MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Vaastu
  • ಪೂಜೆ ಮಾಡೋ ಜಾಗದಲ್ಲಿ ಇವನ್ನೆಲ್ಲ ಇಡ್ಬೇಡಿ, ಮೆಚ್ಚೋಲ್ಲ ದೇವರು!

ಪೂಜೆ ಮಾಡೋ ಜಾಗದಲ್ಲಿ ಇವನ್ನೆಲ್ಲ ಇಡ್ಬೇಡಿ, ಮೆಚ್ಚೋಲ್ಲ ದೇವರು!

ಶತಮಾನಗಳಷ್ಟು ಹಳೆಯದಾದ ಸಂಪ್ರದಾಯಗಳನ್ನು ಗಮನದಲ್ಲಿಟ್ಟುಕೊಂಡು, ಪ್ರತಿಯೊಬ್ಬ ಮನುಷ್ಯನು ತಮ್ಮ ಮನೆಯ ಒಂದು ಮೂಲೆಯಲ್ಲಿ ಪೂಜಾ ಸ್ಥಳ ನಿರ್ಮಿಸುತ್ತಾನೆ. ಅವನು ಒಂದೇ ಕೋಣೆಯಿರುವ ಮನೆಯಲ್ಲಿ ವಾಸಿಸುತ್ತಿದ್ದರೂ, ಅವನು ಖಂಡಿತವಾಗಿಯೂ ಆ ಕೋಣೆಯ ಗೋಡೆಯ ಮೇಲೆ ಪೂಜಾ ಸ್ಥಳವನ್ನು ನಿರ್ಮಿಸುತ್ತಾನೆ. 

2 Min read
Suvarna News
Published : Jan 02 2023, 04:32 PM IST
Share this Photo Gallery
  • FB
  • TW
  • Linkdin
  • Whatsapp
110

ಪೂಜಾ ಸ್ಥಳವು (Pooj place) ನಾವು ದೇವರನ್ನು ಪೂಜಿಸುವ ಸ್ಥಳ. ಅಲ್ಲದೆ, ಇದು ಮನೆಯ ಅತ್ಯಂತ ಸಕಾರಾತ್ಮಕ ಶಕ್ತಿ (Positive Energy) ಇರುವ ಸ್ಥಳ. ಪ್ರತಿಯೊಬ್ಬ ವ್ಯಕ್ತಿ ತನ್ನ ಮನೆಯ ಪೂಜಾ ಸ್ಥಳವನ್ನು ತುಂಬಾ ಅಲಂಕರಿಸಿರುತ್ತಾನೆ, ಮತ್ತು ಅವನು ಈ ಸ್ಥಳದಲ್ಲಿ ಪ್ರತಿಯೊಂದೂ ದೇವರ ಚಿತ್ರ ಅಥವಾ ವಿಗ್ರಹ ಇಟ್ಟಿರುತ್ತಾನೆ. ಹಾಗಾಗಿ, ವಾಸ್ತು ಶಾಸ್ತ್ರದ ಕೆಲವು ಸೂಚನೆಗಳಿವೆ, ಅವುಗಳನ್ನು ನೋಡಿಕೊಳ್ಳಬೇಕು. ಇದನ್ನು ಮಾಡದಿದ್ದರೆ, ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಸ್ಥಾನವು ಹೆಚ್ಚಾಗಲು ಪ್ರಾರಂಭಿಸುತ್ತೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ-

210
ಮುರಿದ ಪ್ರತಿಮೆ(Broken Idol)

ಮುರಿದ ಪ್ರತಿಮೆ(Broken Idol)

ಧರ್ಮಗ್ರಂಥಗಳಲ್ಲಿ, ದೇವರು ಮತ್ತು ದೇವತೆಗಳ ಛಿದ್ರಗೊಂಡ ವಿಗ್ರಹಗಳನ್ನು ಪೂಜಾ ಸ್ಥಳದಲ್ಲಿ ಇಡೋದನ್ನು ನಿಷೇಧಿಸಲಾಗಿದೆ. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತೆ. ಅಂತಹ ವಿಗ್ರಹವನ್ನು ಪೂಜಾ ಸ್ಥಳದಲ್ಲಿ ಇಟ್ಟಿದ್ದರೆ, ಆಗ ನೀವು ಪೂಜಾ ಫಲವನ್ನು ಪಡೆಯೋದಿಲ್ಲ ಎಂದು ಹೇಳಲಾಗುತ್ತೆ.
 

310
ಮುರಿದ ಅಕ್ಷತೆ ಕಾಳು

ಮುರಿದ ಅಕ್ಷತೆ ಕಾಳು

ಮನೆಯ ಪೂಜಾ ಸ್ಥಳದಲ್ಲಿ ತುಂಡಾದ ಅಕ್ಷತೆಯನ್ನು ಎಂದಿಗೂ ಇಡಬಾರದು. ಯಾವಾಗಲೂ ಸಂಪೂರ್ಣ ಅಕ್ಷತೆ (ಅಕ್ಕಿ) (Rice) ಯನ್ನು ಅಲ್ಲಿ ಇರಿಸಿ. ತುಂಡಾದ ಅಕ್ಷತೆ ಪೂಜಾ ಸ್ಥಳದಲ್ಲಿ ಇಡೋದು ಎಂದರೆ ದೇವಾನುದೇವತೆಗಳಿಗೆ ಸುಳ್ಳು ಆಹಾರ ಬಡಿಸೋದು ಎಂದು ನಂಬಲಾಗಿದೆ. ಆದ್ದರಿಂದ, ಪೂಜಾ ಸ್ಥಳದಲ್ಲಿ ಕುಳಿತಿರುವ ದೇವರು ಮತ್ತು ದೇವತೆಗಳಿಗಾಗಿ ಯಾವಾಗಲೂ ಇಡೀ ಅಕ್ಷತೆಯನ್ನು ಇಡುವುದು ಬಹಳ ಮುಖ್ಯ.

410
ಹಳೆಯ ಹೂವುಗಳು(Flowers)

ಹಳೆಯ ಹೂವುಗಳು(Flowers)

ಪ್ರತಿದಿನ ಪೂಜೆ ಮಾಡುವ ಮೊದಲು ಪೂಜಾ ಸ್ಥಳದಲ್ಲಿ ಹೂವುಗಳನ್ನು ಇಡಲು ಇಷ್ಟಪಡುತ್ತೇವೆ. ದೇವರು ಮತ್ತು ದೇವತೆಗಳ ಆರಾಧನೆಯಲ್ಲಿ ಹೂವುಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತೆ. ಪೂಜಾ ಸ್ಥಳದಲ್ಲಿ ಯಾವಾಗಲೂ ತಾಜಾ ಹೂವುಗಳನ್ನು ಇಡಬೇಕು.

510

ಯಾವುದೇ ದಿನ ತಾಜಾ ಹೂವುಗಳನ್ನು ತರಲು ಸಾಧ್ಯವಾಗದಿದ್ದರೆ, ಪೂಜೆ ಪ್ರಾರಂಭಿಸುವ ಮೊದಲು, ನೀವು ದೇವರು ಮತ್ತು ದೇವತೆಗಳ ವಿಗ್ರಹಗಳಿಂದ (Idol) ಇರಿಸಲಾದ ಹಳೆಯ ಹೂವುಳು ಅಥವಾ ಹಾರಗಳನ್ನು ತೆಗೆದುಹಾಕುವ ಮೂಲಕ ಪೂಜಿಸಬೇಕು. ಒಣಗಿದ ಹೂವು ಅಥವಾ ಹಾರಗಳನ್ನು ಎಂದಿಗೂ ಪೂಜಾ ಸ್ಥಳದಲ್ಲಿ ಮತ್ತು ಮನೆಯ ಇತರ ಯಾವುದೇ ಸ್ಥಳದಲ್ಲಿ ಇಡಬಾರದು ಎಂದು ವಾಸ್ತು ಶಾಸ್ತ್ರವು ಹೇಳುತ್ತೆ. ಇದು ಬಡತನಕ್ಕೆ ಕಾರಣವಾಗುತ್ತೆ.

610
ಹರಿದ ಧಾರ್ಮಿಕ ಪುಸ್ತಕ

ಹರಿದ ಧಾರ್ಮಿಕ ಪುಸ್ತಕ

ಧಾರ್ಮಿಕ ಪುಸ್ತಕಗಳನ್ನು ಮನೆಯಲ್ಲಿ ಪೂಜಾ ಸ್ಥಳದಲ್ಲಿ ಇಡುವ ಅಭ್ಯಾಸ ಹೆಚ್ಚಿನ ಜನರಿಗಿದೆ. ವಿಶೇಷವಾಗಿ ಹನುಮಾನ್ ಚಾಲೀಸಾ (Hanuman Chalisa), ಶಿವ ಚಾಲೀಸಾ, ಗೀತಾ, ಸತ್ಯನಾರಾಯಣ ಕಥಾ ಇತ್ಯಾದಿ. ಹರಿದ ಧಾರ್ಮಿಕ ಪುಸ್ತಕಗಳನ್ನು ಪೂಜಾ ಸ್ಥಳದಲ್ಲಿ ಇಡಬಾರದು ಎಂದು ಧರ್ಮಾಚಾರ್ಯರು ಹೇಳುತ್ತಾರೆ.

710
ನಗುವ ಚಿತ್ರಗಳನ್ನು ಇಟ್ಟುಕೊಳ್ಳಿ, ಸಿಟ್ಟಿನಲ್ಲಿರುವ ಚಿತ್ರಗಳನ್ನಲ್ಲ.

ನಗುವ ಚಿತ್ರಗಳನ್ನು ಇಟ್ಟುಕೊಳ್ಳಿ, ಸಿಟ್ಟಿನಲ್ಲಿರುವ ಚಿತ್ರಗಳನ್ನಲ್ಲ.

ಪೂಜಾ ಸ್ಥಳದಲ್ಲಿ ಇರಿಸಲು ಬಯಸುವ ದೇವರು ಮತ್ತು ದೇವತೆಗಳ ಯಾವುದೇ ಚಿತ್ರವು ನಗುವಿನ ಅಥವಾ ಮುಖದ ಮೇಲೆ ಶಾಂತವಾದ ಅಭಿವ್ಯಕ್ತಿ ಹೊಂದಿರುವ ಚಿತ್ರವಾಗಿರಬೇಕು. ಮರೆತು ಕೂಡ ಪೂಜಾ ಸ್ಥಳದಲ್ಲಿ ಸಿಟ್ಟಿನ ಚಿತ್ರಗಳನ್ನು ಇಡಬೇಡಿ, ಇದು ಮನೆಯಲ್ಲಿ ಜಗಳವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಅಲ್ಲದೆ, ಮನೆಯ ಸದಸ್ಯರು ಒತ್ತಡಕ್ಕೆ ಒಳಗಾಗುತ್ತಾರೆ. ಹಾಗಾಗಿ ನಟರಾಜನ (Nataraja)ರೂಪದಲ್ಲಿ ಶಿವನ ವಿಗ್ರಹ ಇಡಬಾರದು ಮತ್ತು ಹನುಮಂತನ ಚಿತ್ರವನ್ನು ಸಹ ಪ್ರತಿಷ್ಠಾಪಿಸಬಾರದು.
 

810
ಒಂದೇ ಚಿತ್ರ(Photo) ಅಥವಾ ಪ್ರತಿಮೆಯನ್ನು ಹೊಂದಿರಬೇಕು

ಒಂದೇ ಚಿತ್ರ(Photo) ಅಥವಾ ಪ್ರತಿಮೆಯನ್ನು ಹೊಂದಿರಬೇಕು

ಒಂದೇ ದೇವತೆಯ ಒಂದಕ್ಕಿಂತ ಹೆಚ್ಚು ವಿಗ್ರಹ ಅಥವಾ ಚಿತ್ರವನ್ನು ಪೂಜಾ ಸ್ಥಳದಲ್ಲಿ ಇಟ್ಟಿದ್ದರೆ, ಅದನ್ನು ತಕ್ಷಣ ಬದಲಾಯಿಸಿ. ಒಂದೇ ದೇವತೆಯ ಒಂದಕ್ಕಿಂತ ಹೆಚ್ಚು ವಿಗ್ರಹ ಅಥವಾ ಚಿತ್ರಗಳನ್ನು ಹೊಂದಿರುವುದು ಮನೆಯಲ್ಲಿ ಸಂತೋಷಕ್ಕಿಂತ ಸಮಸ್ಯೆಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ ಎಂದು ಹೇಳಲಾಗುತ್ತೆ. ಮನೆಯ ಪ್ರತಿಯೊಬ್ಬ ಸದಸ್ಯನು ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಾನೆ.

910
ಪೂರ್ವಜರ ಚಿತ್ರಗಳನ್ನು ಹಾಕಬೇಡಿ

ಪೂರ್ವಜರ ಚಿತ್ರಗಳನ್ನು ಹಾಕಬೇಡಿ

ಮನೆಯ ಪೂಜಾ ಕೋಣೆಯಲ್ಲಿ ಪೂರ್ವಜರ (ತಾಯಿ, ತಂದೆ, ಅಜ್ಜ, ಅಜ್ಜಿ, ಇತ್ಯಾದಿ) ಚಿತ್ರಗಳನ್ನು ನಾವು ಎಂದಿಗೂ ಇಡಬಾರದು. ದೇವತಾಶಾಸ್ತ್ರದಲ್ಲಿ ಇದನ್ನು ನಿಷಿದ್ಧವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಪೂರ್ವಜರ ಚಿತ್ರಗಳನ್ನು ಹಾಕಲು ಬಯಸೋದಾದ್ರೆ, ಅವುಗಳನ್ನು ಮನೆಯ ದಕ್ಷಿಣ ಗೋಡೆಯ ಮೇಲೆ ಇರಿಸಿ. ಮನೆಯ ದಕ್ಷಿಣದ ಗೋಡೆಯು ಪೂರ್ವಜರ ಸರಿಯಾದ ಸ್ಥಳವಾಗಿದೆ ಎಂದು ವಾಸ್ತು ಶಾಸ್ತ್ರ (Vaastu shastra) ಹೇಳುತ್ತೆ. ಇದು ಪೂರ್ವಜರನ್ನು ಸಂತೋಷಪಡಿಸುತ್ತೆ.

1010
ಚಾಕು(Knife) ಅಥವಾ ಚೂಪಾದ ವಸ್ತು

ಚಾಕು(Knife) ಅಥವಾ ಚೂಪಾದ ವಸ್ತು

ಮನೆಯಲ್ಲಿ ಪೂಜಾ ಸ್ಥಳದಲ್ಲಿ ನಾವು ಎಂದಿಗೂ ಚಾಕು ಅಥವಾ ಹರಿತವಾದ ವಸ್ತುವನ್ನು ಇಡಬಾರದು. ಇದು ಶನಿಯ ವ್ಯತಿರಿಕ್ತ ಪರಿಣಾಮ ಬೀರುತ್ತೆ ಎಂದು ವಾಸ್ತು ಶಾಸ್ತ್ರ ಹೇಳುತ್ತೆ. ಇಂತಹ ವಸ್ತುಗಳು ನಿಮ್ಮ ಪೂಜಾ ಕೋಣೆಯಲ್ಲಿದ್ದರೆ, ಕೂಡಲೆ ಅವುಗಳನ್ನು ಅಲ್ಲಿಂದ ತೆಗೆದು ಹಾಕೋದು ಉತ್ತಮ. 

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved