ಮೈಸೂರು(ಸೆ.04): ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಗ್ಗೆ ಅಪಾರ ಗೌರವವಿದೆ. ಬೇರೊಬ್ಬರ ಸಂಕಟ ನೋಡಿ ಖುಷಿ ಪಡುವ ಮನಸ್ಥಿತಿ ನನ್ನದಲ್ಲ. ನಾನು ಹೇಳಿಕೆ ಹಿಂದಕ್ಕೆ ತೆಗೆದುಕೊಳ್ಳುವಂತಹ ಹೇಳಿಕೆ ನೀಡಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಸ್ಪಷ್ಟನೆ ನೀಡಿದರು.

ಡಿಸಿಎಂ ಆದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಕಾರಜೋಳ ಅವರನ್ನು ಪಕ್ಷದ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ್ಪು ತಿಂದಿದ್ದರೆ ನೀರು ಕುಡಿಯಬೇಕಾಗುತ್ತೆ ಅಂತ ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.

ಐಟಿ, ಇಡಿ ದುರುಪಯೋಗ: ಕಾಂಗ್ರೆಸ್‌ಗೆ ಕಾರಜೋಳ ಟಾಂಗ್

ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ:

ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಅಂತ ಹೇಳಿದ್ದೇನೆ. ತಪ್ಪು ಮಾಡದೇ ಇದ್ದರೆ ಅತಂಕ ಪಡುವ ಅಗತ್ಯವೇ ಇಲ್ಲ. ಕ್ಷಮೆ ಕೇಳುವಂತಹ ಹೇಳಿಕೆಯನ್ನು ನಾನೆಂದೂ ನೀಡಿಲ್ಲ. ನಾನು ವಿವಾದ ಆಗುವಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದರು. ಹಾಗೆ ನೋಡಿದರೆ ಡಿ.ಕೆ.ಶಿವಕುಮಾರ್ ನನ್ನ ಆತ್ಮೀಯ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ.

ಕಷ್ಟದಲ್ಲಿರುವವರನ್ನು ನೋಡಿ ಖುಷಿ ಪಡಲ್ಲ:

ನಾನು ಸಂಕಷ್ಟದಲ್ಲಿರುವ ವ್ಯಕ್ತಿಯನ್ನು ನೋಡಿ ಖುಷಿ ಪಡುವಷ್ಟು ಕೆಟ್ಟವನಲ್ಲ. ಈಗಲೂ ನೀವು ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬೇಕು. ಅವುಗಳು ಸ್ವತಂತ್ರ ಸಂಸ್ಥೆಗಳು. ಹಾಗೆಯೇ ಇಡಿ ಮತ್ತು ಐಟಿ ಸಂಸ್ಥೆಗಳು ಕಾಂಗ್ರೆಸ್ ಅಧಿಕಾರವಧಿಯಲ್ಲಿ ಮಾಡಿದ ತನಿಖೆಯನ್ನು ರಾಜಕೀಯ ಪ್ರೇರಿತ ಎಂದು ಹೇಳೋಕೆ ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಡಿಸಿಎಂ ಜೊತೆ BJP ಶಾಸಕ ಬರಲಿಲ್ಲ, JDS ಶಾಸಕ ಸಾಥ್ ಬಿಡಲಿಲ್ಲ