ತನ್ನಿಂದ ದೂರಾಗಿದ್ದ ಗೆಳತಿಯನ್ನು ಪ್ರೀತಿಸುತ್ತಿದ್ದ ಯುವಕನ ಮೇಲೆ ಯುಕರಿಬ್ಬರು ಸೇರಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ತನ್ನಿಂದ ದೂರಾಗಿದ್ದ ಗೆಳತಿಯನ್ನು ಪ್ರೀತಿಸುತ್ತಿದ್ದ ಯುವಕನ ಮೇಲೆ ಯುಕರಿಬ್ಬರು ಸೇರಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಹಲ್ಲೆಯಿಂದ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ. ತಲೆ, ಕೈ ಮತ್ತು ಮೊಣಕೈಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. 20 ವರ್ಷ ಪ್ರಾಯದ ಸಾಹಿಲ್ ಶೇಖ್ ಹಲ್ಲೆಗೊಳಗಾದ ಯುವಕ. ಈತನ ಮೇಲೆ 25 ವರ್ಷ ಪ್ರಾಯದ ಇರ್ಫಾನ್‌ ಖಾನ್‌ ಹಾಗೂ 24 ವರ್ಷದ ಮೊಹಿಸಿನ್ ಸಲೀಮ್‌ ಶೇಕ್ ಹಲ್ಲೆ ಮಾಡಿದ್ದಾರೆ.

ತನ್ನ ಮಾಜಿ ಗೆಳತಿಯೊಂದಿಗೆ ಸಾಹಿಲ್ ಶೇಖ್ ( Saleem Shaikh) ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ಇರ್ಫಾನ್‌ ಖಾನ್‌ ತನ್ನ ಗೆಳೆಯ ಮೊಹಿಸಿನ್ ಸಲೀಮ್‌ ಶೇಕ್ (Mohsin Saleem Shaikh) ಜೊತೆ ಸೇರಿ ಸಾಹಿಲ್‌ ಶೇಖ್ (Sassoon Hospital) ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದ ಸಾಹಿಲ್ ಶೇಖ್ಅವರನ್ನು ಸಸೂನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ತನಿಖಾಧಿಕಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಗಾಯಕ್ವಾಡ್ (Santosh Gaikwad) ಹೇಳಿದ್ದಾರೆ. 

Delhi Crime : ಓಡಿಹೋಗಿ ಮದುವೆಯಾಗಿದ್ದಕ್ಕೆ ಅಳಿಯನ ಗುಪ್ತಾಂಗವನ್ನೇ ಕತ್ತರಿಸಿದ್ರು!

ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಯತ್ನದ ಆರೋಪದ ಮೇಲೆ ಪೊಲೀಸರು ಕೌಸರ್‌ಬಾಗ್‌ನ (Kausarbaug) ಮನೀಶ್ ಪಾರ್ಕ್‌ನ (Kausarbaug)ನಿವಾಸಿಯಾದ ಮೊಹ್ಸಿನ್ ಸಲೀಮ್ ಶೇಖ್‌ನನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ 25 ವರ್ಷದ ಇರ್ಫಾನ್‌ ಖಾನ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ

ಪೊಲೀಸರ ಪ್ರಕಾರ, ಸಾಹಿಲ್ ಶೇಖ್ (20) ತನ್ನ ಮಾಜಿ ಗೆಳತಿಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಇರ್ಫಾನ್ ಶಂಕಿಸಿದ್ದಾನೆ. ಹೀಗಾಗಿ ಸೇಡು ತೀರಿಸಿಕೊಳ್ಳಲು ಇಬ್ಬರೂ ಶನಿವಾರ ರಾತ್ರಿ ಸಾಹಿಲ್ ಮೇಲೆ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪ್ರೇಯಸಿಯನ್ನು ಭಯಾನಕವಾಗಿ ಕೊಂದ ಪಾಗಲ್ ಪ್ರೇಮಿ, ಕ್ರೈಂ ಸೀನ್ ನೋಡಿ ಬೆಚ್ಚಿ ಬಿದ್ದ ಪೊಲೀಸರು!

ಶನಿವಾರ ಮಧ್ಯಾಹ್ನ 3.30ಕ್ಕೆ ತನ್ನ ಸ್ನೇಹಿತ ನದೀಮ್ ಸಯ್ಯದ್ (Nadeem Sayyed) ಎಂಬಾತನೊಂದಿಗೆ ಬೈಕ್‌ನಲ್ಲಿ ಬರುತ್ತಿದ್ದ ಸಾಹಿಲ್ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ. ಸಾಹಿಲ್ ಟೀ ಕುಡಿಯಲು ಕ್ಯಾಂಪ್‌ನಿಂದ ಲುಲ್ಲಾನಗರದ ಕಡೆಗೆ ಹೋಗುತ್ತಿದ್ದಾಗ ಅಡ್ಡಗಟ್ಟಿದ್ದ ಆರೋಪಿಗಳು ಈ ಕೃತ್ಯವೆಸಗಿದ್ದಾರೆ.

ಹಲ್ಲೆಯ ಪರಿಣಾಮ ಸಂತ್ರಸ್ತನ ತಲೆ, ಕೈ ಮತ್ತು ಮೊಣಕೈಗೆ ಗಾಯಗಳಾಗಿವೆ ಎಂದು ಪ್ರಕರಣದ ತನಿಖಾಧಿಕಾರಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಂತೋಷ್ ಗಾಯಕ್ವಾಡ್ ತಿಳಿಸಿದ್ದಾರೆ. ಅವರನ್ನು ಸಸೂನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಆರೋಪಿಗಳ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆ (IPC)ಯ ಸೆಕ್ಷನ್‌ 307 (ಕೊಲೆಗೆ ಯತ್ನ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿ ಪ್ರಕರಣ ದಾಖಲಿಸಿದ್ದಾರೆ.