Asianet Suvarna News Asianet Suvarna News

30 ಸೆಕೆಂಡ್‌ನಲ್ಲಿ 50 ಬಾರಿ ಬೆಲ್ಟ್‌ನಿಂದ ಹೊಡೆದು ಐವರಿಂದ ಮೃಗೀಯ ವರ್ತನೆ

ವಿಡಿಯೋವನ್ನು ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ವೈರಲ್ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Youth assaulted  by five men in rewa madhya pradesh mrq
Author
First Published Jun 24, 2024, 10:20 PM IST

ಭೋಪಾಲ್: 19 ವರ್ಷದ ಯುವಕನಿಗೆ ಬೆಲ್ಟ್‌ನಿಂದ ಹೊಡೆದು ಮೃಗೀಯ ವರ್ತನೆ ತೋರಿದ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಐವರು ಮನಸೋಯಿಚ್ಛೆ ಯುವಕನ ಮೇಲೆ ಹಲ್ಲೆ ನಡೆಸಿದ್ದು, ವಿಡಿಯೋ ಸಹ ಮಾಡಿಕೊಂಡಿದ್ದಾರೆ. ನಂತರ ವಿಡಿಯೋವನ್ನು ವಾಟ್ಸಪ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ವೈರಲ್ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೇವಾದ ಸಿವಿಲ್ ಲೈನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಹಲ್ಲೆಗೊಳಗಾದ ಯುವಕನನ್ನು 19 ವರ್ಷದ ಪದವಿ ವಿದ್ಯಾರ್ಥಿ ರಮೇಶ್ ಯಾದವ್‌ ಎಂದು ಗುರುತಿಸಲಾಗಿದೆ. ಜೂನ್ 18ರಂದು ರಮೇಶ್ ಯಾದವ್ ಮೇಲೆ ಚಂದನ್ ಲೋನಿಯಾ, ಅಮನ್ ಲೋನಿಯಾ, ಸತ್ಯಂ ಶುಕ್ಲಾ, ಸುಮಿತ್ ಲೋನಿಯಾ ಮತ್ತು ಇನ್ನೊರ್ವ (ಹೆಸರು ತಿಳಿದು ಬಂದಿಲ್ಲ) ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇದೀಗ ಐವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಬ್ಯೂಟಿಪಾರ್ಲರ್‌ನಲ್ಲಿ ಮದುವೆಗೆ ಸಿದ್ದಗೊಳ್ಳುತ್ತಿದ್ದ ವಧುವನ್ನು ಗುಂಡಿಕ್ಕಿ ಕೊಂದ ಮಾಜಿ ಪ್ರೇಮಿ

ಜೂನ್ 18ರಂದು ಆಗಿದ್ದೇನು? 

ಜೂನ್ 18ರಂದು ಅಂಗಡಿಗೆ ಬಂದಿದ್ದ ರಮೇಶ್ ಯಾದವ್ ರಸ್ತೆ ಬದಿ ಬೈಕ್ ನಿಲ್ಲಿಸಿದ್ದನು. ಈ ವೇಳೆ ಅಲ್ಲಿಗೆ ಬಂದ ಐವರು ಬೈಕ್ ತೆಗೆಯುವಂತೆ ಹೇಳಿದ್ದಾರೆ. ಇದಕ್ಕೆ ರಮೇಶ್, ಸ್ವಲ್ಪ ತಡೆಯಿರಿ ಬೈಕ್ ತೆಗೆದುಕೊಂಡು ಹೋಗುವೆ ಎಂದು ಹೇಳಿದ್ದಾನೆ. ಇದರಿಂದ ಕೋಪಗೊಂಡ ಐವರು ರಮೇಶ್ ಯಾದವ್‌ನನ್ನು ಬಲವಂತವಾಗಿ ಎಳೆದೊಯ್ದು ಬೆಲ್ಟ್‌ನಿಂದ ಹೊಡೆದಿದ್ದಾರೆ. ವೈರಲ್ ಆಗಿರುವ 30 ಸೆಕೆಂಡ್ ವಿಡಿಯೋದಲ್ಲಿ 50ಕ್ಕೂ ಅಧಿಕ ಬಾರಿ ಹೊಡೆದಿದ್ದಾರೆ. ಒಬ್ಬರು ಹೊಡೆಯುತ್ತಿದ್ದರೆ, ಮತ್ತೋರ್ವ ವಿಡಿಯೋ ಮಾಡಿದ್ದಾನೆ.

ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ

ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ನಮ್ಮ ಗಮನಕ್ಕೂ ಬಂದಿದೆ. ಸಂಬಂಧಪಟ್ಟ ಠಾಣೆಯ ಪೊಲೀಸರಿಗೆ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ದುಷ್ಕರ್ಮಿಗಳನ್ನು ಗುರುತಿಸಲಾಗಿದ್ದು, ಸದ್ಯ ಎಲ್ಲಾ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಹೆಚ್ಚುವರಿ ಎಸ್ಪಿ ವಿವೇಕ್ ಲಾಲ್  ಮಾಹಿತಿ ನೀಡಿದ್ದಾರೆ.

I am sorry ಅಪ್ಪಾ.. 8ನೇ ಮಹಡಿಯಿಂದ ಜಿಗಿದ TCS ಕಂಪನಿಯ ಪ್ರೊಜೆಕ್ಟ್ ಮ್ಯಾನೇಜರ್ 

Latest Videos
Follow Us:
Download App:
  • android
  • ios