ಮಂಗಳೂರು [ನ.04]:  ಈಗ ಎಲ್ಲೆಡೆ ಪ್ಲಾಸ್ಟಿಕ್ ನಿಷೇಧದ್ದೇ ಮಾತು. ಜನರು ಕೂಡ ಪ್ಲಾಸ್ಟಿಕ್ ತ್ಯಜಿಸುವತ್ತ ಮನಸು ಮಾಡಿದ್ದಾರೆ. ಆನ್ ಲೈನ್ ಆಹಾರ ಪೂರೈಕೆ ಕಂಪನಿಗಳು ಕೂಡ ಇದರತ್ತ ಗಮನ ಹರಿಸುತ್ತಿವೆ. ಹರಿಸದಿದ್ದರೆ ದಂಡಂ ದಶಗುಣಂ. 

ಅದರಂತೆ ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ್ ಕಾಮತ್ ಪ್ಲಾಸ್ಟಿಕ್ ಬಳಕೆ ವಿರುದ್ಧ ದಿಟ್ಟ ಹೆಜ್ಜೆ ಇಟ್ಟಿದ್ದು,  ಆನ್ ಲೈನ್ ಆಹಾರ ಪೂರೈಸುವ ಕಂಪನಿಗಳಿಗೆ ಮಾಸ್ಟರ್ ಐಡಿಯಾ ಒಂದನ್ನು ನೀಡಿದ್ದಾರೆ. 

ಆಹಾರ ಪೂರೈಕೆಗೆ ಪ್ಲಾಸ್ಟಿಕ್ ಬದಲು ಅಡಿಕೆ ಮರದ ಹಾಳೆಗಳಲ್ಲಿ ತಯಾರಿಸುವ ಲಾಗೋ ಬಾಕ್ಸ್ ಗಳನ್ನು ಬಳಸುವಂತೆ ಮನವಿ ಮಾಡಿದ್ದಾರೆ. 

ಫೇಸ್ ಬುಕ್ ನಲ್ಲಿ ವೇದವ್ಯಾಸ್ ಕಾಮತ್ ಅವರು ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಆನ್ ಲೈನ್ ಡೆಲಿವರಿ ಸಂಸ್ಥೆ ಸ್ವಿಗ್ಗಿ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದು, ತಕ್ಷಣದಿಂದಲೇ ಹೊಸ ಐಡಿಯಾವನ್ನ ಕಾರ್ಯರೂಪಕ್ಕೆ ತರುವುದಾಗಿ ಹೇಳಿದೆ. 

ದಿನವಿಡೀ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ...

ಇದಕ್ಕೆ ಕಾಮತ್ ಅವರೂ ಪ್ರತಿಕ್ರಿಯಿಸಿ ಅಡಿಕೆ ಹಾಳೆಗಳು ಲಭ್ಯವಾಗುವ ವಿವರಗಳನ್ನು ತಿಳಿಸುವುದಾಗಿ ಹೇಳಿದ್ದು, ಇದಕ್ಕೆ ಸ್ವಿಗ್ಗಿ ಧನ್ಯವಾದ ಹೇಳಿದೆ. 

ಪ್ಲಾಸ್ಟಿಕ್ ‘ಬೊಡ್ಚಿ’ ಎಂದ ಮಂಗಳೂರು ಶಾಸಕರು, ಪಾರ್ಸೆಲ್‌ಗಿನ್ನು ಬಾಳೆ ಎಲೆಗ...

ಈ ಹಿಂದೆಯೂ ಕೂಡ ಮಂಗಳೂರಿನ ಆಹಾರ ಪೂರೈಕೆ ಸಂಸ್ಥೆಗಳಿಗೆ ಆಹಾರ ಪ್ಯಾಕಿಂಗ್ ಮಾಡಲು ಪ್ಲಾಸ್ಟಿಕ್ ಬದಲು ಬಾಳೆ ಎಲೆ ಬಳಸುವಂತೆ ಸಲಹೆ ನೀಡಿದ್ದರು. ಆಗಲೂ ಆನ್ ಲೈನ್ ಸಂಸ್ಥೆಗಳೆಲ್ಲಾ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಇದೀಗ ಕಾಮತ್ ಅವರು ಮತ್ತೊಂದು ಉಪಯೋಗಕರ ಸಲಹೆ ಕೊಟ್ಟಿದ್ದಾರೆ. ಇದಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ.