Asianet Suvarna News Asianet Suvarna News

Daily Horoscope: ಧನು ರಾಶಿಗಿಂದು ಧನನಷ್ಟ, ಸಿಂಹಕ್ಕೆ ಮಿಶ್ರ ಫಲ

12 ಡಿಸೆಂಬರ್ 2021, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮಿಥುನ ರಾಶಿಗೆ ಖರ್ಚು ಹೆಚ್ಚು, ಕುಂಭಕ್ಕೆ ಧನಲಾಭ

Dina Bhavishya of December 12th 2021 in Kannada SKR
Author
Bangalore, First Published Dec 12, 2021, 5:14 AM IST
  • Facebook
  • Twitter
  • Whatsapp

ಮೇಷ(Aries): ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿ ಮನಸ್ಸಿಗೆ ಸಂತಸ. ಸ್ನೇಹಿತರು, ಪರಿಚಿತ ಹಿರಿಯರ ಭೇಟಿಯಿಂದ ಸಂತಸ. ರೈತರಿಗೆ ನೆಮ್ಮದಿ, ವ್ಯಾಪಾರಿಗಳಿಗೆ ಲಾಭದ ದಿನ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿರುವವರಿಗೆ ಧನಲಾಭ. ಇರುವೆಗಳಿಗೆ ಸಕ್ಕರೆ, ಇತರೆ ಸಿಹಿ ಹಾಕಿ. 

ವೃಷಭ(Taurus): ಆಹಾರದಲ್ಲಿ ಏರುಪೇರಾಗಿ ಆರೋಗ್ಯ ಸಂಬಂಧಿ ಕಿರಿಕಿರಿಗಳು ಎದುರಾಗಬಹುದು. ನರಗಳ ದೌರ್ಬಲ್ಯತೆ ಕಾಡಬಹುದು. ಆಸ್ತಿ ಸಂಬಂಧ ಸಂಘರ್ಷಗಳಿಂದ ಮನಸ್ಸಿಗೆ ಕಸಿವಿಸಿ. ಬಂಧುಗಳೊಂದಿಗೆ ಮುನಿಸು. ಮಾತಿನ ಮೇಲೆ ಹಿಡಿತವಿರಲಿ. ಮನೆ ದೇವರ ಪ್ರಾರ್ಥನೆ ಮಾಡಿ.

ಮಿಥುನ(Gemini): ಗೃಹಬಳಕೆಯ ವಸ್ತುಗಳು ಹಾಗೂ ವಸ್ತ್ರಕ್ಕಾಗೆ ಖರ್ಚು ಮಾಡಿ ನಂತರ ಅನಗತ್ಯವಾಗಿತ್ತು ಎಂದು ಕೊರಗುವಿರಿ. ಸ್ವಲ್ಪ ವಿವೇಚನೆಯಿಂದ ಖರ್ಚು ಮಾಡಿ. ಸೃಜನಶೀಲತೆ ಕ್ಷೇತ್ರದಲ್ಲಿರುವವರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶಗಳು ದೊರಕುವುದು. ದೈವಾನುಕೂಲ ಇರಲಿದೆ, ದುರ್ಗಾ ಕವಚ ಪಠಿಸಿ.

Mercury Transit: ಬುಧನ ರಾಶಿ ಪರಿವರ್ತನೆಯಿಂದ ಐದು ರಾಶಿಯವರಿಗೆ ಬಂಪರ್!

ಕಟಕ(Cancer): ಮನೆಯಲ್ಲಿ ಧಾರ್ಮಿಕ, ಕೌಟುಂಬಿಕ ಶುಭ ಕಾರ್ಯಗಳು ನಡೆಯುವುದರಿಂದ ಮನಸ್ಸು ಆಹ್ಲಾದಕರವಾಗಿರುವುದು. ವಾಹನ ಯೋಗವಿದೆ. ಪ್ರಯಾಣ ಮಾಡುವ ಮುನ್ನ ಮನೆ ದೇವರಿಗೆ ಪ್ರಾರ್ಥಿಸಿ. ಅವಿವಾಹಿತರಿಗೆ ಶುಭ ದಿನ. ವಿವಾಹಿತರಿಗೆ ಕುಟುಂಬ ಸೌಖ್ಯ. ತಾಯಿ ಅನ್ನಪೂರ್ಣೇಶ್ವರಿಯ ಪ್ರಾರ್ಥನೆ ಮಾಡಿ. 

ಸಿಂಹ(Leo): ಇಂದು ಸಂತೋಷ, ದುಃಖದ ಮಿಶ್ರ ಫಲವಿರಲಿದೆ. ವೃತ್ತಿಯಲ್ಲಿ ತೊಡಕು ಎದುರಾಗಬಹುದು. ಕುಟುಂಬ ಸದಸ್ಯರಿಂದ ನಿಮ್ಮ ಮಾತುಗಳಿಗೆ ಮನ್ನಣೆ ದೊರಕುವುದು. ನಿರುದ್ಯೋಗಿಗಳಿಗೆ ಅವಕಾಶಗಳು ಬರಬಹುದು. ವಿದ್ಯಾರ್ಥಿಗಳಿಗೆ ಏಕಾಗ್ರತೆಗೆ ಭಂಗ. ನಾಗನಿಗೆ ಪ್ರರ್ಥನೆ ಮಾಡಿ. 

ಕನ್ಯಾ(Virgo): ಇಂದು ಬಹಳ ಸಮಾಧಾನದಿಂದ ದಿನ ಕಳೆಯುವುದು. ಹವ್ಯಾಸಕ್ಕಾಗಿ ಸಮಯ ಮಾಡಿಕೊಳ್ಳುವಿರಿ. ಬಹು ದಿನಗಳಿಂದ ಮುಂದೂಡಿಕೊಂಡು ಬಂದಿದ್ದ ಕೆಲಸಗಳು ಮುಗಿದು ನಿರಾಳವಾಗುವಿರಿ. ಸೌಂದರ್ಯ ಸಂಬಂಧಿ ವಿಷಯಗಳಿಗಾಗಿ ಖರ್ಚು. ಪೂಜಾಕೈಂಕರ್ಯಗಳಲ್ಲಿ ಭಾಗಿಯಾಗುವ ಸಂಭವ. ಶ್ರದ್ಧೆಯಿಂದ ಲಲಿತಾ ಸಹಸ್ರನಾಮ ಪಠಿಸಿ. 

Marriage Horoscope 2022: ಈ ರಾಶಿಗಳಿಗೆ ಕೂಡಿ ಬರಲಿದೆ ಕಂಕಣ

ತುಲಾ(Libra): ಹೊಸ ಆಸ್ತಿ ಖರೀದಿಯಿಂದ ಮನೆಯಲ್ಲಿ ಹರ್ಷ. ಸಿಹಿ ತಿನ್ನುವ ಭಾಗ್ಯ. ಸಂಗಾತಿಯ ಸಹಕಾರದಿಂದ ಕೆಲಸಕಾರ್ಯಗಳು ಯಶಸ್ವಿಯಾಗಲಿವೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಹೊಸ ಅವಕಾಶಗಳು ಅರಸಿ ಬರಲಿವೆ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.

ವೃಶ್ಚಿಕ(Scorpio): ಯಾವುದರಲ್ಲಿ ಧನಾತ್ಮಕ ಫಲಿತಾಂಶ ನಿರೀಕ್ಷಿಸುತ್ತಿದ್ದೀರೋ ಆ ವಿಷಯಕ್ಕಾಗಿ ಇನ್ನೂ ಹೆಚ್ಚಿನ ಪ್ರಯತ್ನ ಹಾಕಿದರಷ್ಟೇ ಫಲ ಸಿದ್ಧಿ. ಇಲ್ಲದಿದ್ದಲ್ಲಿ ನಿರಾಶೆ ಅನುಭವಿಸಬೇಕಾಗುತ್ತದೆ. ಹೋಟೆಲ್ ವ್ಯವಹಾರಗಳಲ್ಲಿ ಲಾಭ. ದಾಂಪತ್ಯದಲ್ಲಿ ಅಸಮಾಧಾನ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.

ಧನುಸ್ಸು(Sagittarius): ವಸ್ತು ಕಳುವಾಗುವ ಸಾಧ್ಯತೆ. ಸುಖಾಸುಮ್ಮನೆ ಬೇಡದ ವಿವಾದಗಳಲ್ಲಿ ಸಿಕ್ಕಿ ಬೀಳುವಿರಿ. ಅಸಮಾಧಾನದ ದಿನ. ವಾಹನ ಚಾಲನೆ ಮಾಡುವಾಗ ಹೆಚ್ಚು ಜಾಗರೂಕರಾಗಿರುವುದು ಅಗತ್ಯ. ಏಕಾಗ್ರತೆ ಭಂಗ. ದೇಹ ಬಲವಿದ್ದರೂ, ಮನಸ್ಸಿನ ಬಲ ಸಿಗದೆ ಕಿರಿಕಿರಿ. ನವಗ್ರಹಕ್ಕೆ ನಮಸ್ಕರಿಸಿ ಪ್ರಾರ್ಥಿಸಿ. 

ಮಕರ(Capricorn): ಕೃಷಿಯಲ್ಲಿ ಲಾಭ, ಹಾಲು-ಹಣ್ಣು ವ್ಯಾಪಾರಿಗಳಿಗೆ ಲಾಭ, ಪ್ರಯಾಣದಲ್ಲಿ ಸೌಖ್ಯ, ಆಲೋಚನೆಗಳು ವ್ಯತಿರಿಕ್ತ ಫಲ ಕೊಡಲಿವೆ. ಆರೋಗ್ಯದಲ್ಲಿ ಕೊಂಚ ಏರುಪೇರು. ಧೀರ್ಘಕಾಲದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಒಮ್ಮೆ ವೈದ್ಯರ ಬಳಿ ತಪಾಸಣೆ ಮಾಡಿಸುವುದೊಳಿತು. ಆಂಜನೇಯ ಪ್ರಾರ್ಥನೆ ಮಾಡಿ. 

ಕುಂಭ(Aquarius): ದೇಹಬಲ ಇರಲಿದೆ, ಬುದ್ಧಿಶಕ್ತಿಯಿಂದ ಕಾರ್ಯ ಸಾಧನೆ, ದೈವಾನುಕೂಲ ಇರಲಿದೆ. ಉದ್ಯೋಗದಲ್ಲಿ ಏರುಪೇರಿಲ್ಲ. ಆದರೆ, ಧನಲಾಭಕ್ಕೆ ಅವಕಾಶಗಳಿವೆ. ಪ್ರಯಾಣದಲ್ಲಿ ಎಚ್ಚರವಾಗಿರಿ, ವಾಹನ ಚಾಲಕರು-ಪ್ರಯಾಣಿಕರು ಎಚ್ಚರವಾಗಿರಬೇಕು. ಸೂರ್ಯ ಪ್ರಾರ್ಥನೆ ಮಾಡಿ ಅನುಗ್ರಹ ಪಡೆಯಿರಿ. 

ಮೀನ(Pisces): ಮಾತಿನ ಬಲದಿಂದ ಎಲ್ಲರನ್ನು ಗೆಲ್ಲುವಿರಿ. ಮನರಂಜನೆಗಾಗಿ ಖರ್ಚು ಮಾಡುವಿರಿ. ಕೆಲಸಕಾರ್ಯಗಳಲ್ಲಿ ಯಶಸ್ಸಿನಿಂದ ಸಮಾಧಾನ. ನೆಂಟರಿಷ್ಟರ ಭೇಟಿಯಿಂದ ಸಂತಸ. ವ್ಯಾಪಾರ ವ್ಯವಹಾರ, ಉದ್ಯೋಗಗಳಲ್ಲಿ ಲಾಭ. ರಾಮಧ್ಯಾನ ಮಾಡಿ. 

Follow Us:
Download App:
  • android
  • ios