Asianet Suvarna News Asianet Suvarna News

Daily Horoscope: ಧನು ರಾಶಿಗೆ ಇಂದು ಆಸ್ತಿ ಖರೀದಿ ಸಾಧ್ಯತೆ, ಉಳಿದ ರಾಶಿಗಳ ಫಲವೇನಿದೆ?

19 ಡಿಸೆಂಬರ್ 2021, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೇಷಕ್ಕೆ ವಿದ್ಯಾಭ್ಯಾಸ ಪ್ರಗತಿ, ವೃಶ್ಚಿಕಕ್ಕೆ ಅಹಕಾರದಿಂದ ಕೇಡು

Daily horoscope of December 19th 2021 in Kannada SKR
Author
Bangalore, First Published Dec 19, 2021, 5:08 AM IST
  • Facebook
  • Twitter
  • Whatsapp

ಮೇಷ(Aries): ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಅರಸಿ ಬರುವುವು. ಮಕ್ಕಳ ಪ್ರೀತಿಯ ಬಲದಲ್ಲಿ ನೀವು ಅಂದುಕೊಂಡ ಕಾರ್ಯ ನೆರವೇರುವುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರಲಿದೆ. ಉದ್ಯೋಗದಲ್ಲಿ ವಿದೇಶಕ್ಕೆ ಹೋಗುವ ಅವಕಾಶ ಬರಬಹುದು. ಸೂರ್ಯನಿಗೆ ನಮಸ್ಕರಿಸಿ. 

ವೃಷಭ(Taurus): ವೃತ್ತಿಯಲ್ಲಿ ಉದಾಸೀನ ಧೋರಣೆ. ಬೇಕಾಬಿಟ್ಟಿ ಸಮಯ ಹಾಳು ಮಾಡಬೇಡಿ. ಚಂಚಲವಾಗುವ ಮನಸ್ಸನ್ನು ಎಳೆದು ತರುವ ಕೆಲಸ ಮಾಡಿ. ಮನೆಯಲ್ಲಿ ಹಿರಿಯರಿಂದ ಬೈಸಿಕೊಳ್ಳಬಹುದು. ಅದಕ್ಕೆ ಮರು ಮಾತಾಡುವ ಬದಲು ನಿಜವಿರಬಹುದೇ ಎಂದು ಆತ್ಮಾವಲೋಕನ ಮಾಡಿಕೊಳ್ಳಿ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಮಿಥುನ(Gemini): ಹೊಸ ರುಚಿ ಸವಿಯುವ ಅವಕಾಶ. ಮಾತು, ಹರಟೆ ಹೆಚ್ಚು. ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಖೇದಕರ ವಿಷಯಗಳು ಜರುಗಬಹುದು. ಹಳೆ ನೆನಪುಗಳಲ್ಲಿ ತೇಲುವುದನ್ನು ಬಿಟ್ಟು ವಾಸ್ತವದಲ್ಲಿ ಜೀವಿಸಿ. ವ್ಯವಹಾರ ಸಂಬಂಧ ಮಾತುಕತೆಯಲ್ಲಿ ಪ್ರಗತಿ ಕಾಣಬಹುದು. ಆದಿತ್ಯ ಹೃದಯ ಪಠಿಸಿ. 

Foreplay tips: ನಿಮ್ಮ ರಾಶಿಗೆ ಯಾವ ಮುನ್ನಲಿವು ಹೆಚ್ಚು ಆನಂದ ತರುವುದು ಗೊತ್ತಾ..

ಕಟಕ(Cancer): ದೇಹದಂಡನೆಯಿಂದ ಉಲ್ಲಾಸ. ದಿನವಿಡೀ ಮನಸ್ಸು ಪ್ರಫುಲ್ಲಿತವಾಗಿರಲಿದೆ. ಪಾಲುದಾರಿಕೆ ಕೆಲಸಗಳಿಗೆ ಕೈ ಹಾಕುವಿರಿ. ವಿದ್ಯಾರ್ಥಿಗಳಿಗೆ, ಕ್ರೀಡಾಪಟುಗಳಿಗೆ ಸಂತಸದ ದಿನ. ತಂದೆಯ ಮಾತಿಗೆ ಎದುರಾಡಬೇಡಿ. ಸಂಗಾತಿಯೊಂದಿಗೆ ದೂರ ಪ್ರಯಾಣ. ವಿಷ್ಣು ಸಹಸ್ರನಾಮ ಹೇಳಿ.

ಸಿಂಹ(Leo): ಗೃಹಕೃತ್ಯಗಳಿಂದ ದೇಹಾಯಾಸ. ತಾಯಿಯ ಕಡೆಯ ಸಂಬಂಧದಿಂದ ಸಿಹಿ ಸುದ್ದಿ. ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿ ಸಂತಸ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು. ವ್ಯಾಪಾರಿಗಳಿಗೆ ಲಾಭ. ರೈತರಿಗೆ ಬಿಡುವಿಲ್ಲದ ದಿನ. ಗಣಪತಿ ಪ್ರಾರ್ಥನೆ ಮಾಡಿ. 

ಕನ್ಯಾ(Virgo): ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಗಳು ಕಂಗೆಡಿಸಿಯಾವು. ಯಾವುದನ್ನೂ ನಿರ್ಲಕ್ಷ್ಯ ಮಾಡದೆ ವೈದ್ಯರಲ್ಲಿ ತೋರಿಸಿ. ನೀವು ಹಿಂದೆ ಮಾಡಿದ್ದ ತಪ್ಪಿಗೆ ಇಂದು ಪ್ರಾಯಶ್ಚಿತ್ತ ಪಡಬೇಕಾದ ಸಂದರ್ಭ ಒದಗಿ ಬರಬಹುದು. ಸಂಬಂಧಿಕರೊಂದಿಗೆ ಮಾತನಾಡುವಾಗ ಮಾತುಗಳು ಮಿತಿಯಲ್ಲಿರುವಂತೆ ಎಚ್ಚರ ವಹಿಸಿ. ಗಣಪತಿಗೆ ಕಡಲೆ ಅರ್ಪಿಸಿ. 

Government Job ಬೇಕಂದ್ರೆ ಹೀಗ್ ಮಾಡಿ..

ತುಲಾ(Libra): ಮನೆಯ ಕೆಲ ಸದಸ್ಯರು ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದೂ ಮೌನ ವಹಿಸಿಕೊಂಡು ಬರುವುದು ಸರಿಯಲ್ಲ. ಅವರಿಗೆ ವಿಷಯ ಅರಿವು ಮೂಡಿಸಿ. ಆರೋಗ್ಯ ಏರುಪೇರಾಗಬಹುದು. ಆದಷ್ಟು ಆಹಾರದ ಕಡೆ ಗಮನ ವಹಿಸಿ. ಹವ್ಯಾಸಗಳಿಗೆ ಸಮಯ ವ್ಯಯಿಸುವಿರಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ವೃಶ್ಚಿಕ(Scorpio): ನಿಮ್ಮದೇ ಸರಿ ಎಂಬ ಧೋರಣೆ ಬಿಡಿ. ಅದರಿಂದಲೇ ಮನೋಕ್ಲೇಶಗಳು ಹೆಚ್ಚುತ್ತಿರುವುದು. ಅಹಂಕಾರ ಪ್ರವೃತ್ತಿಯಿಂದ ಸಂಬಂಧಗಳನ್ನು ಕಳೆದುಕೊಳ್ಳುವಿರಿ. ಕೋಪ ನಿಯಂತ್ರಿಸಿಕೊಳ್ಳಿ. ಮಕ್ಕಳ ವಿಷಯದಲ್ಲಿ ಜಾಗ್ರತೆ ಅಗತ್ಯ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ಆದಿತ್ಯ ಹೃದಯ ಪಠಿಸಿ. 

ಧನುಸ್ಸು(Sagittarius): ಹಿರಿಯರ ಸಲಹೆಗಳನ್ನು ಪರಿಗಣಿಸಿ. ಅವಿವಾಹಿತರಿಗೆ ಕಂಕಣ ಬಲ. ವಸ್ತ್ರ, ದಿನಸಿ, ವಾಹನದ ಬಿಡಿ ಭಾಗ, ಪೀಠೋಪಕರಣ ವ್ಯಾಪಾರಿಗಳಿಗೆ ಲಾಭ ಕಟ್ಟಿಟ್ಟ ಬುತ್ತಿ. ಆಸ್ತಿ ಖರೀದಿ ಸಂಬಂಧ ಕೆಲಸಗಳು ಜರುಗುವುವು. ಮನೆ ಬದಲಾಯಿಸಲು ಶುಭ ದಿನ. ತಂದೆತಾಯಿಯ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಬಲ ಪಡೆಯಿರಿ.

ಮಕರ(Capricorn): ಧೀರ್ಘಕಾಲದ ನೋವು, ಅನಾರೋಗ್ಯ ಕಡಿಮೆಯಾಗುವುದು. ಮನಸ್ಸಿನಲ್ಲಿ ಕೊರೆಯುತ್ತಿರುವ ಚಿಂತೆ, ಬೆಣ್ಣೆಯಂತೆ ಕರಗಿ ಹೋಗುವುದು. ಕಿರಿಯರ ಸಹಾಯದಿಂದ ಕೆಲಸ ಕಾರ್ಯಗಳು ಸುಗಮವಾಗಿ ಸಾಗುವುವು. ವ್ಯಾಪಾರದಲ್ಲಿ ಲಾಭ. ಸಂಗಾತಿಯ ಸಲಹೆಯಿಂದ ಒಳಿತಾಗುವುದು. ಹಸುವಿಗೆ ಹಸಿರನ್ನು ತಿನ್ನಿಸಿ. 

ಕುಂಭ(Aquarius): ಶುಭ ಕಾರ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆ. ಮಕ್ಕಳಿಂದ ಸಹಕಾರ. ಉದ್ಯೋಗದಲ್ಲಿ ಏರುಪೇರಿಲ್ಲದ ಫಲಿತಾಂಶ. ದೂರ ಪ್ರಯಾಣದಿಂದ ಕೈಗೊಂಡ ಕೆಲಸಗಳು ಸರಾಗವಾಗಿ ಸಾಗುವುವು. ವಾಹನ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಸ್ನೇಹಿತರ ಭೇಟಿಯಿಂದ ಸಂತಸ. ಇರುವೆಗೆ ಸಿಹಿ ನೀಡಿ.

ಮೀನ(Pisces): ದೇವತಾ ಕಾರ್ಯಗಳಲ್ಲಿ ಆಸಕ್ತಿ. ಅತಿಯಾದ ಗೃಹಕೃತ್ಯಗಳಿಂದ ಬೇಸರ. ಬಂಧುಬಳಗದ ಕಡೆಯಿಂದ ಪ್ರಶಂಸೆ ಕೇಳಿಬಂದು ಉಲ್ಲಾಸಿತರಾಗುವಿರಿ. ಸಂಗಾತಿಯ ಬೆಂಬಲದಿಂದ ತೆಗೆದುಕೊಂಡ ನಿರ್ಧಾರಗಳೆಲ್ಲವೂ ಸಫಲ ಫಲಿತಾಂಶ ನೀಡುವುವು. ಪಕ್ಷಿಗಳಿಗೆ ಕಾಳುಗಳನ್ನು ಹಾಕಿ. 

Follow Us:
Download App:
  • android
  • ios