ಮೈಸೂರು(ಸೆ.03): ಕೇಂದ್ರ ಬಿಜೆಪಿ ಸರ್ಕಾರ ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದು, ಡಿಸಿಎಂ ಗೋವಿಂದ ಕಾರಜೋಳ ಇದಕ್ಕೆ ಪ್ರತ್ಯತ್ತರ ಕೊಟ್ಟಿದ್ದಾರೆ. ಡಿ. ಕೆ. ಶಿವಕುಮಾರ್ ವಿಚಾರಣೆ ಆರಂಭವಾದಾಗಿನಿಂದಲೂ ಇಡಿ ದುರ್ಬಳಕೆ ಆರೋಪ ಕೇಳಿ ಬರುತ್ತಿದ್ದು, ಡಿಸಿಎಂ ಕಾರಜೋಳ ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ.

ಕೇಂದ್ರ ಸರ್ಕಾರದಿಂದ ಇಡಿ, ಐಟಿ ದುರುಪಯೋಗ ಆರೋಪ ವಿಚಾರವಾಗಿ ಕಾಂಗ್ರೆಸ್ ಟೀಕೆ ಮಾಡುತ್ತಿದ್ದು, ಡಿಸಿಎಂ ಗೋವಿಂದ ಎಂ.ಕಾರಜೋಳ ಕಾಂಗ್ರೆಸ್‌ಗೆ ತಿರುಗುಬಾಣ ಬಿಟ್ಟಿದ್ದಾರೆ.

ವಿಜಯಪುರ: ನೆರೆ ಪರಿಹಾರದ ಚೆಕ್ ವಾಪಸ್ ಕೊಟ್ಟ ಬ್ಯಾಂಕ್‌

ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಆಯ್ತು. ಬಹುಕಾಲ ಕಾಂಗ್ರೆಸ್ ದೇಶವನ್ನು ಆಳಿದೆ. ಹಲವಾರು ಇಡಿ, ಐಟಿ ದಾಳಿಗಳು ನಡೆದಿವೆ. ಕಾಂಗ್ರೆಸ್ ಇಡಿ, ಐಟಿಯನ್ನು ದುರುಪಯೋಗ ಮಾಡಿಕೊಂಡಿದೆ ಅಂತ ಹೇಳೋದಕ್ಕೆ ಆಗುತ್ತ ? ಎಂದು ಪ್ರಶ್ನಿಸಿರುವ ಡಿಸಿಎಂ ಪರೋಕ್ಷವಾಗಿ ಹಿಂದೆಯೂ ಐಟಿ, ಇಡಿ ದುರುಪಯೋಗ ಆಗಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಭೀತಿ..!