ಚಂದ್ರನಿಂದ ಹೊರಹೊಮ್ಮುವ ಸೂಕ್ಷ್ಮ ಸ್ಪಂದನಗಳು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ. ಆಕಾಶದಲ್ಲಿ ಕಾಣಿಸುವ ಅನೇಕ ಗ್ರಹಗಳು ಮನುಷ್ಯನ ಜೀವನದ ಮೇಲೆ ಪರಿಣಾಮವನ್ನು ಬೀರುತ್ತವೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಅನೇಕರು ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಅನುಭವಿಸುವುದನ್ನು ಮನಶ್ಶಾಸ್ತ್ರಜ್ಞರು ಹೇಳುತ್ತಾರೆ. ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಕೂಡ ಅಮಾವಾಸ್ಯೆಯ ಆಸುಪಾಸಿನ ದಿನಗಳಲ್ಲೇ ಎಂಬುದನ್ನು ಗಮನಿಸಿ. ಹಾಗಾದರೆ ಚಂದ್ರನಿಗೂ ಮಾನಸಿಕ ಆರೋಗ್ಯಕ್ಕೂ ಏನು ಸಂಬಂಧ?

ಚಂದ್ರನಿಂದ ಹೊರಹೊಮ್ಮುವ ಸ್ಪಂದನಗಳು ಮನಸ್ಸಿನಲ್ಲಿ ಉದ್ಭವಿಸುವ ವಿಚಾರಗಳೊಂದಿಗೆ ಸಮಾನಾಂತರ ನೆಲೆಯಲ್ಲಿ ಕಂಪಿಸುತ್ತವೆ. ನಮ್ಮ ಅಂತರ್ಮನಸ್ಸಿನಲ್ಲಿ ಇರುವ ಸುಪ್ತ ಸಂಸ್ಕಾರಗಳಿಂದ ಉದ್ಭವಿಸುವ ವಿಚಾರಗಳನ್ನು ನಮ್ಮ ಬಾಹ್ಯ ಮನಸ್ಸಿಗೆ ತರುವ ಕಾರ್ಯವನ್ನು ಚಂದ್ರನ ಸ್ಪಂದನಗಳು ಮಾಡುತ್ತವೆ. ಆಮಾವಾಸ್ಯೆಯಂದು ಭೂಮಿಯ ಮೇಲೆ ಚಂದ್ರನ ಬೆಳಕು ಬೀಳುವುದಿಲ್ಲ. ಕತ್ತಲೆಯಿದ್ದಾಗ ರಜ ತಮ ಪ್ರಧಾನ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರತವಾಗುತ್ತವೆ. ಆದುದರಿಂದ ಅಮಾವಾಸ್ಯೆಗೆ ಚಂದ್ರನಿಂದ ಸೂಕ್ಷ್ಮ ರಜ ತಮ ಸ್ಪಂದನಗಳು ಭೂಮಿಯತ್ತ ಪ್ರಕ್ಷೇಪಿಸಲ್ಪಡುತ್ತವೆ. ಹುಣ್ಣಿಮೆಯಂದು ಚಂದ್ರನ ಬೆಳಕು ಹೆಚ್ಚಿರುವುದರಿಂದ ರಜ ತಮ ಸ್ಪಂದನಗಳ ಪ್ರಭಾವ ಕಡಿಮೆ ಇರುತ್ತದೆ. ಆದರೆ ಚಂದ್ರನ ಸ್ಪಂದನಗಳು ಹೆಚ್ಚು ಕಾರ್ಯನಿರತವಾಗಿರುವುದರಿಂದ ನಮ್ಮ ಮನಸ್ಸಿನ ಮೇಲೆ ಚಂದ್ರನ ಸ್ಪಂದನಗಳು ಪ್ರಭಾವ ಬೀರುತ್ತವೆ. ಮನಸ್ಸಿನಲ್ಲಿ ಯಾವ ಸಂಸ್ಕಾರಗಳು ಪ್ರಬಲವಾಗಿವೆಯೋ, ಅದಕ್ಕೆ ಅನುರೂಪವಾಗಿ ವಿಚಾರಗಳ ಪ್ರಮಾಣವೂ ಹೆಚ್ಚಾಗುತ್ತದೆ.

ಸಾಮಾನ್ಯ ಮನುಷ್ಯರಿಗೆ ವಿಚಾರಗಳ ಪ್ರವಾಹವೇ ಬರುತ್ತದೆ. ಅರಿಷಡ್ವರ್ಗಗಳ ಪ್ರಮಾಣ ಹೆಚ್ಚಿದ್ದರೆ ಇಂತಹ ವಿಚಾರಗಳೇ ಹೆಚ್ಚಾಗಿ ಬರಬಹುದು. ಉದಾಹರಣೆಗೆ, ಮದ್ಯವ್ಯಸನಿಗೆ ಯಾವುದೇ ಸಮಯದಲ್ಲಿ ಮದ್ಯ ಸೇವಿಸಬೇಕು ಎಂಬ ತೀವ್ರ ವಿಚಾರ ಬರಬಹುದು. ಅದೇ ರೀತಿ ಆಧ್ಯಾತ್ಮಿಕ ಸಾಧನೆ ಮಾಡುವವರು ಹುಣ್ಣಿಮೆಯಂದು ಸಾಧನೆಯ ಪ್ರಯತ್ನಗಳನ್ನು ಹೆಚ್ಚಿಸಿದರೆ, ಮನಸ್ಸಿನಲ್ಲಿ  ಸುಪ್ತವಾಗಿರುವ ಆಧ್ಯಾತ್ಮಿಕ ಸಂಸ್ಕಾರಗಳನ್ನು ಜಾಗೃತಗೊಳಿಸಬಹುದು. ಚಂದ್ರನ ಗುರುತ್ವಾಕರ್ಷಣೆಯ ಪ್ರಭಾವವೂ ಪೃಥ್ವಿಯ ಮೇಲಾಗುತ್ತದೆ. ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಈ ಪ್ರಭಾವವು ಹೆಚ್ಚಿರುತ್ತದೆ. ಆದುದರಿಂದ ಈ ದಿನಗಳಲ್ಲಿ ಪೃಥ್ವಿಯ ಮೇಲಿರುವ ಪಂಚ ತತ್ತ್ವಗಳು (ಪೃಥ್ವಿ ತತ್ತ್ವ, ಆಪ ತತ್ತ್ವ, ತೇಜ ತತ್ತ್ವ, ವಾಯು ತತ್ತ್ವ ಮತ್ತು ಆಕಾಶ ತತ್ತ್ವ) ಚಂದ್ರನತ್ತ ಆಕರ್ಷಿಸಲ್ಪಡುತ್ತವೆ. ಇದರಿಂದಾಗಿ, ವಾಯುಮಂಡಲದಲ್ಲಿ ಒಂದು ರೀತಿಯ ಸೂಕ್ಷ್ಮ ಸ್ತರದ ಒತ್ತಡ ನಿರ್ಮಾಣವಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆಟ್ಟ ಶಕ್ತಿಗಳು ಒಂದು ಕಡೆ ಸೇರುವುದರಿಂದ ಅವು ಹೆಚ್ಚಿನ ಪ್ರಮಾಣದಲ್ಲಿ ಕೆಟ್ಟ ಪ್ರಭಾವಗಳನ್ನು ಮನುಷ್ಯರ ಮೇಲೆ ಬೀರುತ್ತವೆ. ಈ ಪ್ರಕ್ರಿಯೆಯು ಹುಣ್ಣಿಮೆ ಅಥವಾ ಅಮಾವಾಸ್ಯೆಗೆ 2 ದಿನ ಮುಂಚೆ ಪ್ರಾರಂಭವಾಗಿ 2 ದಿನ ನಂತರ ಕೊನೆಗೊಳ್ಳುತ್ತದೆ.

ಹೀಗೆ ಮಾಡಿದ್ರೆ ಶನಿ ನಿಮ್ಮನ್ನು ಏನೂ ಮಾಡಲ್ಲ! 
ಅಮಾವಾಸ್ಯೆಯಂದು ರಜ ತಮವನ್ನು ಪ್ರಕ್ಷೇಪಿಸುವ ಕೆಟ್ಟ ಶಕ್ತಿಗಳು, ಮಾಂತ್ರಿಕರು ಮತ್ತು ತಾಮಸಿಕ ವೃತ್ತಿಯವರಿಗೆ ಅವರ ಕೆಟ್ಟ ಕೃತ್ಯಗಳನ್ನು ಮಾಡಲು ಪ್ರೇರಣೆ ಮತ್ತು ಕಪ್ಪು ಶಕ್ತಿಯು ಸುಲಭವಾಗಿ ಸಿಗುತ್ತದೆ. ಕೆಟ್ಟ ಶಕ್ತಿಗಳಿಗೆ ಪೂರಕವಾಗಿರುವ ಈ ದಿನವನ್ನು ಶುಭ ಕಾರ್ಯಗಳನ್ನು ಮಾಡಲು ‘ಅಶುಭ’ ಎಂದು ಪರಿಗಣಿಸಲಾಗುತ್ತದೆ. ಅಮಾವಾಸ್ಯೆಯಂದು ಚಂದ್ರನ ರಜ ತಮ ಪ್ರಧಾನ ಸ್ಪಂದನಗಳ ಪ್ರಭಾವವು ಮನಸ್ಸಿನ ಮೇಲಾಗುವುದರಿಂದ ಮನಸ್ಸಿನಲ್ಲಿ ಕೆಟ್ಟ ಅಥವಾ ನಕಾರಾತ್ಮಕ ವಿಚಾರಗಳ ಪ್ರಮಾಣವು ಹೆಚ್ಚಾಗುತ್ತದೆ. ಉದಾಹರಣೆಗೆ, ತೀವ್ರ ನಕಾರಾತ್ಮಕ ವಿಚಾರಗಳು, ಆತ್ಮಹತ್ಯೆಯ ವಿಚಾರಗಳು ಇತ್ಯಾದಿ. ದಿನದಲ್ಲಿ ಸೂರ್ಯನಿಂದ ಪ್ರಕ್ಷೇಪಿಸುವ ತೇಜ ತತ್ತ್ವದಿಂದ ರಜ ತಮದ ಸ್ಪಂದನಗಳ ಮೇಲೆ ನಿಯಂತ್ರಣವಿರುತ್ತದೆ. ಆದರೆ ಅಮಾವಾಸ್ಯೆಯ ರಾತ್ರಿ ಈ ತೇಜ ತತ್ತ್ವ ಇಲ್ಲದಿರುವುದರಿಂದ ಕೆಟ್ಟ ಶಕ್ತಿಗಳು ಮನುಷ್ಯರಿಗೆ ಆದಷ್ಟು ಹೆಚ್ಚು ತೊಂದರೆಯನ್ನು ಕೊಡುತ್ತವೆ. ಹುಣ್ಣಿಮೆಯಂದು ರಜ ತಮ ಸ್ಪಂದನಗಳ ಪ್ರಭಾವವು ಕಡಿಮೆ ಇರುವುದರಿಂದ ಕೆಟ್ಟ ಶಕ್ತಿಗಳಿಗೆ ಇದರ ಲಾಭ ಆಗುವುದಿಲ್ಲ. ಆದರೆ ಚಂದ್ರನ ಗುರುತ್ವಾಕರ್ಷಣೆಯ ಲಾಭ ಪಡೆದುಕೊಂಡು ಕೆಟ್ಟ ಶಕ್ತಿಗಳು ತೊಂದರೆಯನ್ನು ನೀಡುತ್ತವೆ.

ಶಿಲ್ಪಾ ಶೆಟ್ಟಿ ಕೈಯಲ್ಲಿ ಎರಡು ವಾಚು ಯಾಕೆ? 
ಹುಣ್ಣಿಮೆ ಮತ್ತು ಅಮಾವಾಸ್ಯೆಯ ಚಂದ್ರನಿಂದ ಮನುಷ್ಯರ ಮೇಲಾಗುವ ಪ್ರಭಾವದಿಂದ ರಕ್ಷಿಸಿಕೊಳ್ಳಲು ಆಧ್ಯಾತ್ಮಿಕ ಸಾಧನೆ ಮಾಡಬೇಕಾಗುತ್ತದೆ. ಸಾಧ್ಯವಿದ್ದಷ್ಟು ಈ ದಿನಗಳಂದು ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳುವುದನ್ನು ತಪ್ಪಿಸಿ. ನಾಮಜಪದಂತಹ ಸಾಧನೆಯನ್ನು ಹೆಚ್ಚಿಸಿ. ನಿಮ್ಮ ಕುಲದೇವತೆ, ಇಷ್ಟದೇವತೆಯ ನಾಮಜಪ ಹೆಚ್ಚು ಮಾಡಿ. ಅಲ್ಲದೆ, ಶಿವಪಂಚಾಕ್ಷರಿ ಮಂತ್ರ, ಗುರುದತ್ತ ಜಪ ಮುಂತಾದವುಗಳನ್ನು ಮಾಡಬಹುದು. 

ಈ ರಾಶಿಯವರಿಗೆ ಬ್ರೇಕ್‌ಅಪ್ ಆದ್ರೆ ಒಪ್ಪಿಕೊಳ್ಳೋದು ತುಂಬಾ ಕಷ್ಟ