ಮಂಗಳೂರು(ನ.05): ‘ಕ್ಯಾರ್‌’ ಮತ್ತು ‘ಮಹಾ’ ಚಂಡಮಾರುತದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರು ಬಿಸಿಲು ಆವರಿಸಿದ್ದರೂ ಇದೀಗ ಮತ್ತೊಂದು ಚಂಡಮಾರುತದ ಸೂಚನೆ ದೊರೆತಿದೆ.

ಈ ಹೊಸ ಚಂಡಮಾರುತ ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಳ್ಳಲಿರುವುದರಿಂದ ದಕ್ಷಿಣ ಭಾರತದ ವಿವಿಧೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಗೆ ಇದರ ಪ್ರಭಾವ ಅಷ್ಟಿಲ್ಲದೆ ಇದ್ದರೂ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವ ವಿಶ್ಲೇಷಣೆ ನಡೆದಿದೆ.

ಮಂಗಳೂರು: ಕಾರು ತಳ್ಳಿದ ಟ್ರಾಫಿಕ್ ಪೊಲೀಸ್‌ ‘ಟುಡೇಸ್‌ ಹೀರೊ’

ಅಂಡಮಾನ್‌ ದ್ವೀಪಗಳ ಸಮೀಪ ಒಂದೆರಡು ದಿನಗಳಲ್ಲಿ ವಾಯುಭಾರ ಕುಸಿತ ಉಂಟಾಗಲಿದೆ. ಬಳಿಕ ಇದು ಚಂಡಮಾರುತದ ಸ್ವರೂಪ ಪಡೆದುಕೊಳ್ಳಲಿದ್ದು, ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನ.10ರ ವೇಳೆಗೆ ಪಾರಾದೀಪ್‌ ಕರಾವಳಿ ತಲುಪಲಿದೆ.

‘ಮಹಾ’ ಮತ್ತೆ ವಾಪಸ್‌?: ಈಗಾಗಲೇ ಉತ್ತರಾಭಿಮುಖವಾಗಿ ಚಲಿಸಿರುವ ಮಹಾ ಚಂಡಮಾರುತ ಗುಜರಾಜ್‌ ಕರಾವಳಿಯತ್ತ ತಿರುವು ಪಡೆದುಕೊಳ್ಳುವ ಸಾಧ್ಯತೆಯನ್ನು ಅಂದಾಜಿಸಲಾಗಿದೆ. ನ.6ರ ವೇಳೆಗೆ ದ್ವಾರಕಾ ಕರಾವಳಿಗೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

NH75ರಲ್ಲಿ ಅನಿಲ ಸೋರಿ​ಕೆ: ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ದುರಂತ