Daily Horoscope: ಯುಗಾದಿಯ ದಿನ ನಿಮ್ಮ ಭವಿಷ್ಯ ಏನಿರಲಿದೆ ನೋಡಿ..
2 ಏಪ್ರಿಲ್ 2022, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕುಂಭ ರಾಶಿಯ ವ್ಯಾಪಾರಸ್ಥರಿಗೆ ಸುವರ್ಣಾವಕಾಶ
ಮೇಷ(Aries): ನಿಮ್ಮ ಒಳ್ಳೆಯ ರೀತಿಯ ಮಾತುಗಳು ಮತ್ತೊಬ್ಬರಲ್ಲಿ ಚೈತನ್ಯ ತುಂಬಲಿವೆ. ನೆಂಟರಿಷ್ಟರ ಭೇಟಿ ಸಂತಸ ತರುವುದು. ಕುಟುಂಬದ ವಾತಾವರಣವು ಮಂಗಳಕರವಾಗಿರುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚುತ್ತದೆ. ಇಷ್ಟ ದೇವರ ಪ್ರಾರ್ಥನೆ ಮಾಡಿ.
ವೃಷಭ(Taurus): ದುಡ್ಡಿನ ವಿಚಾರದಲ್ಲಿ ಯೋಚನೆ ಹೆಚ್ಚಾಗಬಹುದು. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಮನೆಕೆಲಸಗಳಿಗೆ ಖರ್ಚು ಮಾಡುವಿರಿ. ಆಸ್ತಿ ಸಂಬಂಧಿತ ವಿಷಯಗಳಲ್ಲಿ ನೀವು ಲಾಭ ಪಡೆಯುತ್ತೀರಿ. ಜೀರ್ಣಕ್ರಿಯೆ ಸಮಸ್ಯೆಗಳು ಕಾಡಬಹುದು. ನವಗ್ರಹ ಶ್ಲೋಕ ಹೇಳಿಕೊಳ್ಳಿ.
ಮಿಥುನ(Gemini): ಕೆಲಸ ಕಾರ್ಯಗಳಲ್ಲಿ ಉದಾಸೀನತೆ ತೋರಿ ಬರುವುದು. ನಿಮ್ಮ ಕೋಪ ಮತ್ತು ಹಠಮಾರಿತನದ ವರ್ತನೆಯು ಕೆಲಸಗಳಲ್ಲಿ ಅಡೆತಡೆಗಳನ್ನು ತರಬಹುದು. ಸಾಧ್ಯವಾದಷ್ಟು ಮನಸ್ಸನ್ನು ಹತೋಟಿಗೆ ತರಲು ಪ್ರಯತ್ನಿಸಿ. ಬಡವರಿಗೆ ವಸ್ತ್ರ ದಾನ ಮಾಡಿ.
ಕಟಕ(Cancer): ಆರ್ಥಿಕ ಅಡಚಣೆಗಳಿದ್ದರೂ ಕೆಲ ಕಾರ್ಯಗಳಲ್ಲಿ ಪ್ರಗತಿ ಇರುತ್ತದೆ. ಅಜೀರ್ಣ, ಉದರಬೇನೆ, ಮನಕ್ಲೇಶ ಇತ್ಯಾದಿ ಆರೋಗ್ಯ ಸಮಸ್ಯೆಗಳು ಹೈರಾಣಾಗಿಸಬಹುದು. ಊಟದ ಕಡೆ ಗಮನ ವಹಿಸಿ. ಕೆಲಸ ಕಾರ್ಯಗಳು ನೀವೆಣಿಸಿದಂತೆಯೇ ಆಗಬೇಕೆಂಬ ಹಟ ಬಿಡಿ. ಕುಲ ದೇವರ ಸ್ಮರಣೆ ಮಾಡಿ.
ಸಿಂಹ(Leo): ರೋಗ ರುಜಿನಗಳಿಂದ ಉಪಶಮನ ದೊರೆಯುವುದು. ಮನಸ್ಸಿಗೆ ಕೊಂಚ ವಿಶ್ರಾಂತಿ ದೊರೆಯುವುದು. ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ ಮತ್ತು ಕುಟುಂಬದ ಗೌರವ ಮತ್ತು ಸ್ಥಾನಮಾನ ಹೆಚ್ಚಾಗುತ್ತದೆ. ಶನಿ ಸ್ಮರಣೆ ಮಾಡಿ.
ಕನ್ಯಾ(Virgo): ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಮಾನಸಿಕ ನೆಮ್ಮದಿಯ ಕೊರತೆ ಉಂಟಾಗಬಹುದು. ಒಡವೆ, ವಸ್ತ್ರಗಳಿಗಾಗಿ ಖರ್ಚು ಹೆಚ್ಚಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುತ್ತಾರೆ. ನಾಲ್ಕು ಜನರಿಗೆ ಹೊಟ್ಟೆ ತುಂಬಾ ಊಟ ಹಾಕಿ.
ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದೇಕೆ?
ತುಲಾ(Libra): ಗೃಹ ಕಾರ್ಯ ಹಾಗೂ ದಾಂಪತ್ಯ ಜೀವನ ಸಮೃದ್ಧಿ ಇರಲಿದೆ. ಪುಶ್ಕಳ ಭೋಜನ ಸವಿಯುವಿರಿ. ದೈವಾನುಗ್ರಹವಿದ್ದು, ಛಲದಿಂದ ಪ್ರಯತ್ನಬಲ ಹಾಕಿದಲ್ಲಿ ನೀವೆಣಿಸಿದಂತೆಯೇ ಎಲ್ಲ ಕಾರ್ಯಗಳು ಸಿದ್ಧಿಯಾಗಲಿವೆ. ದೇವಸ್ಥಾನಕ್ಕೆ ಭೇಟಿ ನೀಡಿ.
ವೃಶ್ಚಿಕ(Scorpio): ಅವಿವಾಹಿತರಿಗೆ ಕಂಕಣಬಲ ಬರುತ್ತದೆ. ಮನೆಯಲ್ಲಿ ಮಂಗಳ ಕಾರ್ಯಕ್ರಮ ನಡೆಸಬಹುದು. ಸಣ್ಣ ಸಣ್ಣ ವಿಚಾರಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ನಿರ್ಲಕ್ಷ್ಯ ತೋರಿರಿ. ಛಲವಂತರಾದ ನಿಮಗೆ ದೈವಿಕ ಚಿಂತನೆಯೇ ಶ್ರೀ ರಕ್ಷೆಯಾಗಿದೆ. ನವಗ್ರಹ ದೇವಾಲಯಕ್ಕೆ ಸುತ್ತು ಬನ್ನಿ.
ಧನುಸ್ಸು(Sagittarius): ನಿಮ್ಮ ವ್ಯಾಪಾರ, ವ್ಯವಹಾರದಲ್ಲಿ ದೊಡ್ಡ ಮಟ್ಟದ ಲಾಭದ ಸಿಗದೇ ಹೋದರೂ ತಕ್ಕಮಟ್ಟಿನ ಯಶಸ್ಸು ಪಡೆಯುವಿರಿ. ಹವಾಮಾನ ಬದಲಾವಣೆಯಿಂದ ಆರೋಗ್ಯ ಸಮಸ್ಯೆಯ ಸಾಧ್ಯತೆ ಇರುತ್ತದೆ. ಕುಲದೇವರಿಗೆ ತುಪ್ಪದ ದೀಪ ಹಚ್ಚಿ.
Ugadi 2022: ಬದುಕಿನ ಪಾಠ ಹೇಳುವ ಬೇವು ಬೆಲ್ಲ.. ಈ ಕಾರಣಕ್ಕೆ ಸೇವಿಸಿ
ಮಕರ(Capricorn): ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ನಿಮ್ಮನ್ನು ತೊಂದರೆಗೆ ದೂಡಬಹುದು, ಮೋಸವಾಗಬಹುದು. ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ಕುಟುಂಬದಲ್ಲಿ ವಿವಾಹದ ಮಾತುಕತೆ ನಡೆಯಬಹುದು. ಇಷ್ಟ ದೇವರಲ್ಲಿ ಪ್ರಾರ್ಥಿಸಿ.
ಕುಂಭ(Aquarius): ಖರ್ಚಿನ ಬಾಬ್ತು ಹೆಚ್ಚಿದ್ದರೂ ಧನಾಗಮವೂ ಹೆಚ್ಚಿರಲಿದೆ. ಸ್ನೇಹಿತರು ಮತ್ತು ಸಂಬಂಧಿಗಳೊಂದಿಗೆ ನಿಮ್ಮ ಸಂಬಂಧಗಳು ಸುಧಾರಿಸುತ್ತವೆ. ವ್ಯಾಪಾರಸ್ಥರಿಗೆ ಸುವರ್ಣ ಅವಕಾಶಗಳಿರುತ್ತವೆ. ಬಾಕಿ ಕೆಲಸಗಳು ಪೂರ್ಣಗೊಳ್ಳುತ್ತವೆ. ಬ್ರಹ್ಮನನ್ನು ಸ್ಮರಿಸಿಕೊಳ್ಳಿ.
ಬಂದೇ ಬಿಡ್ತು ಯುಗಾದಿ, ಆಚರಣೆ ಹೇಗೆ?
ಮೀನ(Pisces): ಸ್ವಂತ ಉದ್ಯೋಗ ಮಾಡುವವರಿಗೆ ಉತ್ತಮ ಲಾಭವಿದೆ. ನಿಮ್ಮ ಸೃಜನಶೀಲ ವ್ಯಕ್ತಿತ್ವ ಮುನ್ನೆಲೆಗೆ ಬರುತ್ತದೆ. ಮಕ್ಕಳೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ಹಣ ಗಳಿಸಲು ಅನೇಕ ಅವಕಾಶಗಳನ್ನು ಪಡೆಯುತ್ತೀರಿ. ಶನಿ ಸ್ಮರಣೆ ಮಾಡಿ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.