Asianet Suvarna News Asianet Suvarna News

Delhi Crime : ಓಡಿಹೋಗಿ ಮದುವೆಯಾಗಿದ್ದಕ್ಕೆ ಅಳಿಯನ ಗುಪ್ತಾಂಗವನ್ನೇ ಕತ್ತರಿಸಿದ್ರು!

* ರಾಷ್ಟ್ರ ರಾಜಧಾನಿಯಿಂದ ಘೋರ ಪ್ರಕರಣ
* ಮದುವೆಯಾದ ಕಾರಣಕ್ಕೆ ಯುವಕನ ಅಪಹರಣ
* ಥಳಿಸಿ ಆತನ ಮರ್ಮಾಂಗ ಕತ್ತರಿಸಿದರು
* ಪೊಲೀಸ್ ರಕ್ಷಣೆ ಕೋರಿ ಬಂದಿದ್ದ ಜೋಡಿ

Youth thrashed, his genitals chopped off for marrying girlfriend Newdelhi mah
Author
Bengaluru, First Published Dec 24, 2021, 7:50 PM IST
  • Facebook
  • Twitter
  • Whatsapp

ನವದೆಹಲಿ (ಡಿ. 24) ರಾಷ್ಟ್ರ ರಾಜಧಾನಿ ನವದೆಹಲಿಯಿಂದ (Newdelhi) ಆಘಾತಕಾರಿ ಪ್ರಕರಣವೊಂದು ವರದಿಯಾಗಿದೆ.  ಯುವಕನೊಬ್ಬನನ್ನು ಮೊದಲು ಅಪಹರಿಸಿ, ಥಳಿಸಿದ್ದಾರೆ. ನಂತರ ಆತನ ಗುಪ್ತಾಂಗವನ್ನು (Private Part) ಕತ್ತರಿಸಿ ಪರಾರಿಯಾಗಿದ್ದಾರೆ. ಯುವಕ ಮದುವೆಯಾಗಿದ್ದ (Marriage) ಹುಡುಗಿಯ ಕುಟುಂಬದವರು ಕ್ರೌರ್ಯ ಮೆರೆದಿದ್ದಾರೆ.

ಡಿಸೆಂಬರ್ 22 ರಂದು ದೆಹಲಿಯ ರಜೌರಿ ಗಾರ್ಡನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೊಲೆ ಯತ್ನ ಮತ್ತು ಅಪಹರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಡಿಸಿಪಿ (ಪಶ್ಚಿಮ) ಪ್ರಶಾಂತ್ ಗೌತಮ್ ಗುರುವಾರ ತಿಳಿಸಿದ್ದಾರೆ. 22 ವರ್ಷದ ಯುವಕನ ಸ್ಥಿತಿ ಚಿಂತಾಜನಕವಾಗಿದ್ದು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವಕ ಮತ್ತು ಯುವತಿ ಈ ಮೊದಲಿನಿಂದಲೂ ರಿಲೇಶನ್ ಶಿಪ್ ನಲ್ಲಿ ಇದ್ದರು. ಮದುವೆಯಾಘಬೇಕು ಎಂದು ಓಡಿಹೋಗಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಯುವತಿ ಕುಟುಂಬದವರು ಹೀನ ಕೆಲಸ ಮಾಡಿದ್ದಾರೆ.

ವೆಬ್‌ ಕ್ಯಾಮೆರಾ ಚಿಕಿತ್ಸೆ, 400 ಮಹಿಳೆಯರ ಗುಪ್ತಾಂಗದ ವಿಡಿಯೋ ಸೆರೆ ಹಿಡಿದ ನಕಲಿ ಸ್ತ್ರೀರೋಗ ತಜ್ಞ!

ಮದುವೆ ಮಾಡಿಕೊಂಡು ದಂಪತಿ ಹಿಂದಕ್ಕೆ ಬಂದಿದ್ದರು.  ತಮಗೆ ಜೀವ ಬೆದರಿಕೆ ಇದ್ದು ಪೊಲೀಸ್ ಭದ್ರತೆ ಬೇಕು ಎಂದು ಕೇಳಿಕೊಂಡಿದ್ದರು. ದಂಪತಿ ರಕ್ಷಣೆ ಕೋರಿ ರಾಜೌರಿ ಪೊಲೀಸ್ ಠಾಣೆಗೆ  ಆಗಮಿಸುತ್ತಾರೆ ಎನ್ನುವ ಮಾಹಿತಿ ಯುವತಿಯ ಕುಟುಂಬದವರಿಗೆ ಗೊತ್ತಾಗಿದೆ.  ಪೊಲೀಸ್ ಠಾಣೆಯಿಂದ ಹೊರಕ್ಕೆ ಬರುತ್ತಿದ್ದಂತೆ ಯುವಕನ ಅಪಹರಣ ಮಾಡಲಾಗಿದೆ. ನಂತರ ಅಮಾನುಷವಾಗಿ ಥಳಿಸಿ ಯುವಕನಮ ಖಾಸಗಿ ಅಂಗ  ಕತ್ತರಿಸಿದ್ದಾರೆ . ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿವರೆಗೆ ಯಾರ ಬಂಧನವೂ ಆಘಿಲ್ಲ.

ಇನ್ನೊಂದು ಪ್ರಕರಣ: ದೆಹಲಿಯಿಂದಲೇ ಇನ್ನೊಂದು ಪ್ರಕರಣ ವರದಿಯಾಗಿದ್ದು  ಡಿಸೆಂಬರ್ 20 ರ ರಾತ್ರಿ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ದರೋಡೆಯ ಪ್ರಯತ್ನವನ್ನು ವಿರೋಧಿಸಿದ್ದಕ್ಕಾಗಿ 24 ವರ್ಷದ ಯುವಕನನ್ನು ಹೊಡೆದು ಕೊಲೆ ಮಾಡಲಾಗಿದೆ. ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೆಕ್ಸ್ ಮಾಡುವಾಗ ಕೋಪಗೊಂಡ ಪತ್ನಿ ಬ್ಲೇಡ್‌ನಿಂದ ಗಂಡನ ಗುಪ್ತಾಂಗವೇ ಕಟ್:    ಮಧ್ಯಪ್ರದೇಶದ ಟಿಕಮ್‌ಗಢ ಜಿಲ್ಲೆಯ ಪ್ರಕರಣ ಇದು. ದೈಹಿಕ ಸಂಬಂಧ ಬೆಳೆಸುವ ವೇಳೆ ಪತಿ-ಪತ್ನಿಯ ನಡುವೆ ಜಗಳವಾಗಿದೆ. ಇದರಿಂದ ಕುಪಿತಗೊಂಡ ಪತ್ನಿ ಪತಿಯ ಖಾಸಗಿ ಅಂಗಕ್ಕೆ ಬ್ಲೇಡ್ ನಿಂದ ಹಲ್ಲೆ ನಡೆಸಿದ್ದಾಳೆ. ಇದರಿಂದ ಯುವಕನಿಗೆ ತೀವ್ರ ರಕ್ತಸ್ರಾವವಾಗಿತ್ತು.  ಜಾತಾರಾ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಗರದಲ್ಲಿ ಘಟನೆ ನಡೆದಿದ್ದು ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಮಾಹಿತಿಯ ಪ್ರಕಾರ, ರಾಮನಗರದ ನಿವಾಸಿಯೊಬ್ಬರು ಸುಮಾರು ನಾಲ್ಕೈದು ದಿನಗಳ ಹಿಂದೆ ತಮ್ಮ ಹೆಂಡತಿಯೊಂದಿಗೆ ಜಗಳವಾಡಿದ್ದಾಗಿ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಇಬ್ಬರೂ ರಾಜಿ ಮಾಡಿಕೊಂಡಿದ್ದರು. ಇದಾದ ನಂತರ ಗಂಡ ಹೆಂಡತಿ ಇಬ್ಬರೂ ಮನೆಯಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಆದರೆ ರಾತ್ರಿ ಮತ್ತೆ ದೈಹಿಕ ಸಂಬಂಧ ನಡೆಸುವಾಗ ಇಬ್ಬರ ನಡುವೆ ಜಗಳವಾಗಿದ್ದು, ಕೋಪಗೊಂಡ ಪತ್ನಿ ಬ್ಲೇಡ್ ನಿಂದ ಖಾಸಗಿ ಅಂಗವನ್ನು ಕತ್ತರಿಸಿದ್ದಳು. 

 ಗಾಯಗೊಂಡ ವ್ಯಕ್ತಿ ಚೇತರಿಸಿಕೊಂಡಿದ್ದು, ಪತ್ನಿಯ ಮೇಲೆ ದೂರು ನೀಡಲು ಕುಟುಂಬ ಸಮೇತ ಜಾತ್ರ ಠಾಣೆಗೆ ಬಂದಿದ್ದರು. ಡಿಸೆಂಬರ್ 12 ರಂದು ಪ್ರಕರಣ ದಾಖಲಾಗಿದ್ದು ಪತ್ನಿ ಮೇಲೆ ದೂರು ನೀಡಿದ್ದ.

ಯುವಕನಿಗೆ ಥಳಿಸಿ, ಗುಪ್ತಾಂಗ ಕತ್ತರಿಸಿದ್ರು:   ಬಿಹಾರದ ಮುಜಫರ್‌ಪುರದಲ್ಲಿ ಪ್ರೇಮಿ ಯುವಕನನ್ನು ನಿರ್ದಯವಾಗಿ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಯುವಕನನ್ನು ದೊಣ್ಣೆ ಮತ್ತು ಕಬ್ಬಿಣದ ಸರಳುಗಳಿಂದ ಥಳಿಸಲಾಗಿತ್ತು. ಆತನ ಗುಪ್ತಾಂಗವನ್ನೂ ಸಹ ಕತ್ತರಿಸಲಾಗಿತ್ತು.

ಕಾಂತಿ ಪೊಲೀಸ್ ಠಾಣಾ ವ್ಯಾಪ್ತಿಯ ರೆಪುರ ರಾಂಪುರ್ಸಾ ಮತ್ತು ಸೊನ್ವರ್ಷ ಗ್ರಾಮದಲ್ಲಿ ಘಟನೆ ನಡೆದಿತ್ತು.  ಈ ಕೊಲೆ ನಡೆಸಿದ ನಂತರ, ಎಲ್ಲಾ ಆರೋಪಿಗಳು ತಮ್ಮ ಇಡೀ ಕುಟುಂಬದೊಂದಿಗೆ ಮನೆ ಬಿಟ್ಟು ತಪ್ಪಿಸಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಜನರು ಮೃತನನ್ನು ಆರೋಪಿಗಳ ಮನೆ ಎದುರೇ ಅಂತ್ಯಸಂಸ್ಕಾರ ನಡೆಸಿದ್ದರು.

 

Follow Us:
Download App:
  • android
  • ios