ಮಂಗಳೂರು(ನ.05): ಮಂಗ​ಳೂ​ರು-ಬೆಂಗ​ಳೂರು ಸಂಪ​ರ್ಕ​ದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚಲಿಸುತ್ತಿದ್ದ ಬುಲೆಟ್‌ ಟ್ಯಾಂಕರ್‌ನ ವಾಲ್ವ್ ನಟ್‌ ಸಡಿಲಗೊಂಡು ಎಲ್‌​ಪಿಜಿ ಅನಿಲ ಕಾರಂಜಿ​ಯೋ​ಪಾ​ದಿ​ಯಲ್ಲಿ ಸೋರಿ​ಕೆ​ಯಾದ ಘಟನೆ ಸೋಮವಾರ ಬೆಳಗ್ಗೆ ಉಪ್ಪಿ​ನಂಗಡಿ ಸಮೀ​ಪದ ಕರು​ವೇಲು ಎಂಬಲ್ಲಿ ಸಂಭ​ವಿ​ಸಿ​ದೆ.

ಎಂಆ​ರ್‌​ಪಿ​ಎಲ್‌ ಸಂಸ್ಥೆಯ ಕ್ವಿಕ್‌ ರೆಸ್ಪಾನ್ಸ್‌ ವಾಹನ, ಸಿಬ್ಬಂದಿ ಹಾಗೂ ಗ್ರಾಮ​ಸ್ಥರ ಸಮ​ಯೋ​ಚಿತ ಕಾರ್ಯಾ​ಚರಣೆ​ಯಿಂದ ಸೋರಿ​ಕೆ​ಯನ್ನು ಯಶ​ಸ್ವಿ​ಯಾಗಿ ತಡೆ​ಗ​ಟ್ಟಲಾ​ಯಿ​ತು.

ಪ್ರಕ​ರ​ಣದ ವಿವ​ರ:

ಸೋಮವಾರ ಬೆಳಗ್ಗೆ ಮಂಗ​ಳೂ​ರಿ​ನಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಟೋಟಲ್‌ ಗ್ಯಾಸ್‌ ಸಾಗಾಟದ ಬುಲೆಟ್‌ ಟ್ಯಾಂಕರ್‌ ಕರುವೇಲು ತಲ​ಪು​ತ್ತಿ​ದ್ದಂತೆ ಒಂದೇ ಸವನೆ ಗ್ಯಾಸ್‌ ಸೋರಿಕೆ ಆಗುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂತು. ಸ್ಥಳೀ​ಯರು ಚಾಲಕನ ಗಮನ ಸೆಳೆದ ಹಿನ್ನೆ​ಲೆ​ಯಲ್ಲಿ ಟ್ಯಾಂಕರ್‌ನ್ನು ಕರ್‌ವೇಲು ಮಸೀದಿ ಬಳಿ ನಿಲ್ಲಿಸಲಾ​ಯಿ​ತು.

ಮಸೀದಿ ಮೈಕ್‌ ಬಳಸಿ ಎಚ್ಚ​ರಿಕೆ ಸಂದೇ​ಶ:

ಟ್ಯಾಂಕರ್‌ನಿಂದ ಕಾರಂಜಿ ಚಿಮ್ಮಿದಂತೆ ಗ್ಯಾಸ್‌ ಸೋರಿಕೆ ಆಗುತ್ತಿದ್ದು, ಪರಿಸರಾದ್ಯಂತ ಅನಿಲ ಪಸ​ರಿ​ಸಲು ಆರಂಭ​ವಾ​ಯಿತು. ಅಪಾ​ಯದ ಸುಳಿವು ದೊರೆತು ಸ್ಥಳೀಯ ನಿವಾಸಿ ಮಹಮ್ಮದ್‌ ಶರೀಫ್‌ ಮಸೀದಿಗೆ ತೆರಳಿ ಅಲ್ಲಿನ ಧ್ವನಿ​ವ​ರ್ಧಕ ಬಳಸಿ ಮುಂದಿನ ಸೂಚನೆ ಬರುವವರೆಗೆ ಯಾರೂ ಮನೆಯಲ್ಲಿ ಬೆಂಕಿ ಉರಿಸದಂತೆ ಸೂಚನೆ ನೀಡಲಾಯಿತು. ಹೆದ್ದಾರಿಯಲ್ಲಿ ಹೋಗುವ ವಾಹನಗಳನ್ನು ಕರ್ವೇಲು-ಶಾಂತಿನಗರ ಮೂಲಕ ಪುತ್ತೂರು ರಸ್ತೆಯಾಗಿ ಹೋಗುವಂತೆ ಸೂಚನೆ ನೀಡಲಾಯಿತು.

ಉಪ್ಪಿ​ನಂಗ​ಡಿ ಪೊಲೀಸರು ಹಾಗೂ ಎಚ್‌​ಪಿ​ಸಿ​ಎಲ್‌ ಕ್ವಿಕ್‌ ರೆಸ್ಪಾನ್ಸ್‌ ವಾಹನ ತ್ಕ$್ಷಣ ಸ್ಥಳಕ್ಕೆ ಧಾವಿ​ಸಿತು. ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಟ್ಯಾಂಕರ್‌ನ ವಾಲ್ವ್ ನಟ್‌ ಸರಿ​ಪ​ಡಿಸಿ ಸೋರಿಕೆ ತಡೆ​ದ​ರು. ಪುತ್ತೂರು ಗ್ರಾಮಾಂತರ ಪೊಲೀಸ್‌ ಇನ್‌ಸ್ಪೆಕ್ಟರ್‌ ನಾಗೇಶ್‌ ಕದ್ರಿ, ಕಂದಾಯ ನಿರೀಕ್ಷಕ ವಿಜಯ ವಿಕ್ರಂ, ಗ್ರಾಮಕರಣಿಕ ರಮಾನಂದ ಚಕ್ಕಡಿ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು.

ಅಡಿಕೆ ಹಾಳೆ ಬಳಸಿ ಎಂದ ಶಾಸಕ ಕಾಮತ್ ಐಡಿಯಾಗೆ ಸ್ವಿಗ್ಗಿ ಫಿದಾ

ಸೋರಿಕೆ ತಡೆದ ಬಳಿಕ ಟ್ಯಾಂಕರನ್ನು ಉಪ್ಪಿನಂಗಡಿ ಮಠದ ಬಳಿಗೆ ತರಲಾಗಿ 2 ಅಗ್ನಿಶಾಮಕ ದಳ ಸಿಬ್ಬಂದಿ ಉಪಸ್ಥಿತಿಯಲ್ಲಿ ಟ್ಯಾಂಕರ್‌ನಿಂದ ಮತ್ತೆ ಸೋರಿಕೆ ಆಗುವ ಸಾಧ್ಯತೆ ಬಗ್ಗೆ ಪರಿ​ಶೀ​ಲಿ​ಸ​ಲಾ​ಯಿ​ತು.

ಅಗ್ನಿ​ಶಾ​ಮಕ ದಳ ವಿಳಂಬ:

ಗ್ಯಾಸ್‌ ಸೋರಿಕೆ ಆಗುತ್ತಿರುವ ಬಗ್ಗೆ ಪುತ್ತೂರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ ಒಂದೂವರೆ ತಾಸು ಬಳಿಕ ಅಗ್ನಿ ಶಾಮಕ ದಳ ಸ್ಥಳಕ್ಕೆ ಬಂದಿದ್ದು, ಅದು ಬರುವ ಹೊತ್ತಿಗೆ ನೆಲ್ಯಾಡಿಯಿಂದ ಕ್ವಿಕ್‌ ರೆಸ್ಪಾನ್ಸ್‌ ವಾಹ​ನ​ದ​ವರು ಬಂದು ಸೋರಿಕೆ ತಡೆ​ದಿ​ದ್ದರು. ಅಗ್ನಿ ಶಾಮಕ ದಳದ ವಿಳಂಬ ಆಗ​ಮನ ಬಗ್ಗೆ ಗ್ರಾಮ​ಸ್ಥರು ತರಾ​ಟೆಗೆ ತೆಗೆ​ದು​ಕೊಂಡ ರು.

ಕಾರ್ಮಿಕರ ಸೋಗಿನಲ್ಲಿ ಕರಾವಳಿಯಲ್ಲಿ ನೆಲೆಸಿದ್ದಾರೆ ನುಸುಳುಕೋರರು...

ನಾಗ​ರಿ​ಕರ ಆಕ್ರೋ​ಶಕ್ಕೆ ಪ್ರತಿ​ಕ್ರಿ​ಯಿ​ಸಿದ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಸುಂದರ್‌, ಘಟನೆಯ ಬಗ್ಗೆ ನಮಗೆ 8.46ಕ್ಕೆ ಮಾಹಿತಿ ಬಂದಿದೆ, ತಕ್ಷಣ ಹೊರಟು ಬಂದಿದ್ದೇವೆ. ಆದರೆ ಈ ಮಧ್ಯೆ ಹೆದ್ದಾರಿಯಲ್ಲಿ ಹೋಗಬೇಕಾದ ವಾಹನಗಳು ಕರುವೇಲು-ಶಾಂತಿನಗರ ರಸ್ತೆಯಾಗಿ ಹೋಗಿದ್ದು, ಈ ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಆಗಿ ಬ್ಲಾಕ್‌ ಆಗಿತ್ತು, ಹೀಗಾಗಿ 10 ನಿಮಿಷ ತಡವಾಗಿದೆಯೇ ವಿನಃ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಿಲ್ಲ ಎಂದಿ​ದ್ದಾ​ರೆ.