Asianet Suvarna News Asianet Suvarna News

Foreplay tips: ನಿಮ್ಮ ರಾಶಿಗೆ ಯಾವ ಮುನ್ನಲಿವು ಹೆಚ್ಚು ಆನಂದ ತರುವುದು ಗೊತ್ತಾ..

ಜ್ಯೋತಿಷ್ಯಕ್ಕೂ ಲೈಂಗಿಕತೆಗೂ ತಲತಲಾಂತರದಿಂದ ಅವಿನಾಭಾವ ಸಂಬಂಧವಿದೆ. ಲೈಂಗಿಕ ಜೀವನದಲ್ಲಿ ಮುನ್ನಲಿವು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ನಿಮ್ಮ ರಾಶಿಗೆ ಯಾವ ರೀತಿಯ ಮುನ್ನಲಿವು ಹೆಚ್ಚು ಆನಂದ ತಂದುಕೊಡಲಿದೆ ತಿಳಿಯಿರಿ. 

Foreplay Tips Based On Your Zodiac Sign
Author
Bangalore, First Published Dec 18, 2021, 11:20 AM IST
  • Facebook
  • Twitter
  • Whatsapp

ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಮ್ಮ ಬಗ್ಗೆ ನೀವು ತಿಳಿಯಲು ಮಿತಿಯೇ ಇಲ್ಲ. ನಿಮ್ಮ ರಾಶಿ, ನಕ್ಷತ್ರಗಳೇ ನಿಮ್ಮ ಸ್ವಭಾವ ನಿರ್ಧರಿಸುತ್ತವೆ, ನೀವು ಇನ್ನೊಬ್ಬರೊಂದಿಗೆ ಹೇಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳುತ್ತೀರಿ, ನಿಮ್ಮನ್ನು ನೀವು ಜಗತ್ತಿಗೆ ಹೇಗೆ ತೋರ್ಪಡಿಸಿಕೊಳ್ಳುತ್ತೀರಿ ಎಲ್ಲವನ್ನೂ ಜ್ಯೋತಿಷ್ಯದಿಂದ ತಿಳಿಯಬಹುದು. ಆದರೆ, ಅಲ್ಲಿಗೇ ನಮ್ಮ ಈ ಪುರಾತನ ಶಾಸ್ತ್ರ ಕೊನೆಯಾಗುವುದಿಲ್ಲ. ಇದರ ವಿಸ್ತಾರದಲ್ಲಿ ಸೆಕ್ಸ್ ಕೂಡಾ ಇದೆ. ಸೆಕ್ಸ್ ಹಾಗೂ ಲವ್ ಜಗತ್ತಿನ ಬಗ್ಗೆ ಕೂಡಾ ಬಹಳ ಹಿಂದೆಯೇ ಜ್ಯೋತಿಷ್ಯ ಶಾಸ್ತ್ರಜ್ಞರು ಸಾಕಷ್ಟು ವಿಷಯಗಳ ಸಂಶೋಧನೆ ನಡೆಸಿದ್ದಾರೆ. 

ಮಂಗಳ ಹಾಗೂ ಶುಕ್ರ ಗ್ರಹಗಳು ನಿಮ್ಮ ರಾಶಿಯ ಮೇಲೆ ಬೀರುವ ಪರಿಣಾಮಗಳಿಂದ ನಿಮ್ಮ ಸೆಕ್ಸ್ ಲೈಫ್ ನಿರ್ಧರಿತವಾಗುತ್ತದೆ. ನಿಮ್ಮ ಸ್ವಭಾವಕ್ಕೆ ಸರಿಯಾಗಿ ಯಾವ ರೀತಿಯ ಹಸ್ತಮೈಥುನದಿಂದ, ಮುನ್ನಲಿವಿನಿಂದ ನಿಮ್ಮ ಲೈಂಗಿಕ ಜೀವನ ಹೆಚ್ಚು ತೃಪ್ತಿಕರವಾಗಿರುತ್ತದೆ ಎಂಬುದನ್ನು ಕೂಡಾ ಕಂಡುಕೊಳ್ಳಬಹುದು. ಹಾಗಿದ್ದರೆ, ನಿಮ್ಮ ರಾಶಿಯ ಲೈಂಗಿಕ ಜೀವನವನ್ನು ಹೆಚ್ಚು ಆಕರ್ಷಕವಾಗಿಸಲು ನೀವು ಏನು ಮಾಡಬಹುದು ಎಂಬುದನ್ನು ಕಂಡುಕೊಳ್ಳಿ.

ಮೇಷ(Aries)
ನಿಮ್ಮ ಸ್ಪರ್ಧಾತ್ಮಕ ಮನಸ್ಥಿತಿ ಹಾಗೂ ವೇಗಕ್ಕೆ ಸರಿ ಹೊಂದುವಂತೆ, ಸಂಗಾತಿಯೊಂದಿಗೆ ಕೋಣೆಯಲ್ಲಿ ಸಿಕ್ಕಿದಂತೆ ಮಾಡಿ ತಪ್ಪಿಸಿಕೊಳ್ಳುವ ಆಟ ಆಡಬಹುದು. ಇದು ನಿಮಗೆ ಬಹಳ ಆಸಕ್ತಿಕರವೆನಿಸಲಿದೆ. 

ವೃಷಭ(Taurus)
ಲಕ್ಷುರಿ ಹಾಗೂ ಕಂಫರ್ಟ್ - ಈ ಎರಡು ಪದಗಳೇ ನಿಮ್ಮನ್ನು ವಿವರಿಸುತ್ತವೆ. ಹಾಗಾಗಿ, ನೀವು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಿ. ಬಹಳ ಸೊಗಸಾಗಿರುವ ಬೆಡ್‌ಶೀಟ್‌ಗಳನ್ನು ಕೊಂಡಿಟ್ಟುಕೊಳ್ಳಿ. ನಿಮ್ಮ ಬೆಡ್‌ಶೀಟನ್ನು ಆಗಾಗ ಬದಲಿಸಿ. ಕೋಣೆಯನ್ನು ಸುಂದರವಾಗಿ ಜೋಡಿಸಿಟ್ಟುಕೊಳ್ಳಿ. ಸುಗಂಧ ಬೀರುವ ಕ್ಯಾಂಡಲ್ ಹಚ್ಚಿಡಿ. ಬಿಸಿ ನೀರಿನಲ್ಲಿ ಸಮಯ ತೆಗೆದುಕೊಂಡು ಸ್ನಾನ ಮಾಡಿ ಹಾಗೂ ಎರೋಟಿಕ್ ಪುಸ್ತಕ ಓದಿ. ಮೂಡ್ ಹೇಗೆ ಬದಲಾಗುವುದು ಸ್ವತಃ ಅನುಭವಿಸಿ ನೋಡಿ. 

Government Job ಬೇಕಂದ್ರೆ ಹೀಗ್ ಮಾಡಿ..

ಮಿಥುನ(Gemini)
ನಿಮಗೆ ಪದಗಳೊಂದಿಗೆ ಆಡುವುದಿಷ್ಟ. ಹೆಚ್ಚು ಮಾತುಗಳಿಷ್ಟ. ಹಾಗಾಗಿ, ಮುನ್ನಲಿವಿಗಾಗಿ ಆಡಿಯೋ ಪೋರ್ನ್ ಆ್ಯಪ್ ಬಳಸಬಹುದು. ಇಲ್ಲವೇ ಕಾಮಾಸಕ್ತಿ ಹೆಚ್ಚಿಸುವ ಪುಸ್ತಕಗಳನ್ನು ಓದಿ. ನಿಮ್ಮ ಪಾರ್ಟ್ನರ್ ಜೊತೆ ಸೆಕ್ಸ್‌ಟಿಂಗ್‌(sexting)ನಲ್ಲಿ ತೊಡಗುವುದು ಕೂಡಾ ಬಹಳ ಎಂಜಾಯ್ ಮಾಡುವಿರಿ. ಇದಲ್ಲದೆ, ಸಂಗಾತಿಯೊಂದಿಗೆ ಖಾಸಗಿಯಾಗಿರುವಾಗ ಸರಸ ಸಂಭಾಷಣೆಗಳಲ್ಲೇ ರಸ ನಿಮಿಷವನ್ನು ಆರಂಭಿಸಿ. 

ಕಟಕ(Cancer)
ದೇಹದಲ್ಲಿ ಆಕರ್ಷಕ ಎನಿಸುವಂಥ ಭಾಗಗಳ ಮೇಲೆ ಐಸ್ ಕ್ಯೂಬ್ ಇಲ್ಲವೇ ಬೆರಳುಗಳನ್ನು ಆಡಿಸಿ. 

Morning Routine: ಬೆಳಗ್ಗೆದ್ದ ಕೂಡ್ಲೇ ಇದ್ಯಾವ್ದನ್ನೂ ನೋಡ್ಬೇಡಿ, ದುರದೃಷ್ಟ ಬೆನ್ನು ಹತ್ತಬಹುದು

ಸಿಂಹ(Leo)
ಸಿಂಹ ರಾಶಿಯವರಿಗೆ ಸ್ಪಾಟ್‌ಲೈಟಲ್ಲಿರುವುದಿಷ್ಟ. ಕನ್ನಡಿಯ ಎದುರು ಫೋರ್‌ಪ್ಲೇ ಮಾಡುವುದರಿಂದ ಇವರ ಉತ್ಸಾಹ ಇಮ್ಮಡಿಯಾಗುತ್ತದೆ. ಸಂಗಾತಿ ಇರಲಿ, ಇಲ್ಲದಿರಲಿ, ಕನ್ನಡಿಯ ಪ್ರತಿಬಿಂಬದಲ್ಲಿ ನಿಮ್ಮ ದೇಹ ಸುಖಿಸುವುದನ್ನು ನೋಡುವುದೇ ನಿಮಗೆ ತೃಪ್ತಿ ಹೆಚ್ಚಿಸುತ್ತದೆ. 

ಕನ್ಯಾ(Virgo)
ಎಲ್ಲವನ್ನೂ ಯೋಜಿಸುವ ಗುಣ ನಿಮ್ಮದು. ಹಾಗಿದ್ದರೆ, ನಿಮ್ಮ ಲೈಂಗಿಕ ಜೀವನಕ್ಕೆ ರೋಲ್ ಪ್ಲೇ ಸೀನ್ ಸೇರಿಸಬೇರದೇಕೆ? ನೀವೇ ಮನಸ್ಸಿನಲ್ಲೊಂದು ಫ್ಯಾಂಟಸಿ ಕಲ್ಪಿಸಿಕೊಳ್ಳಿ. ಅದಕ್ಕೆ ಸರಿಯಾಗಿ ರೆಡಿಯಾಗಬಹುದು. ನಂತರ ಮನಸ್ಸಿಗೆ ಬಂದಂತೆ ರೋಲ್ ಪ್ಲೇ ಮಾಡಿ. 

ತುಲಾ(Libra)
ನೀವು ಹುಟ್ಟಾ ಫ್ಲರ್ಟ್. ನಿಮ್ಮನ್ನಾಳುವುದೇ ಶುಕ್ರ ಗ್ರಹ. ಹಾಗಾಗಿ, ಲೈಂಗಿಕ ಸುಖ ಪೂರ್ತಿ ನಿಮಗೆ ಸಿಗಲಿದೆ. ಇದಕ್ಕಾಗಿ ನಿಮ್ಮ ಸಂಗಾತಿಯೊಂದಿಗೆ ಕೊಂಚ ಸಮಯ ಫ್ಲರ್ಟ್ ಮಾಡಿ. ಒಬ್ಬರನ್ನೊಬ್ಬರು ಸೆಕ್ಸೀ ಭಾಷೆಯಲ್ಲಿ ಚುಡಾಯಿಸಿಕೊಳ್ಳಿ. 

ವೃಶ್ಚಿಕ(Scorpio)
ಕ್ಯಾಂಡಲ್ಸ್ ಹಚ್ಚಿ, ನಿಧಾನಗತಿಯ ಮ್ಯೂಸಿಕ್ ಹಾಕಿಟ್ಟುಕೊಳ್ಳಿ. ನಿಮ್ಮ ಟಾಯ್ಸ್ ಬಳಸಿಕೊಂಡು ಎಂಜಾಯ್ ಮಾಡಿ. ಈ ರೀತಿಯ ಮುನ್ನಲಿವು ನಿಮ್ಮ ಸುಖ ಹೆಚ್ಚಿಸುತ್ತದೆ. 

ಧನು(Sagittarius)
ಸಾಹಸ ಪ್ರವೃತ್ತಿಯವರಾದ ನಿಮಗೆ ಬೆಡ್‌ರೂಂನ ಲಿಮಿಟ್ ಸರಿಯಲ್ಲ. ನಿಮ್ಮ ಲಿವಿಂಗ್ ರೂಂ, ಶವರ್, ಅಥವಾ ನೆಲದ ಮೇಲೆ ಮುನ್ನಲಿವಿನಲ್ಲಿ ತೊಡಗಿಕೊಳ್ಳಿ. ಹೊಸ ಹೊಸ ಐಡಿಯಾಗಳು ತಾವಾಗಿಯೇ ತಲೆಗೆ ಬರುತ್ತವೆ. 

ಮಕರ(Capricorn)
ನಿಮಗಾಗಲೇ ನಿಮ್ಮ ಸುಖ ಎಲ್ಲಿದೆ ಎಂಬುದು ಗೊತ್ತಿದೆ. ನೀವು ಅದೇ ಐಡಿಯಾಕ್ಕೆ ಅಂಟಿಕೊಂಡಿರುವುದು ಉತ್ತಮ. 

ಕುಂಭ(Aquarius)
ನೀವು ಆವಿಷ್ಕಾರವನ್ನು ಬಯಸುವವರು. ತಂತ್ರಜ್ಞಾನ ಮೆಚ್ಚುವವರು. ಹಾಗಾಗಿ, ಹೈ ಟೆಕ್ ಸೆಕ್ಸ್ ಟಾಯ್ಸ್ ಅಥವಾ ವಿಆರ್ ಪೋರ್ನ್ ನಿಮ್ಮ ತೃಪ್ತಿ ಹೆಚ್ಚಿಸಲಿವೆ. 

ಮೀನ(Pisces)
ನಿಮಗೆ ರೊಮ್ಯಾಂಟಿಕ್ ಫ್ಯಾಂಟಸಿಗಳಿಷ್ಟ. ಹಾಗಾಗಿ, ಒಳ್ಳೆಯ ರೊಮ್ಯಾನ್ಸ್ ಕಾದಂಬರಿ ಓದುತ್ತಾ ಹೋಗಿ. ಅಥವಾ ಮೂವಿಯ ಕೆರಳಿಸುವ ಸೀನ್‌ಗಳನ್ನು ನೋಡಿ. ನಿಮ್ಮದು ನೀರಿನ ರಾಶಿ ಕೂಡಾ ಆಗಿದ್ದು, ಟಬ್‌ನೊಳಗೆ ಇಲ್ಲವೇ ಶವರ್ ಕೆಳಗೆ ನಿಲ್ಲುವುದನ್ನು ಕೂಡಾ ಟ್ರೈ ಮಾಡಿ. 

Follow Us:
Download App:
  • android
  • ios