ಮೇಷ: ಹಂಚುವುದಿದ್ದರೆ ಸಂತೋಷವನ್ನು ಹಂಚಿ. ಮತ್ತೊಬ್ಬರಿಗೆ ನೋವು ಕೊಟ್ಟು ಸಂತೋಷ ಪಡುವುದು ಸರಿಯಲ್ಲ. ಮತಿ ಶುದ್ಧವಿರಲಿ.

ವೃಷಭ: ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ದ ಮೇಲೆಯೂ ಅದನ್ನು ಮಾಡುವುದಕ್ಕೆ ಹೋಗಬಾರದು. ಸನ್ಮಾರ್ಗದಲ್ಲಿ ಸಾಗಿ.

ಮಿಥುನ: ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ನಿಮಗೆ ಗೊತ್ತಿಲ್ಲದೇ ಇರುವ ವಿಚಾರವನ್ನು ತಿಳಿದವರ ಬಳಿ ಕೇಳಿ ತಿಳಿಯುವುದು ಉತ್ತಮ.

ಕಟಕ: ನಿಮಗೆ ಸರಿ ಕಾಣದೇ ಇರುವುದನ್ನು ನೇರವಾಗಿ ಖಂಡಿಸಿ. ಎಲ್ಲರಿಗೂ ಇಷ್ಟವಾಗುವ ಹಾಗೆ ಬದುಕುವುದಕ್ಕೆ ಖಂಡಿತ ಸಾಧ್ಯವಿಲ್ಲ

ಸಿಂಹ: ತಂದೆ ತಾಯಿಯ ಮಾತಿನಂತೆ ನಡೆದುಕೊಳ್ಳಿ. ಅತಿಯಾದ ಸಿಟ್ಟು ನಿಮ್ಮನ್ನೇ ಮೊದಲು ಸುಡುವುದು. ಪ್ರವಾಸ ಹೊರಡಲಿದ್ದೀರಿ

ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕನ್ಯಾ: ಆತ್ಮೀಯರು ಇಂದು ಇಡೀ ದಿನ ನಿಮ್ಮೊಂದಿಗೆ ಇರಲಿದ್ದಾರೆ. ಸಣ್ಣ ಸಣ್ಣ ವಿಚಾರಗಳಿಗೂ ತಲೆ ಕೆಡಿಸಿಕೊಂಡು ಕೂರುವುದು ಬೇಡ.

ತುಲಾ: ನಿಂದನೆಗಳು ಬರುವುದು ಸಹಜ. ಹಾಗೆಂದು ಅವುಗಳಿಗೆ ಹೆದರಿಕೊಂಡು ಕೂರುವುದು ಬೇಡ. ಬದುಕು ಬಂದ ಹಾಗೆ ಸ್ವೀಕಾರ ಮಾಡಿ

ವೃಶ್ಚಿಕ: ನಿಮ್ಮ ಉತ್ಸಾಹವೇ ಇಂದು ನಿಮ್ಮನ್ನು ಹೊಸ ಅವಕಾಶದ ಬಳಿ ಕರೆದೊಯ್ಯಲಿದೆ. ಮತ್ತೊಬ್ಬರಿಗೆ ಕಿರಿಕಿರಿ ಮಾಡದಿರಿ.

ಧನುಸ್ಸು: ಅನಿರೀಕ್ಷಿತವಾಗಿ ಗೆಳೆಯರೊಂದಿಗೆ ಪ್ರವಾಸ ಹೊರಡಿಲಿದ್ದೀರಿ. ಕ್ಷುಲ್ಲಕ ಕಾರಣಗಳಿಗೆ ಚಿಂತೆ ಮಾಡುತ್ತಾ ಕೂರುವುದು ಬೇಡ. ಶುಭ ಫಲ.

ಮಕರ: ಕರ್ತವ್ಯದಲ್ಲಿ ಲೋಪ ಬರದಂತೆ ಎಚ್ಚರ ವಹಿಸಿ. ಪ್ರಶಂಸೆ ಬೇಕು ಎಂದರೆ ಕಠಿಣವಾದ ಪರಿಶ್ರಮ ಹಾಕಲೇಬೇಕು. ಧೈರ್ಯ ಇರಲಿ

ಕುಂಭ: ಖರ್ಚಿನ ಮೇಲೆ ಹಿಡಿತ ಇರಲಿ. ಎಲ್ಲರನ್ನೂ ಪ್ರೀತಿಯಿಂದ ಕಾಣುವಿರಿ. ನಿಮ್ಮದಲ್ಲದ ವಿಚಾರಗಳಿಗೆ ನೀವು ಚಿಂತೆ ಮಾಡದಿರಿ.

ಮೀನ: ಆರ್ಥಿಕ ಪ್ರಗತಿ. ಸಂಸಾರದಲ್ಲಿ ಸಂತೋಷ ಇರಲಿದೆ. ಇಡೀ ದಿನ ಸಂಭ್ರಮದಿಂದ ಕೂಡಿರಲಿದೆ. ಅಂದುಕೊಂಡಿದ್ದು ಆಗಲಿದೆ.

ಈ ರಾಶಿಗೆ ಭಾರೀ ಸಿಹಿ ಸುದ್ದಿಯೊಂದು ಬರಲಿದೆ : ವಾರ ಭವಿಷ್ಯ