Asianet Suvarna News Asianet Suvarna News

Daily Horoscope| ದಿನ ಭವಿಷ್ಯ: ಕಟಕ ರಾಶಿಯವರಿಗೆ ಸೋಲುಂಟಾಗುವ ಸಾಧ್ಯತೆ!


* 10 ಅಕ್ಟೋಬರ್ 2021 ಭಾನುವಾರದ ಭವಿಷ್ಯ

* ಕಟಕ ರಾಶಿಯವರಿಗೆ ಸೋಲುಂಟಾಗುವ ಸಾಧ್ಯತೆ

* ಇನ್ನುಳಿದ ರಾಶಿಗಳು ಹೇಗಿವೆ? ಇಲ್ಲಿದೆ ಇಂದಿನ ರಾಶಿ ಫಲ

Daily Horoscope 10 October 2021 astrological Predictions for Libra and other in Kannada pod
Author
Bangalore, First Published Oct 10, 2021, 7:12 AM IST
  • Facebook
  • Twitter
  • Whatsapp

ಗ್ರಹಗತಿ

* ವೃಷಭ ರಾಶಿಯಲ್ಲಿ ರಾಹು

* ಕನ್ಯಾ ರಾಶಿಯಲ್ಲಿ ರವಿ, ಬುಧ ಹಾಗೂ ಕುಜರಿದ್ದಾರೆ. 

* ವೃಶ್ಚಿಕ ರಾಶಿಯಲ್ಲಿ ಚಂದ್ರ, ಕೇತು ಹಾಗೂ ಶುಕ್ರ ಇದ್ದಾನೆ. 

* ಮಕರ ರಾಶಿಯಲ್ಲಿ ಗುರು, ಶನಿ

ಹೀಗಿರುವಾಗ ಹನ್ನೆರಡು ರಾಶಿಗಳ ಫಲಾಫಲ ಹೇಗಿರುತ್ತದೆ? ನಿಮ್ಮ ರಾಶಿಗೇನು ಫಲ? ಇಲ್ಲಿದೆ ವಿವರ
 
ಮೇಷ(Aries):ಕಾರ್ಯ ವಿಳಂಬ, ಲಾಭವಿರಲಿದೆ, ತಾಯಿಯ ಆರೋಗ್ಯದಲ್ಲಿ ತೊಡಕು, ಸ್ತ್ರೀಯರ ಮನದಲ್ಲಿ ಭಾವನೆಗಳು ವ್ಯತ್ಯಾಸವಾಗಲಿವೆ, ಕೊಂಚ ಜಾಗೃತೆಯಿಂದಿರಿ. ಬೃತರೆಯವರೊಂದಿಗೆ ವ್ಯವಹರಿಸುವಾಗ ಅಥವಾ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವಾಗ ಗಮನಹರಿಸಿ. ದುರ್ಗಾ ಪ್ರಾರ್ಥನೆ ಮಾಡಿ 

ವೃಷಭ(Taurus): ಸಪ್ತಮದಲ್ಲಿ ಚಂದ್ರ, ಶುಕ್ರ, ಕೇತು ಇದ್ದಾರೆ. ಇದು ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ.  ಸಹೋದರರಲ್ಲಿ ಅಸಮಾಧಾನ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡುವ ಸೂಚನೆ ಇದೆ. ಸ್ತ್ರೀ ಪುರುಷರಲ್ಲಿ ವಿನಾ ಕಾರಣ ಕಲಹ ವಾತಾವರಣ ನಿರ್ಮಾಣವಾಗಬಹುದು, ಕೆಲಸದಲ್ಲಿ ಅಡ್ಡಿಯಾಗುವ ಸಾಧ್ಯತೆ ಹೀಗಾಗಿ ಎಚ್ಚರಿಕೆಯಿಂದಿರಿ. ಗಣಪತಿ ಹಾಗೂ ಲಲಿತಾಪರಮೆಶ್ವರಿ ಪ್ರಾರ್ಥನೆ ಮಾಡಿ.   

ಮಿಥುನ(Gemini): ಶತ್ರುಗಳ ಕಾಟ ಇರಲಿದೆ. ಸ್ತ್ರೀಯರೇ ನಿಮಗೆ ಶತ್ರುಗಳಾಗುವ ಸಾಧ್ಯತೆ ಇದೆ. ಜೊತೆಗೆ ಹೆಣ್ಣು ಮಕ್ಕಳಲ್ಲೇ ಒಂದು ಗುಂಪು ಅತಂತ್ರಗೊಳಿಸಬಹುದು. ಪ್ರಿಯರಲ್ಲಿ ಕಲಹ, ತಂದೆ-ಮಕ್ಕಳಲ್ಲಿ ವಿರೋಧ ಉಂಟಾಗಬಹುದು. ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ

ಕಟಕ(Cancer): ಚಂದ್ರ ಇರುವ ಸ್ಥಾನ ಪಂಚಮ ಸ್ಥಾನ, ಅಲ್ಲಿ ಶುಕ್ರ, ಕೇತು ಕೂಡಾ ಇದ್ದಾನೆ. ಹೀಗಾಗಿ ಮನಸ್ಸಿನಲ್ಲಿ ಗಂಭೀರವಾದ ಆಲೋಚನೆ ಮೂಡಬಹುದು. ಇದು ಅಸಮಾಧಾನಕ್ಕೆ ಕಾರಣವಾಗಬಹುದು. ಅಷ್ಟಮದಲ್ಲಿರುವ ಮಾಂದಿ ನಷ್ಟಫಲ, ಸೋಲುಂಟು ಮಾಡಬಹುದು, ಸ್ತ್ರೀ-ಪುರುಷರಲ್ಲಿ ಭಿನ್ನಾಭಿಪ್ರಾಯ. ಚಂಡಿ ಪಾರಾಯಣ ಮಾಡಿ. 

ಅಮಾವಾಸ್ಯೆಯಂದು ನೀವು ಯಾಕೆ ಜಾಗರೂಕರಾಗಿರೇಕು ಗೊತ್ತಾ?

ಸಿಂಹ(Leo): ಚಂದ್ರ ಚತುರ್ಥದಲ್ಲಿದ್ದಾನೆ ಹೀಗಾಗಿ ದಿಗ್ಬಲವಿದೆ. ಆದರೆ ಅದು ನೀಚ ಸ್ಥಾನವಾಗಿರುವುದರಿಂದ ಸ್ತ್ರೀಯರಿಗೆ ಅಸಮಾಧಾನ, ತಾಯಿಯ ಆರೋಗ್ಯದಲ್ಲಿ ಏರುಪೇರಾಗುವ ಲಕ್ಷಣಗಳಿವೆ. ಸಹೋದರರ ಆರೋಗ್ಯದಲ್ಲೂ ಏರುಪೇರಾಗಬಹುದು. ಆಸ್ತಿ, ವಾಹನದ ಕುರಿತು ಸ್ವಲ್ಪ ಕಲಹ ಉಂಟಾಗಬಹುದು. ಹೀಗಾಗಿ ಪ್ರಯಾಣದಲ್ಲಿ ಎಚ್ಚರದಿಂದಿರಿ. ಸ್ತ್ರೀಯರು ಬಹಳ ಎಚ್ಚರದಿಂದಿರಿ. ಇನ್ನು ಆಹಾರದಲ್ಲೂ ವ್ಯತ್ಯಾಸ ಉಂಟಾಗುವ ಲಕ್ಷಣಗಳಿವೆ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ.
 
ಕನ್ಯಾ(Virgo): ರಾಶಿಯಿಂದ ತೃತೀಯದಲ್ಲಿ ಚಂದ್ರ ಇದ್ದಾನೆ. ಹೀಗಾಗಿ ಸಹೋದರರ ಭಾವದಲ್ಲಿ ಸ್ವಲ್ಪ ತೊಂದರೆ, ಅಸಮಾಧಾನ ಉಂಟಾಗಬಹುದು, ಅಸಮಾಧಾನದ ದಿನ. ಶತ್ರುಗಳ ಭಯ ಕಾಡಲಿದೆ. ಏಟು ಗಾಯಗಳಾಗುವ ಸಾಧ್ಯತೆ, ತಂದೆಯ ಬಂಧುಗಳಿಂದ ಎಚ್ಚರದಿಂದಿರಿ, ಅವರೊಂದಿಗೆ ವ್ಯವಹರಿಸುವಾಗ ನಾಜೂಕಾಗಿರಿ. ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ.  

ತುಲಾ(Libra): ಆಹಾರ ಅದರಲ್ಲೂ ಪ್ರಧಾನವಾಗಿ ನೀರಿನ ವ್ಯತ್ಯಾಸ ಕಮಡುಬರಲಿದೆ, ಎಚ್ಚರದಿಂದಿರಿ. ನಿಮ್ಮ ರಾಶಿಯಿಂದ ಪಂಚಮದಲ್ಲಿರುವ ಮಾಂದಿ, ಮನಸ್ಸಿನ ಸ್ಥಾನವದು ಹೀಗಾಗಿ ಯಾವುದೋ ಒಂದು ಕಾರಣದಿಂದ ಮನೋವ್ಯಥೆ ಕಾಡಲಿದೆ. ಹೀಗಾಗಿ ಪಾರ್ವತಿ- ಪರಮೆಶ್ವರರ ಪ್ರಾರ್ಥನೆ ಮಾಡಿ.  

ವೃಶ್ಚಿಕ(Scorpio): ಈ ರಾಶಿಯವರಿಗೆ ಸ್ವಲ್ಪ ಆರೋಗ್ಯದಲ್ಲಿ ಏರುಪೇರಾಗಲಿದೆ. ದೈವಾನುಕೂಲವೂ ಕಡಿಮೆ, ಶುಕ್ರ ಇಲ್ಲಿ ಸೇರಿರುವುದರಿಂದ ಕೊಂಚ ತೊಡಕಾಗಲಿದೆ. ಪ್ರಯಾಣ ಮಾಡುವಾಗ ಎಚ್ಚರದಿಂದಿರಿ, ಕಟ್ಟಡ ನಿರ್ಮಾಣ ಮಾಡುವವರುಗಮನಹರಿಸಿ. ವಿಷಜಂತುಗಳ ಭಯಕಾಡುವ ಸೂಚನೆಗಳಿವೆ. ಆದರೆ ವಿದೇಶದಲ್ಲಿ ವಹಿವಾಟು ಮಾಡುವವರಿಗೆ ಲಾಭ, ಅನುಕೂಲದ ವಾತಾವರಣ. ಲಲಿತಾಪರಮೇಶ್ವರಿ ಪ್ರಾರ್ಥನೆ ಮಾಡಿ.

ರುದ್ರಾಕ್ಷಿ ಧಾರಣೆಯಿಂದ ಏನೇನೆಲ್ಲ ಆಗತ್ತೆ ಅಂತ ಗೊತ್ತಾ!

ಧನುಸ್ಸು(Sagittarius): ನಿಮ್ಮ ರಾಶಿಯಿಂದ ತೃತೀಯದಲ್ಲಿರುವ ಮಾಂದಿಯಿಂದ ಗಂಟಲನೋವು, ಸಹೋದರರಲ್ಲಿ ಕಲಹವಾಗುವ ವಾತಾವರಣ ಏರ್ಪಾಡಾಗಲಿದೆ. ಅಲ್ಲದೇ ಹೆಚ್ಚಿನ ಖರ್ಚು ಆಗುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಅನುಕೂಲವಾಗಲಿದೆ. ದುರ್ಗಾ ಕವಚ ಪಠಿಸಿ 

ಮಕರ(Capricorn): ಮಕರ ರಾಶಿಯವರಿಗೆ ಇಂದು ಮಾತು ಕಠಿಣವಾಗಲಿದೆ, ಒರಟಾಗಿ ಮಾತನಾಡುವಿರಿ. ಇದರಿಂದ ಕುಟುಂಬದಲ್ಲಿ ಕಲಹದ ವಾತಾವರಣ ನಿರ್ಮಾಣವಾಗಲಿದೆ. ವಿಶೇಷವಾಗಿ ಕೆಲಸ ಮಾಡುವ ಉದ್ಯೋಗಿಗಳಿಗೆ ಲಾಭದ ಲಕ್ಷಣವಿದೆ. ಹೀಗಾಗಿ ಆತಂಕ ಬೇಡ, ಮಿಶ್ರಫಲಗಳಿವೆ. ಹೀಗಾಗಿ ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ  

ಕುಂಭ(Aquarius): ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಶಿರೋಭಾಗದಲ್ಲಿ ಕೊಂಚ ತೊಂದರೆಯಾಗಲಿದೆ. ಕರ್ಮ ಸ್ಥಾನದಲ್ಲಿ ಚಂದ್ರ ಕೇತು ಇರುವುದರಿಂದ ಸ್ತ್ರೀಯರಿಗೆ ಕೊಂಚ ಉದ್ಯೋಗದಲ್ಲಿ ಕಸಿವಿಸಿ ವಾತಾವರಣ ಇರಲಿದೆ. ಹೀಗಾಗಿ ಹೆಚ್ಚಿನ ಶ್ರಮ ಹಾಕಿ, ಆಯಾಸ, ಸುಸ್ತು ಆಗಬಹುದು ಲಲಿತಾಪರಮೇಶ್ವರಿ ಪ್ರಾರ್ಥನೆ ಮಾಡಿ. 

ಮೀನ(Pisces): ಸಂಗಾತಿಯ ಸಹಕಾರ ಇಂದು ತುಂಬಾ ಚೆನ್ನಾಗಿದೆ. ಲಾಭ ಹಾಗೂ ನಷ್ಟ ಎರಡೂ ಇದೆ. ಹೆಚ್ಚಿನ ಆತಂಕ ಬೇಡ, ಗುರು ಪ್ರಾರ್ಥನೆ ಮಾಡಿ.
 

Follow Us:
Download App:
  • android
  • ios