Asianet Suvarna News Asianet Suvarna News

ದೀಪಾವಳಿಗೂ ಬೆಂಗಳೂರು-ಕಾರವಾರ ಮಧ್ಯೆ ಸುವಿಧ ವಿಶೇಷ ರೈಲು

ಮೈಸೂರು ದಸರಾ ಪ್ರಯುಕ್ತ ವಿಶೇಷ ರೈಲು ಸೌಲಭ್ಯ ಕಲ್ಪಿಸಿದಂತೆಯೇ ಇದೀಗ ದೀಪಾವಳಿ ಪ್ರಯುಕ್ತವೂ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ವಿಶೇಷ ಸುವಿಧಾ ರೈಲು ಬೆಂಗಳೂರು-ಕಾರವಾರ ಮಧ್ಯೆ ಓಡಾಡಲಿದೆ. ಸುವಿಧ ರೈಲಿನ ವೇಳಪಟ್ಟಿ ಸೇರಿ ಇತರ ಮಾಹಿತಿ ಇಲ್ಲಿದೆ.

 

bangalore karwar Special train for Diwali
Author
Bangalore, First Published Oct 12, 2019, 11:13 AM IST

ಮಂಗಳೂರು(ಅ.12): ದೀಪಾವಳಿ ಪ್ರಯುಕ್ತ ಕೆಎಸ್‌ಆರ್‌ ಬೆಂಗಳೂರು- ಕಾರವಾರ ಮತ್ತು ಕಾರವಾರ- ಯಲಹಂಕ ನಡುವೆ ಸುವಿಧಾ ವಿಶೇಷ ರೈಲು ಸಂಚಾರ ಕಲ್ಪಿಸುವ ಕುರಿತು ರೈಲ್ವೆ ಇಲಾಖೆ ಶುಕ್ರವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಕಾರವಾರ- ಯಲಹಂಕ (ಬೆಂಗಳೂರು) ನಂ.82666 ಸುವಿಧ ಸ್ಪೆಷಲ್‌ ರೈಲು ಅ.26 ಮತ್ತು 29ರಂದು (ಎರಡು ಟ್ರಿಪ್‌) ಕಾರವಾರದಿಂದ ಸಂಜೆ 4ಕ್ಕೆ ಪ್ರಯಾಣ ಆರಂಭಿಸಿ ಮರುದಿನ ಬೆಳಗ್ಗೆ 8 ಗಂಟೆಗೆ ಯಲಹಂಕ ತಲುಪಲಿದೆ.

ವೇಳಾಪಟ್ಟಿ:

ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ ಮತ್ತು ನಿರ್ಗಮಿಸುವ ಸಂಭವನೀಯ ಸಮಯ: ಅಂಕೋಲ ಸಂಜೆ 4.28/ 4.30, ಗೋಕರ್ಣ ರೋಡ್‌ 4.40/ 4.42, ಕುಮಟಾ ಸಂಜೆ 5/ 5.2, ಹೊನ್ನಾವರ 5.18/ 5.20, ಮುರ್ಡೇಶ್ವರ 5.46/ 5.48, ಭಟ್ಕಳ 6.20/ 6.22, ಮೂಕಾಂಬಿಕಾ ರೋಡ್‌ ಬೈಂದೂರು 6.36/ 6.38, ಕುಂದಾಪುರ ರಾತ್ರಿ 7.28/ 7.30, ಉಡುಪಿ 8.20./ 8.22, ಮೂಲ್ಕಿ 9.5/ 9.7, ಸುರತ್ಕಲ್‌ 9.18/ 9.20, ಮಂಗಳೂರು ಜಂಕ್ಷನ್‌ 9.50/ 10.15, ಬಂಟ್ವಾಳ 11/ 11.2, ಕಬಕ ಪುತ್ತೂರು 11.26/ 11.28, ಸುಬ್ರಹ್ಮಣ್ಯ ರೋಡ್‌ ಮಧ್ಯರಾತ್ರಿ 12.20/ 12.40, ಸಕಲೇಶಪುರ 2.55/ 3.5, ಹಾಸನ ಬೆಳಗ್ಗೆ 4.10/ 4.12, ಚನ್ನರಾಯಪಟ್ಟಣ 5.10/ 5.12, ಶ್ರವಣಬೆಳಗೊಳ 5.24/ 5.25, ಕುಣಿಗಲ್‌ ಮುಂಜಾನೆ 6.27/ 6.28 ಮತ್ತು ಚಿಕ್ಕಬಾಣಾವರ 6.45/ 6.46.

ಬೇಕಲ ಆಯ್ತು, ಈಗ ಉದುಮ ಕನ್ನಡ ಶಾಲೆಗೆ ಮಲಯಾಳಿ ಶಿಕ್ಷಕ!

ಕೆಎಸ್‌ಆರ್‌ ಬೆಂಗಳೂರು- ಕಾರವಾರ ಸುವಿಧಾ ಸ್ಪೆಷಲ್‌ ನಂ.82665 ಅಕ್ಟೋಬರ್‌ 25 ಮತ್ತು 28 ರಂದು (ಎರಡು ಟ್ರಿಪ್‌) ಕೆಎಸ್‌ಆರ್‌ ಬೆಂಗಳೂರು ನಿಲ್ದಾಣದಿಂದ ರಾತ್ರಿ 11.55 ಕ್ಕೆ ಹೊರಟು ಮರುದಿನ ಮಧ್ಯಾಹ್ನ 3.30 ಕ್ಕೆ ತಲುಪಲಿದೆ.

ಮಂಗಳೂರು: ನೈತಿಕ ಪೊಲೀಸ್‌ಗಿರಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಿದ ಕೋರ್ಟ್.

ರೈಲು ವಿವಿಧ ನಿಲ್ದಾಣಗಳಿಗೆ ತಲುಪುವ ಮತ್ತು ನಿರ್ಗಮಿಸುವ ಸಮಯ: ಯಶವಂತಪುರ ಮಧ್ಯರಾತ್ರಿ 12.5/ 12.7, ಚಿಕ್ಕಬಾಣಾವರ 12.16/ 12.17, ಕುಣಿಗಲ್‌ 1.17/ 1.18, ಶ್ರವಣಬೆಳಗೊಳ 2.17/ 2.18, ಚನ್ನರಾಯಪಟ್ಣ 2.28/ 2.29, ಹಾಸನ ತಡರಾತ್ರಿ 3.30/ 3.32, ಸಕಲೇಶಪುರ 4.25/ 4.45, ಸುಬ್ರಹ್ಮಣ್ಯ ರೋಡ್‌ ಬೆಳಗ್ಗೆ 7.50 / 7.55, ಕಬಕ ಪುತ್ತೂರು 8.45/ 8.47, ಬಂಟ್ವಾಳ 9.25/ 9.26, ಮಂಗಳೂರು ಜಂಕ್ಷನ್‌ 9.50/ 10.10, ಸುರತ್ಕಲ್‌ 10.32/ 10.34, ಮೂಲ್ಕಿ 10.48/ 10.50, ಉಡುಪಿ 11.34/ 11.36, ಕುಂದಾಪುರ ಮಧ್ಯಾಹ್ನ 12.08/ 12.10, ಮೂಕಾಂಬಿಕಾ ರೋಡ್‌ ಬೈಂದೂರು 12.34/ 12.36, ಭಟ್ಕಳ ಮಧ್ಯಾಹ್ನ 1.10/ 1.12, ಮುರ್ಡೇಶ್ವರ 1.32/ 1.34, ಹೊನ್ನಾವರ 2.2/ 2.4, ಕುಮಟಾ 2.22/ 2.24, ಗೋಕರ್ಣ ರೋಡ್‌ 2.44/ 2.46 ಮತ್ತು ಅಂಕೋಲ ಮಧ್ಯಾಹ್ನ 2.58/ 3.

ಮಂಗಳೂರು: ಸುಬ್ರಮಣ್ಯದಲ್ಲಿ ನಿಖಿಲ್ ರಹಸ್ಯ ತ್ರಿಕಾಲ ಪೂಜೆ..!

Follow Us:
Download App:
  • android
  • ios