾಗಿತ್ತು.

ಅಯೋಧ್ಯೆ ತೀರ್ಪು: ಪಂಚ ನ್ಯಾಯಾಧೀಶರಲ್ಲಿ ಒಬ್ಬರು ನಮ್ಮ ಕನ್ನಡಿಗರು!

ಠಾಣಾ ಮಟ್ಟದಲ್ಲಿ ಶಾಂತಿ ಸಭೆಗಳನ್ನು ನಡೆಸಲಾಗಿತ್ತು. ಹಿರಿಯ ಅಧಿಕಾರಿಗಳು ಸಹ ಪ್ರತ್ಯೇಕವಾಗಿ ಎರಡು ಸಮುದಾಯದ ಮುಖಂಡರೊಂದಿಗೆ ಸಮಾ ಲೋಚಿಸಿ ಶಾಂತಿ ಕಾಪಾಡುವಂತೆ ಕೋರಿದ್ದರು ಎಂದರು. ಅಲ್ಲದೆ, ಹಳೇ ಕೋಮು ಗಲಭೆ ಪ್ರಕರಣಗಳ ಆರೋಪಿಗಳು ಹಾಗೂ ಸಾಮಾಜಿಕ ಜಾಲತಾಣಗಳ ಪ್ರಚೋದನಾಕಾರಿ ಬರಹ ಪ್ರಕಟಿಸಿದ್ದವರ ಮೇಲೆ ನಿಗಾ ವಹಿಸಲಾಗಿತ್ತು ಎಂದು ಸಚಿವರು ಇದೇ ವೇಳೆ ಮಾಹಿತಿ ನೀಡಿದ್ದಾರೆ.

ಸೋಶಿಯಲ್ ಮೀಡಿಯಾ ಬಳಕೆದಾರರು ಗಮನಿಸಿ: ಅಯೋಧ್ಯೆ ರೂಲ್ಸ್ ಒಮ್ಮೆ ವಿಚಾರಿಸಿ!