Asianet Suvarna News Asianet Suvarna News

Daily Horoscope:ಈ ರಾಶಿಗೆ ಅರ್ಧಕ್ಕೆ ನಿಂತ ಕೆಲಸಗಳು ಪೂರ್ಣಗೊಳ್ಳಲಿವೆ

3 ಜನವರಿ 2023, ಮಂಗಳವಾರ ಕಟಕ ರಾಶಿಗೆ ಪ್ರಭಾವಿ ವ್ಯಕ್ತಿಗಳ ಭೇಟಿಯಿಂದ ಲಾಭ, ಮೀನ ರಾಶಿಗೆ ಜಮೀನಿಗೆ ಸಂಬಂಧಿಸಿದ ಕೆಲಸಗಳಲ್ಲಿ ಯಶಸ್ಸು
 

Daily Horoscope of January 3rd 2023 in Kannada
Author
First Published Jan 3, 2023, 5:09 AM IST

ಮೇಷ(Aries):ಯಾವುದೇ ಕಷ್ಟಕರ ಕೆಲಸ ಮಾಡಬೇಕಿದ್ರೂ ಮನಸ್ಸು ಖುಷಿಯಾಗಿರುತ್ತದೆ. ಸಮಯ ಇಂದು ನಿಮಗೆ ಪೂರಕವಾಗಿರಲಿದೆ. ನಿಮ್ಮ ಕೆಲಸಗಳನ್ನು ಯೋಜಿತ ವಿಧಾನದಲ್ಲಿ ಮಾಡಿ ಮುಗಿಸಿ.  ಜಮೀನು ಅಥವಾ ವಾಹನ ಖರೀದಿಗೆ ಪ್ಲ್ಯಾನ್ ಮಾಡುತ್ತೀರಿ. ನಿಮ್ಮ ಕಾರ್ಯಶೈಲಿಯನ್ನು ಎಲ್ಲರೂ ಪ್ರಶಂಸಿಸುತ್ತಾರೆ. ಸಮಯದ ಕುರಿತ ನಿಮ್ಮ ಭಾವನೆಗಳೇ ನಿಮ್ಮ ಬಹುದೊಡ್ಡ ದೌರ್ಬಲ್ಯವಾಗಲಿದೆ. ಹೀಗಾಗಿ ಈ ಬಗ್ಗೆ ಎಚ್ಚರ ವಹಿಸಿ. ಆದಾಯದ ಜೊತೆಗೆ ಖರ್ಚು ಕೂಡ ಹೆಚ್ಚಲಿದೆ. ಉದ್ಯಮ ಚಟುವಟಿಕೆಗಳಲ್ಲಿ ಎಲ್ಲ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ. 

ವೃಷಭ(Taurus):ಮನೆ ಹಾಗೂ ಹೊರಗೆ ಎರಡೂ ಕಡೆ ಸಮತೋಲನ ಸಾಧಿಸುತ್ತೀರಿ. ಹಣದ ವಿಚಾರದಲ್ಲಿ ಉತ್ತಮ ಬಜೆಟ್ ನಿರ್ವಹಣೆ ಮಾಡುತ್ತೀರಿ. ಅಧಿಕ ಉದಾಸೀನತೆಯಿಂದ ಪ್ರಮುಖ ಕೆಲಸಗಳಲ್ಲಿ ಹಿನ್ನಡೆ. ಈ ಸಮಯದಲ್ಲಿ ಪ್ರಮುಖ ಉದ್ಯಮ ನಿರ್ಧಾರಗಳನ್ನು ಕೈಗೊಳ್ಳಬೇಡಿ. ಪತಿ ಹಾಗೂ ಪತ್ನಿ ನಡುವೆ ಉತ್ತಮ ಸಂಬಂಧ ಇರಲಿದೆ. ಮನೆಯಲ್ಲಿ ಖುಷಿ ಹಾಗೂ ಶಾಂತಿಯ ವಾತಾವರಣ. ಆರೋಗ್ಯಕ್ಕೆ ಸಂಬಂಧಿಸಿ ದೊಡ್ಡ ಹಾಗೂ ಸಣ್ಣ ಸಮಸ್ಯೆಗಳು ಕಾಡಬಹುದು. 

ಮಿಥುನ(Gemini):ಸಕಾರಾತ್ಮಕ ಹಾಗೂ ಪ್ರಮುಖ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಅದರಿಂದ ನಿಮಗೆ ಯಶಸ್ಸು ಸಿಗಲಿದೆ. ಸಮಸ್ಯೆಗಳಲ್ಲಿ ಸಿಲುಕಿರುವ ಆತ್ಮೀಯ ಸ್ನೇಹಿತರಿಗೆ ನೆರವು ನೀಡುವುದರಿಂದ ಮನಸ್ಸಿಗೆ ನೆಮ್ಮದಿ. ಅನೇಕ ಸಂದರ್ಭಗಳಲ್ಲಿ ನೆಮ್ಮದಿಯಿಂದ ಇರೋದು ಮುಖ್ಯ. ಯಾವುದೇ ಕಾರಣವಿಲ್ಲದೆ ಯಾರೊಂದಿಗೂ ಜಗಳವಾಡಬೇಡಿ. ಅಂದಿನ ಕೆಲಸವನ್ನು ಅಂದೇ ಮುಗಿಸುವ ಅಭ್ಯಾಸ ಬೆಳೆಸಿಕೊಳ್ಳಿ.

ಕಟಕ(Cancer):ಇಂದು ನೀವು ಅನುಭವಿ ಹಾಗೂ ಪ್ರಭಾವಿ ವ್ಯಕ್ತಿಯನ್ನು ಭೇಟಿಯಾಗಲಿದ್ದೀರಿ. ಇದರಿಂದ ಪ್ರಗತಿಯ ಹೊಸ ಹಾದಿ ತೆರೆದುಕೊಳ್ಳಲಿದೆ. ಎಲ್ಲ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುತ್ತೀರಿ. ದಿಢೀರ್ ಆಗಿ ಅತಿಥಿಗಳ ಆಗಮನದಿಂದ ಮನೆಯಲ್ಲಿ ಕೆಲಸ ಹೆಚ್ಚುತ್ತದೆ. ಜೊತೆಗೆ ಖರ್ಚು ಕೂಡ ಅಧಿಕವಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಇನ್ನಷ್ಟು ವಿನಮ್ರತೆ ತೋರಿ. ಸಮಯಕ್ಕೆ ಸರಿಯಾಗಿ ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. 

Bidar Utsav: ಬಯಲು ಸೀಮೆಯ ಹಬ್ಬಕ್ಕೆ ಭರದ ಸಿದ್ಧತೆ

ಸಿಂಹ(Leo):ಆತ್ಮೀಯ ಜನರನ್ನು ಭೇಟಿಯಾಗುವ ಅವಕಾಶ ಸಿಗಲಿದೆ. ಸಮಯ ನಿಮಗೆ ಪೂರಕವಾಗಿರಲಿದೆ. ಈಗ ನಿಮ್ಮನ್ನು ಕಾಡುತ್ತಿರುವ ಸಮಸ್ಯೆಗಳು ಸ್ವಲ್ಪ ಸಮಯದಲ್ಲಿ ಬಗೆಹರಿಯಲಿವೆ. ಯೋಜನೆಗಳನ್ನು ರೂಪಿಸಲು ಇದು ಸೂಕ್ತವಾದ ಸಮಯ. ಮನೆ ನಿರ್ವಹಣೆಗೆ ಸಂಬಂಧಿಸಿದ ಕಾರ್ಯಗಳನ್ನು ಪ್ಲ್ಯಾನ್ ಮಾಡುತ್ತೀರಿ. ಮಕ್ಕಳ ಭವಿಷ್ಯಕ್ಕೆ ಸಂಬಂಧಿಸಿ ಒಂದಿಷ್ಟು ಯೋಜನೆಗಳನ್ನು ರೂಪಿಸಲು ಇದು ಸಕಾಲ. ಉದ್ಯಮ ಸಂಬಂಧಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. 

ಕನ್ಯಾ(Virgo):ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತೀರಿ. ಸಮಾಜದಲ್ಲಿ ನೀವು ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತೀರಿ. ಮನೆಯಲ್ಲಿ ಹಬ್ಬದ ವಾತಾವರಣ ಇರಲಿದೆ. ನಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಂದ ದೂರವಿರಿ. ಇಲ್ಲವಾದರೆ ನಿಮ್ಮ ಗೌರವಕ್ಕೆ ಧಕ್ಕೆ ಬರಲಿದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಒತ್ತಡ ಹೆಚ್ಚಲಿದೆ. ಉದ್ಯಮದಲ್ಲಿ ಕೆಲವು ತೊಂದರೆಗಳು ಎದುರಾಗಲಿವೆ. 

ತುಲಾ(Libra):ಕುಟುಂಬ ಹಾಗೂ ಮನೆಯ ಕಡೆಗೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತೀರಿ. ಅರ್ಧಕ್ಕೆ ನಿಂತಿರುವ ಕೆಲಸ ಪೂರ್ಣಗೊಳ್ಳಲಿದೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ತೊಂದರೆಗಳು ನಿವಾರಣೆಯಾಗಲಿವೆ. ಅಪರಿಚಿತರ ಭೇಟಿಯಿಂದ ನಿಮ್ಮ ಸಮಸ್ಯೆ ಬಗೆಹರಿಯುವ ಸಾಧ್ಯತೆ. ಮಧ್ಯಾಹ್ನ ಕೆಲವರೊಂದಿಗೆ ವ್ಯಾಜ್ಯ ಏರ್ಪಡುವ ಸಾಧ್ಯತೆ. ಯಾವುದೇ ರೀತಿಯ ಅನೈತಿಕ ಕೆಲಸಗಳನ್ನು ಮಾಡಬೆಡಿ.

ವೃಶ್ಚಿಕ(Scorpio):ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೀರಿ. ನಿಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ದೈನಂದಿನ ವೇಳಾಪಟ್ಟಿಯಲ್ಲಿ ಹೊಂದಾಣಿಕೆ ಮಾಡುತ್ತೀರಿ. ಆರ್ಥಿಕ ಸ್ಥಿತಿ ಉತ್ತಮ. ಸ್ನೇಹಿತರು ಹಾಗೂ ಸಂಬಂಧಿಗಳ ಜೊತೆಗೆ ಸಂತಸದಿಂದ ಸಮಯ ಕಳೆಯುತ್ತೀರಿ. ಒಡಹುಟ್ಟಿದವರ ಜೊತೆಗಿನ ವಿವಾದ ಹೆಚ್ಚಾಗುವ ಸಾಧ್ಯತೆ. ಸಮಸ್ಯೆಗಳನ್ನು ಶಾಂತವಾಗಿ ಪರಿಹರಿಸಿ. 

ಧನುಸ್ಸು(Sagittarius):ನಿಮ್ಮ ಕೊನೆಯ ತಪ್ಪನ್ನು ಸರಿಪಡಿಸಿಕೊಂಡು ಉತ್ತಮ ಭವಿಷ್ಯಕ್ಕಾಗಿ ಮುಂದೆ ಸಾಗಿ. ಸರಿಯಾದ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿರೀಕ್ಷಿತ ಯಶಸ್ಸು ಸಿಗಲಿದೆ. ಆತ್ಮೀಯ ಬಂಧುಗಳನ್ನು ಭೇಟಿಯಾಗಲಿದ್ದೀರಿ. ತಪ್ಪು ವಾಗ್ವಾದಗಳಲ್ಲಿ ತೊಡಗಬೇಡಿ. ವೃತ್ತಿಗೆ ಸಂಬಂಧಿಸಿ ಯಾವುದೇ ನಿರ್ಣಯ ಕೈಗೊಳ್ಳುವ ಮುನ್ನ ಸೂಕ್ತ ಚರ್ಚೆ ನಡೆಸಬೇಕು. ಯಾವುದೇ ಉದ್ಯಮ ಪ್ರಯಾಣ ಯಶಸ್ವಿಯಾಗಲು ಯೋಜನೆ ಅಗತ್ಯ.

ಮಕರ(Capricorn):ದಿನ ನಿತ್ಯದ ಕೆಲಸಗಳ ಹೊರತಾಗಿ ನಿಮಗೆ ಆಸಕ್ತಿಯಿರುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. ಸಂಬಂಧವನ್ನು ಇನ್ನಷ್ಟು ಮಧುರವಾಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಿ. ಯಾವುದೇ ರೀತಿಯ ಪ್ರಯಾಣ ಈ ಸಮಯದಲ್ಲಿ ಕಷ್ಟಕರವಾಗಲಿದೆ. ನಿರ್ಲಕ್ಷ್ಯದಿಂದ ತೊಂದರೆ. ಸಮಯದ ಅಭಾವದಿಂದ ನಿಮ್ಮ ಯೋಜನೆಗಳು ಅರ್ಧದಲ್ಲಿ ಸ್ಥಗಿತಗೊಳ್ಳಲಿವೆ. ಉದ್ಯಮದಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. 

ಪೂಜೆ ಮಾಡೋ ಜಾಗದಲ್ಲಿ ಇವನ್ನೆಲ್ಲ ಇಡ್ಬೇಡಿ, ಮೆಚ್ಚೋಲ್ಲ ದೇವರು!

ಕುಂಭ(Aquarius):ಹಣಕಾಸಿಗೆ ಸಂಬಂಧಿಸಿದ ಕೆಲಸಗಳು ಸಮರ್ಪಕವಾಗಿ ಪೂರ್ಣಗೊಳ್ಳಲಿವೆ. ಮನಃಶಾಂತಿಗಾಗಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲಿದ್ದೀರಿ. ಆತ್ಮೀಯ ಸ್ನೇಹಿತನಿಂದಲೇ ನಿಮಗೆ ಮೋಸವಾಗುವ ಸಾಧ್ಯತೆ. ಯಾವುದೇ ರೀತಿಯ ಸಾಲ ತೆಗೆದುಕೊಳ್ಳುವ ಮುನ್ನ ಸರಿಯಾಗಿ ಚರ್ಚೆ ನಡೆಸಬೇಕು. ಕಾನೂನಿಗೆ ಸಂಬಂಧಿಸಿದ ವಿಚಾರಗಳಲ್ಲಿ ಹೆಚ್ಚಿನ ಎಚ್ಚರ ಅಗತ್ಯ. ಹೊಸ ಉದ್ಯಮ ಪ್ರಾರಂಭಿಸಲು ಇದು ಸೂಕ್ತ ಸಮಯ. 

ಮೀನ(Pisces):ನಿಮ್ಮ ಕುಟುಂಬ ಹಾಗೂ ವೈಯಕ್ತಿಕ ಕಾರ್ಯಗಳಿಗೆ ಮೊದಲ ಪ್ರಾಶಸ್ತ್ಯ. ಜಮೀನಿಗೆ ಸಂಬಂಧಿಸಿದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಹೂಡಿಕೆಗೆ ಸಾಕಷ್ಟು ಸೂಕ್ತವಾದ ವಾತಾವರಣ ಇರಲಿದೆ. ನಿಮ್ಮ ಪ್ರಯತ್ನಗಳಿಗೆ ಯಾವುದೇ  ಹಿನ್ನಡೆಯಾಗದಂತೆ ಎಚ್ಚರ ವಹಿಸಿ. ಉದ್ಯಮಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. 

Follow Us:
Download App:
  • android
  • ios