ಮೇಷ
ಮನಸ್ಸು ಮಾಡಿದರೆ ಯಾವ ಕೆಲಸವೂ ಕಷ್ಟವಲ್ಲ.
ಶ್ರದ್ಧೆ, ಭಕ್ತಿ, ಜೊತೆಗೆ ಮಾಡುವ ಕೆಲಸದಲ್ಲಿ
ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು. ಆಗ
ಮಾತ್ರ ಯಶಸ್ಸು ಸಿಗಲಿದೆ. ಮಹಿಳೆಯರಿಗೆ ಈ ವಾರ
ಮನಸ್ಸಲ್ಲಿ ಕಿರಿಕಿರಿ ಹೆಚ್ಚಾಗಿರುತ್ತೆ. ದೇವಸ್ಥಾನ ಅಥವಾ
ಪ್ರಕೃತಿಯ ಜೊತೆ ಒಂದಿಷ್ಟು ಸಮಯ ಕಳೆಯಿರಿ.

ವೃಷಭ
ಹಣ ಹಣ ಎಂದರೆ ಹೆಣ ಕೂಡ ಬಾಯಿ ಬಿಡುತ್ತೆ
ಎನ್ನುವ ಮಾತಿದೆ. ಅತೀಯಾದ ಹಣದ ಆಸೆ
ನಿಮ್ಮನ್ನು ಕೆಟ್ಟ ದಾರಿಗೆ ತಳ್ಳುವ ಸಾಧ್ಯತೆ ಹೆಚ್ಚು.
ಹಾಗಾಗಿ ಏನೇ ಕೆಲಸಕ್ಕೂ ಕೈ ಹಾಕುವ ಮುನ್ನ ಸಾವಿರ
ಬಾರಿ ಯೋಚಿಸಿ. ಇಲ್ಲವೇ ಹಿರಿಯರೊಂದಿಗೆ ಚರ್ಚಿಸಿ
ನಿರ್ಧಾರ ತೆಗೆದುಕೊಳ್ಳಿ. ಬಂಧುಗಳ ಆಗಮನ ಸಾಧ್ಯತೆ.

ರುದ್ರಾಕ್ಷಿ ಧರಿಸುವುದರಿಂದ ಏನು ಪ್ರಯೋಜನ?

ಮಿಥುನ
ಕಳೆದ ವಾರದ ಸಿಹಿ ಸುದ್ದಿಯಿಂದ ನಿಮ್ಮಲ್ಲೇನೋ
ಬದಲಾವಣೆ ಕಾಣಲಿದ್ದೀರಿ. ಈಗಿರುವುದಕ್ಕಿಂತ
ಇನ್ನೊಂದಿಷ್ಟು ಜವಾಬ್ದಾರಿ ನಿಮ್ಮ ಹೆಗಲ
ಮೇಲಿದೆ. ಸಂತೋಷ ಒಂದು ಕಡೆಯಾದರೆ ಇನ್ನೊಂದು
ಕಡೆ ದೂರ ದೃಷ್ಟಿ ನಿಮ್ಮನ್ನು ಕಾಡಲಿದೆ. ಸೋದರಿಯ ಬಗ್ಗೆ
ಹೆಚ್ಚು ಜಾಗೃತಿ ವಹಿಸುವಿರಿ. ನೆಮ್ಮದಿ ಕಾಣಲಿದ್ದೀರಿ.

ಕಟಕ
ಜೀವನದಲ್ಲಿನ ಕೆಲ ಅನುಭವಗಳಿಂದ ಕಲಿತ
ಪಾಠಗಳು ಆಗಾಗ್ಗೆ ನೆನಪಿಸುತ್ತವೆ. ಇದು ಮತ್ತೆ
ಎಡವುದು ಬೇಡ ಎಂದು ನಾವೇ ಅರಿತುಕೊ
ಳ್ಳಬೇಕು. ಮಾಡಿದ ಕೆಲಸವನ್ನು ತಿರುಗಾಮುರುಗ ಅದನ್ನೇ
ಮಾಡದಿರಿ. ಶಾಂತ ರೀತಿಯಲ್ಲಿ ಯೋಚಿಸಿ. ಕೆಲ
ವಿಚಾರಗಳಲ್ಲಿ ಸೂಕ್ತ ನಿರ್ಧಾರ ನಿಮ್ಮದಾಗಿರಲಿ.

ಸಿಂಹ
ಜೀವನದಲ್ಲಿ ಹೊಸ ಅನುಭವಗಳು, ಹೊಸ
ತಿರುವುಗಳು ಕಾಣಿಸಿಕೊಳ್ಳಲಿದೆ. ಇದರಿಂದ
ಕುಟುಂಬದ ಸದಸ್ಯರಲ್ಲಿ ಸಂತಸದ ವಾತಾವ
ರಣ ನೆಲೆಸಲಿದೆ. ಹೊಸ ವಿಚಾರಗಳ ಬಗ್ಗೆ ಆಸಕ್ತಿ ತೋರಿ,
ಪುಸ್ತಕ, ಸಂಗೀತ, ಇತರೆ ಇಷ್ಟದ ಚಟುವಟಿಕೆಗಳ ಬಗ್ಗೆ
ಗಮನ ಹರಿಸಿ. ಆ್ಯಕ್ಟಿವ್ ಆಗಿದ್ದಷ್ಟು ನಿಮಗೇ ಒಳ್ಳೆಯದು.

ಕನ್ಯಾ
ಕಂಟಕ ಎದುರಾಗುತ್ತಿರುವ ಮುನ್ಸೂಚನೆ
ಸಿಗುತ್ತಿರುವಾಗಲೇ ಈ ಬಗ್ಗೆ ಹಿರಿಯರಿಂದ
ಸಲಹೆ ಪಡೆದುಕೊಳ್ಳುವುದು ಒಳಿತು. ಸ್ನೇಹಿತರ
ನಡುವಿನ ವೈಮನಸ್ಸು ಮಾತುಕತೆಯ ಮೂಲಕ ನಿವಾರಣೆ
ಯಾಗಲಿದೆ. ಉದ್ಯೋಗದಲ್ಲಿ ಪ್ರಗತಿ ಕಾಣಲಿದ್ದೀರಿ.
ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮ ಬೆಳವಣಿಗೆ.

ಭೂಕಂಪದಿಂದ ದೇವಸ್ಥಾನಕ್ಕೇಕೆ ಹಾನಿಯಾಗುವುದಿಲ್ಲ?

ತುಲಾ
ಕಪ್ಪೆಯನ್ನು ತಕ್ಕಡಿಗೆ ಹಾಕಿದಂತೆ ನಿಮ್ಮ ಮನಸ್ಸು
ಇರಲಿದೆ. ಯಾವುದರಲ್ಲೂ ಅಚಲ ನಿರ್ಧಾರ
ಇರುವುದಿಲ್ಲ. ಈ ಸಮಯದಲ್ಲಿ ಹೊಸ
ಉದ್ಯೋಗದ ಬಗ್ಗೆ ಹಣಕಾಸಿನ ವ್ಯವಹಾರದ ಬಗ್ಗೆ
ಆಲೋಚಿಸುವುದು ಒಳಿತಲ್ಲ. ಹೊಸ ಸ್ನೇಹಿತರ ಪರಿಚಯ
ಸಾಧ್ಯತೆ. ವಿದೇಶದಿಂದ ಬಂಧುಗಳ ಆಗಮನ.

ವೃಶ್ಚಿಕ 
ಬೇರೆಯವರ ವಿಷಯದಲ್ಲಿ ಮಧ್ಯಸ್ಥಿಕೆ
ವಹಿಸುವುದರಿಂದ ಕಷ್ಟಗಳನ್ನು ನೀವೇ
ಮೈಮೇಲೆ ಎಳೆದುಕೊಂಡಂತೆ. ಇದರಿಂದ
ಎಚ್ಚರವಹಿಸುವುದು ಸೂಕ್ತ. ಅತೀಯಾದ ವಿಶ್ವಾಸವೂ
ಕೆಲವೊಮ್ಮೆ ಪೆಟ್ಟು ನೀಡುತ್ತೆ. ಈ ವಾರ ಸ್ನೇಹಿತರಿಂದ
ಸಂತೋಷ ಸಿಗಲಿದ್ದು, ದೂರ ಪ್ರಯಾಣ ಸಾಧ್ಯತೆ.

ಧನಸ್ಸು
ಮನೆಗೆ ಹೊಸ ಸದಸ್ಯರ ಬರುವ ಕಾಲ
ದೂರವಿಲ್ಲ. ಕಳೆದ ವಾರ ಕೇಳಿದ ಸಿಹಿ ಸುದ್ದಿ
ಯಿಂದ ಮನೆಯಲ್ಲಿ ಸಂತೋಷ ನೆಲೆಸಲಿದೆ.
ಮುಂದೆ ಮಾಡುವ ಕೆಲಸ ಬಹಳಷ್ಟಿದ್ದು, ನಿಮ್ಮ ಆರೋಗ್ಯ
ದ ಬಗ್ಗೆ ನೀವೇ ಎಚ್ಚರ ವಹಿಸಿಕೊಳ್ಳುವುದು ಒಳ್ಳೆಯದು.

ಮಕರ
ಸೇವಾ ಮನೋಭಾವ ನಿಮ್ಮಲ್ಲಿದ್ದು ಈ ನಿಟ್ಟಿನಲ್ಲಿ
ಈ ವಾರ ಹೆಚ್ಚು ಕೆಲಸಗಳು ನಿಮ್ಮಿಂದಾಗಲಿದೆ.
ನಿಮ್ಮ ಒಳ್ಳೆಯ ಮಾತುಗಳು ಇತರರಿಗೆ
ಸ್ಫೂರ್ತಿಯಾಗಲಿದ್ದು, ಅವರ ಜೀವನದ ಬದಲಾವಣೆಗೆ
ಕಾರಣರಾಗುವಿರಿ. ಆತ್ಮವಿಶ್ವಾಸ ನಿಮ್ಮ ಮಂತ್ರವಾಗಲಿ

ಕುಂಭ
ಭಿನ್ನಾಭಿಪ್ರಾಯದಿಂದ ನಿಂತುಹೋದ ಕೆಲಸ
ಗಳು ಒಮ್ಮತದಿಂದ ಮಾಡಿ ಮುಗಿಸುವಿರಿ.
ಕೆಲಸದ ವಿಚಾರದಲ್ಲಿ ಒತ್ತಡ ಹೆಚ್ಚಾಗಲಿದೆ.
ಒತ್ತಡದ ನಡುವೆಯೂ ಉತ್ತಮವಾಗಿ ನಿಭಾಯಿಸಿ ಎಲ್ಲರ
ಮೆಚ್ಚುಗೆ ಪಡೆಯಲಿದ್ದೀರಿ. ಹೊರಗಡೆ ತಿನ್ನುವುದು
ಹೆಚ್ಚಾದ್ದರಿಂದ ಆರೋಗ್ಯದಲ್ಲಿ ಏರುಪೇರು ಕಾಣಲಿದೆ

ಮೀನ
ಯಾರೋ ಯಾರೊಗೋ ಹೇಳಿದ ಮಾತುಗಳು
ನಿಮ್ಮ ಮನಸ್ಸಲ್ಲಿ ಪ್ರಭಾವಬೀರುವುದು.
ಇದರಿಂದ ನಿಮ್ಮಿಂದ ಒಳ್ಳೆಯ ಕೆಲಸಗಳು
ನಡೆಯಲಿದೆ. ಒಳ್ಳೆಯ ಕೆಲಸ ಮಾಡುವುದಕ್ಕೆ ಯಾವತ್ತೂ
ಹಿಂದೆ ಮುಂದೆ ನೋಡದಿರಿ.