ಇದೇ ಜ. 7, 8 ಮತ್ತು 9ರಂದು ನಡೆಯಲಿರುವ ಬೀದರ್‌ ಉತ್ಸವ ಸಂಪೂರ್ಣ ಸುರಕ್ಷಿತವಾಗಿ ನಡೆಸಿಕೊಡಲು ಪೊಲೀಸ್‌ ಇಲಾಖೆ ಭಾರಿ ಬಂದೋಬಸ್ತ್‌ ಏರ್ಪಡು ಮಾಡಿಕೊಂಡಿದ್ದು ಸರಿ ಸುಮಾರು 1500 ಪೊಲೀಸ್‌ ಹಾಗೂ 500 ಜನ ಹೋಮ್‌ಗಾರ್ಡಗಳಲ್ಲದೆ ಕೆಎಸ್‌ಆರ್‌ಪಿಯ 4 ತುಕಡಿಗಳು ಮತ್ತು ಡಿಎಆರ್‌ 4 ತುಕಡಿಗಳೊಂದಿಗೆ ಸುಮಾರು 2ಸಾವಿರ ಜನ ಅಧಿಕಾರಿಗಳು, ಸಿಬ್ಬಂದಿಯಿಂದ ಸುರಕ್ಷೆಯ ಸರ್ಪಗಾವಲು ಹಾಕಲಾಗುತ್ತಿದೆ.

ಅಪ್ಪಾರಾವ್‌ ಸೌದಿ

ಬೀದರ್‌ (ಜ.02): ಇದೇ ಜ. 7, 8 ಮತ್ತು 9ರಂದು ನಡೆಯಲಿರುವ ಬೀದರ್‌ ಉತ್ಸವ ಸಂಪೂರ್ಣ ಸುರಕ್ಷಿತವಾಗಿ ನಡೆಸಿಕೊಡಲು ಪೊಲೀಸ್‌ ಇಲಾಖೆ ಭಾರಿ ಬಂದೋಬಸ್ತ್‌ ಏರ್ಪಡು ಮಾಡಿಕೊಂಡಿದ್ದು ಸರಿ ಸುಮಾರು 1500 ಪೊಲೀಸ್‌ ಹಾಗೂ 500 ಜನ ಹೋಮ್‌ಗಾರ್ಡಗಳಲ್ಲದೆ ಕೆಎಸ್‌ಆರ್‌ಪಿಯ 4 ತುಕಡಿಗಳು ಮತ್ತು ಡಿಎಆರ್‌ 4 ತುಕಡಿಗಳೊಂದಿಗೆ ಸುಮಾರು 2ಸಾವಿರ ಜನ ಅಧಿಕಾರಿಗಳು, ಸಿಬ್ಬಂದಿಯಿಂದ ಸುರಕ್ಷೆಯ ಸರ್ಪಗಾವಲು ಹಾಕಲಾಗುತ್ತಿದೆ.

ಬೀದರ್‌ ಉತ್ಸವಕ್ಕೆ ಸದ್ಯಕ್ಕೆ ಮೂರು ಜನ ಡಿಎಸ್‌ಪಿ, 23 ಸಿಪಿಐ ಹಾಗೂ 92 ಪಿಎಸ್‌ಐ, 219 ಎಎಸ್‌ಐ, 376 ಹೆಡ್‌ಕಾನ್ಸ್‌ಟೇಬಲ್‌, 712 ಸಿಪಿಸಿ, 84 ಜನ ಮಹಿಳಾ ಕಾನ್ಸ್‌ಟೇಬಲ್‌ಗಳ ಜೊತೆಗೆ 497 ಹೋಂ ಗಾರ್ಡ್‌ಗಳಲ್ಲದೆ ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳು ಮತ್ತು 4 ಡಿಎಆರ್‌ ತುಕಡಿಗಳನ್ನು ಬೀದರ್‌ ಉತ್ಸವಕ್ಕೆ ಆಗಮಿಸುವ ಜನರು, ಗಣ್ಯರು ಹಾಗೂ ಕಲಾವಿದರ ಸುರಕ್ಷತೆಗೆ ತೊಡಗಿಸಿಕೊಳ್ಳಲಾಗುತ್ತಿದೆ. ಸೆಕ್ಟರ್‌ 1 ಆಗಿ ಕಾರ್ಯಕ್ರಮದ ಮುಖ್ಯವೇದಿಕೆ, ದಾನಿಗಳು ಹಾಗೂ ಗಣ್ಯ ವ್ಯಕ್ತಿಗಳು ಮತ್ತು ಕಾರ್ಡ್‌ದಾರರು ಕುಳಿತುಕೊಳ್ಳುವ ಸ್ಥಳವನ್ನು ಸೆಕ್ಟರ್‌ 2 ಎಂದು ಹೀಗೆಯೇ 7 ಸೆಕ್ಟರ್‌ಗಳನ್ನಾಗಿ ವಿಂಗಡಿಸಿ ಅವಕಾಶ ಕಲ್ಪಿಸಲಾಗುತ್ತಿದೆ.

ಮಹಿಳಾ ಕಾರ್ಮಿ​ಕರ ಮಕ್ಕ​ಳಿಗೆ ಶಿಶು ಪಾಲನಾ ಕೇಂದ್ರ!

ಸಾರ್ವಜನಿಕರಿಗೆ ಕೋಟೆ ಮುಖ್ಯದ್ವಾರ, ಡೋಲೆ ದರ್ವಾಜಾ ಮೂಲಕ ಒಳಪ್ರವೇಶ: ಪ್ರತಿದಿನ ಮೂರು ಪ್ರವೇಶ ದ್ವಾರಗಳ ಮೂಲಕ ಬೀದರ್‌ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಕೋಟೆಯ ಮುಖ್ಯದ್ವಾರದ (ಮೀನಾ ದರ್ವಾಜಾ) ಮತ್ತು ಡೋಲೆ ದರ್ವಾಜಾ ಮೂಲಕ ಕೋಟೆಯ ಒಳಗಡೆ ಬರಲು ವ್ಯವಸ್ಥೆ ಮಾಡಲಾಗಿದೆ.

ದಿಲ್ಲಿ ದರ್ವಾಜಾ ಮೂಲಕ ದಾನಿ, ಗಣ್ಯರು ಮತ್ತು ಕಾರ್ಡ್‌ ಹೊಂದಿದವರಿಗೆ ಪ್ರವೇಶ: ದಿಲ್ಲಿ ದರ್ವಾಜಾ ಮೂಲಕ ದಾನಿಗಳು ಹಾಗೂ ಗಣ್ಯ ವ್ಯಕ್ತಿಗಳು ಮತ್ತು ಕಾರ್ಡ್‌ ಹೊಂದಿದವರಿಗೆ ವಾಹನಗಳ ಮೂಲಕ ಕೋಟೆ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿಯಾಗಿ ಡೋಲೆ ದರ್ವಾಜಾ ಮತ್ತು ಮೀನಾ ದರ್ವಾಜಾ ಮೂಲಕ ಹೊರ ಹೋಗಲು ವ್ಯವಸ್ಥೆ ಮಾಡಲಾಗಿದ್ದು, 50ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳ ಮತ್ತು 3 ಅತ್ಯುನ್ನತ ಡ್ರೋನ್‌ ಕ್ಯಾಮರಾಗಳ ಕಣ್ಗಾವಲಿನಲ್ಲಿ ಪೊಲೀಸರು ನಿಗಾ ವಹಿಸಲಿದ್ದಾರೆ. ಅದಾಗ್ಯೂ ಯಾವುದೇ ಅಹಿತಕರ ಘಟನೆಯ ದೂರು ನೀಡಲು ಎಎಸ್‌ಐ ಕಚೇರಿ ಕಟ್ಟಡದಲ್ಲಿ ಪೊಲೀಸ್‌ ಕಂಟ್ರೋಲ್‌ ರೂಂ ಸ್ಥಾಪಿಸಿದ್ದಾರೆ.

ಇಷ್ಟೇ ಅಲ್ಲ ಕೋಟೆಯ ಒಳಗಡೆ ನಡಯುವ ಕಾರ್ಯಕ್ರಮಗಳಿಗೆ ಅಷ್ಟೇ ಅಲ್ಲ ಬೀದರ್‌ ಉತ್ಸವ ನಿಮಿತ್ತ ಕೋಟೆಯ ಹೊರಗಡೆ ಜಿಲ್ಲಾ ರಂಗಮಂದಿರ, ಬಿವಿಬಿ ಕಾಲೇಜು, ಝೀರಾ ಕನ್ವೆಶನ್‌ಹಾಲ್‌ ಮಹ್ಮದ್‌ ಗಾವಾನ್‌ ಮದರಸಾ ಇಲ್ಲಿಯೂ ಪೊಲೀಸ್‌ ಕಣ್ಗಾವಲಿನ ವ್ಯವಸ್ಥೆ ಇರಲಿದೆ.

ಎಎಸ್‌ಸಿ ತಂಡದಿಂದ ಪ್ರತಿಯೊಬ್ಬರ, ಪ್ರತಿಯೊಂದು ವಸ್ತು ತಪಾಸಣೆ, 3 ಹೊರಠಾಣೆ: ಪ್ರತಿದಿನ ಕಾರ್ಯಕ್ರಮ ನಡೆಯುವ ಎಲ್ಲ ಸ್ಥಳಗಳಲ್ಲಿ ಎಎಸ್‌ಸಿ ತಂಡದಿಂದ ತಪಾಸಣೆ ನಡೆಸಲಾಗುತ್ತದೆ. ಗಣ್ಯರಿಗೆ ಕೊಡಮಾಡುವ ಪುಷ್ಪಗುಚ್ಛ ಮತ್ತು ನೆನಪಿನ ಕಾಣಿಕೆಗಳನ್ನು ಎಎಸ್‌ಸಿ ತಂಡದಿಂದ ತಪಾಸಣೆಗೆ ಒಳಪಡಿಸಲಾಗುತ್ತದೆ ಕೋಟೆಯ ಒಳಗಡೆ ಸಾರ್ವಜನಿಕರ ಅನುಕೂಲಕ್ಕಾಗಿ 3 ಪೊಲೀಸ್‌ ಹೊರಠಾಣೆಗಳನ್ನು ತೆರೆಯಲಾಗುತ್ತಿದೆ.

ಭಾವಿ ಅಗ್ನಿವೀರರಿಗೆ ಸಚಿವ ಪ್ರಭು ಚವ್ಹಾಣ್‌ ಪ್ರೋತ್ಸಾಹ

ಬೀದರ್‌ ಉತ್ಸವದಲ್ಲಿ ಅತ್ಯುನ್ನತ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು, ಗಣ್ಯರು ಹಾಗೂ ಕಲಾವಿದರಿಗೆ ಎಲ್ಲ ರೀತಿಯಲ್ಲಿ ಸುರಕ್ಷತೆ ಸಿಗುವಂತೆ ಪ್ರಯತ್ನ ಮಾಡಲಾಗಿದೆ. ಪೊಲೀಸರ ಮಾರ್ಗಸೂಚಿಗಳನ್ನು ಸಾರ್ವಜನಿಕರು ಪಾಲಿಸುವ ಮೂಲಕ ಸಹಕರಿಸಬೇಕು.
- ಡೆಕ್ಕ ಕಿಶೋರ ಬಾಬು, ಎಸ್‌ಪಿ