Asianet Suvarna News Asianet Suvarna News

Daily Horoscope: ಆರೋಗ್ಯ ಸಮಸ್ಯೆಗೆ ತುಲಾ ತತ್ತರ, ವೃಷಭಕ್ಕೆ ಧನ ಲಾಭ

18 ಜನವರಿ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ತಪ್ಪಿನಿಂದ ಅವಮಾನ ಎದುರಿಸುವ ಸ್ಥಿತಿ ಕನ್ಯಾ ರಾಶಿಯದು, ನಿಮ್ಮ ರಾಶಿ ಫಲ ಏನು ನೋಡಿ..

Daily horoscope of January 18th 2022 in Kannada SKR
Author
Bangalore, First Published Jan 18, 2022, 5:00 AM IST

ಮೇಷ(Aries): ನಿಮ್ಮ ವಾಕ್ಚಾತುರ್ಯದಿಂದ ಎಲ್ಲರನ್ನೂ ಅಚ್ಚರಿಗೊಳಿಸುವಿರಿ. ವಕೀಲರು, ಮನರಂಜನಾ ವೃತ್ತಿಯಲ್ಲಿರುವವರು ಸೇರಿದಂತೆ ಮಾತಿನ ಬಲ ಬೇಕಾಗುವ ವೃತ್ತಿಯಲ್ಲಿರುವವರಿಗೆ ಉತ್ತಮ ದಿನ. ಉದ್ಯೋಗದಲ್ಲಿ ಪ್ರಶಂಸೆ ಸಿಗಲಿದೆ. ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ. 

ವೃಷಭ(Taurus): ನಿಮ್ಮ ಶ್ರಮ, ಕಾರ್ಯಕ್ಷಮತೆಗೆ ಮೆಚ್ಚುಗೆ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಶೇರು, ಲೇವಾದೇವಿ ವ್ಯವಹಾರಗಳಲ್ಲಿ ಲಾಭವಿರಲಿದೆ. ಸ್ನೇಹಿತರಿಂದ ಸಹಾಯ ದೊರೆಯಲಿದೆ. ಹವ್ಯಾಸಗಳಿಂದ ಧನ ಲಾಭವಿದೆ. ಕೆಂಪು ಧಾನ್ಯವನ್ನು ದಾನ ಮಾಡಿ. 

ಮಿಥುನ(Gemini): ವ್ಯಾಪಾರ, ವಹಿವಾಟು ಕೊಂಚ ಸುಧಾರಣೆ ಕಾಣಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಉತ್ಸಾಹ ತೋರಿ ಬರಲಿದೆ. ಆಪ್ತರು ಮಾಡುತ್ತಿರುವ ಮೋಸ ಬೆಳಕಿಗೆ ಬರಬಹುದು. ಅಧ್ಯಯನಶೀಲರಿಗೆ ಗೌರವ ಪ್ರಾಪ್ತಿಯಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳಿಂದ ಮನಸ್ಸು ಪ್ರಫುಲ್ಲಿತವಾಗುತ್ತದೆ. ಗಣಪತಿಗೆ ಕಡಲೆ ನೈವೇದ್ಯ ಮಾಡಿ.

ಕಟಕ(Cancer): ಸಣ್ಣ ಪುಟ್ಟ ವಿಷಯಗಳಿಗೂ ಕೋಪ ಬರಬಹುದು. ಇದರ ಪರಿಣಾಮ ಜೊತೆಯಲ್ಲಿರುವವರಿಗೆ ಕಿರಿಕಿರಿ ಉಂಟು ಮಾಡುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಹಿನ್ನಡೆ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ. ಅಸೂಯಾಪರರಿಂದ ಉದ್ಯೋಗದಲ್ಲಿ ಕಿರಿಕಿರಿ. ಆಂಜನೇಯನ ಸ್ಮರಣೆ ಮಾಡಿ. 

ಸಿಂಹ(Leo): ಈ ರಾಶಿಯ ನಿರುದ್ಯೋಗಿಗಳಿಗೆ ಇದು ಸುದಿನ. ನಿಮ್ಮ ಸ್ನೇಹಿತರ ಸಹಾಯದಿಂದ ಹೊಸ ಕೆಲಸ ದೊರೆಯಲಿದೆ. ಹವ್ಯಾಸಗಳಿಂದ ಮನಸ್ಸಿಗೆ ಸಂತೋಷ. ಮನೆಯ ಜವಾಬ್ದಾರಿಗಳಿಂದ ನುಣಚಿ ಕೊಳ್ಳುವ ಅಭ್ಯಾಸ ಬಿಡಿ. ಈ ಬಗ್ಗೆ ಪೋಷಕರ ಚಿಂತೆಯನ್ನು ನೀಗಿಸಿ. ಪೋಷಕರ ಆಶೀರ್ವಾದ ಪಡೆಯಿರಿ. 

ಕನ್ಯಾ(Virgo): ಮಕ್ಕಳು ಮಾಡುವ ತಪ್ಪಿಗೆ ದೊಡ್ಡವರು ತಲೆ ತಗ್ಗಿಸುವ ಸ್ಥಿತಿ ಬರಬಹುದು. ಮಾತಿನ ತಪ್ಪಿನಿಂದ ಇಲ್ಲವೇ ಕೆಲಸದ ಎಡವಟ್ಟಿನಿಂದ ಅವಮಾನ ಎದುರಿಸಬೇಕಾಗಬಹುದು. ಯಾರಿಗೂ ಸಾಲ ಕೊಡಲು ಹೋಗಬೇಡಿ. ಹೋಟೆಲ್ ವ್ಯವಹಾರದಲ್ಲಿ ಲಾಭ ಇರಲಿದೆ. ವಿಷ್ಣು ಸಹಸ್ರನಾಮ ಪಠಿಸಿ. 

ತುಲಾ(Libra): ಆರೋಗ್ಯ ಸಮಸ್ಯೆಗಳು ಮನಸ್ಸನ್ನು ಕೆಡಿಸಲಿವೆ. ಮನೆಮದ್ದನ್ನು ಮಾಡಿಕೊಳ್ಳುತ್ತಾ ಕೂರುವ ಬದಲು ವೈದ್ಯರ ಭೇಟಿ ಮಾಡಿ. ಮಕ್ಕಳ ವಿಚಾರದಲ್ಲಿ ಹೆಚ್ಚು ಸಮಯ ನೀಡಲಾಗದೆ ಒದ್ದಾಡುವಿರಿ. ಉದ್ಯೋಗದಲ್ಲಿ ಏರುಪೇರಿಲ್ಲ. ರಾಮಸ್ಮರಣೆ ಮಾಡಿ. 

Personality Traits: ಈ ನಾಲ್ಕು ರಾಶಿಯವರು ಮಹಾ ಕೋಪಿಷ್ಠರು, ಹುಟ್ಟಾ ಜಗಳಗಂಟರು!

ವೃಶ್ಚಿಕ(Scorpio): ಉತ್ಸಾಹದಿಂದ ತುಂಬಿರುವಿರಿ. ನಿಮ್ಮ ಸಕಾರಾತ್ಮಕ ಮನಸ್ಥಿತಿಯಿಂದಾಗಿ ಎಲ್ಲ ಒಳಿತಾಗಲಿದೆ. ನಿಮ್ಮ ಬುದ್ಧಿವಂತಿಕೆ ಹಾಗೂ ಕಾರ್ಯಕ್ಷಮತೆಗೆ ಮೆಚ್ಚುಗೆ ಸಿಗಲಿದೆ. ಮಕ್ಕಳು ಹೊಸ ಕಲಿಕೆಯಲ್ಲಿ ಆಸಕ್ತಿ ತೋರಿಸುವರು. ಹನುಮಾನ್ ಚಾಲೀಸ್ ಹೇಳಿ. 

ಧನುಸ್ಸು(Sagittarius): ಈ ದಿನ ಮಾಡುವ ಸಣ್ಣ ಹೂಡಿಕೆಗಳು ಮುಂದೆ ಉತ್ತಮ ಲಾಭ ತರಲಿವೆ. ಸಂಗಾತಿಯ ಆರೋಗ್ಯ ಸುಧಾರಣೆಯಿಂದ ಮನಸ್ಸು ನಿರಾಳವಾಗುವುದು. ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಸಂತೋಷ ತರಲಿವೆ. ಆಂಜನೇಯನಿಗೆ ಕೆಂಪು ವಸ್ತ್ರ ದಾನ ಮಾಡಿ.

ಮಕರ(Capricorn): ಹಿತಶತ್ರುಗಳ ಉಪಟಳ ಹಾಗೂ ದಾಯಾದಿಗಳ ಕಿರಿಕಿರಿ ಕಾಡಬಹುದು. ಅಲ್ಪಶ್ರಮದಿಂದ ಕಾರ್ಯ ಸಾಧನೆ ಆಗುವುದು. ನಿರೀಕ್ಷೆಯನ್ನೇ ಕೈ ಬಿಟ್ಟಿದ್ದ ದೊಡ್ಡ ಮೊತ್ತದ ಸಾಲ ಹಿಂದಿರುಗಿ ಬರಲಿದೆ. ಸರ್ಕಾರಿ ಕೆಲಸಗಳು ಸುಸೂತ್ರವಾಗಿ ಜರುಗಿ ಮನಸ್ಸಿಗೆ ನೆಮ್ಮದಿ. ಆಂಜನೇಯ ಧ್ಯಾನ ಮಾಡಿ. 

Past Life: ಕನಸಿನ ಈ ಸೂಚನೆಗಳು ನಿಮ್ಮ ಪೂರ್ವ ಜನ್ಮದ ನೆನಪುಗಳಿರಬಹುದು..!

ಕುಂಭ(Aquarius): ವಿರೋಧಿಗಳ ಉಪದ್ರವ ಹೆಚ್ಚಬಹುದು. ಸರಿಯಾಗಿ ತಾಕುವಂತ ಪ್ರತಿಕ್ರಿಯೆ ನೀಡಿ. ಇಲ್ಲಿದದ್ದಲ್ಲಿ ಅವರ ತೊಂದರೆ ಅಸಹನೀಯವಾಗಬಹುದು. ವೃಥಾ ಅಪವಾದ ಕೇಳಿ ಬರಲಿದೆ. ಮನೆಯಲ್ಲಿ ಸಂಗಾತಿಯೊಂದಿಗೆ ಮಾತಿನ ಚಕಮಕಿ ಆಗಲಿದೆ. ರಾಮ ಧ್ಯಾನ ಮಾಡಿ. 

ಮೀನ(Pisces): ಪಾಲುದಾರಿಕೆ ವ್ಯವಹಾರಗಳಲ್ಲಿ ಎಚ್ಚರ ಅಗತ್ಯ. ಮತ್ತೊಬ್ಬರ ಪ್ರಗತಿ ಕಂಡು ಕರುಬುವುದನ್ನು ಬಿಡಿ. ನಿಮ್ಮ ಪ್ರಗತಿಯ ಕಡೆ ಹೆಚ್ಚಿನ ಗಮನ ವಹಿಸಿ. ವ್ಯಾಪಾರ ವ್ಯವಹಾರದಲ್ಲಿ ಲಾಭವಿದ್ದರೂ ಖರ್ಚೂ ಹೆಚ್ಚಲಿದೆ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 
 

Follow Us:
Download App:
  • android
  • ios