Asianet Suvarna News Asianet Suvarna News

I am sorry ಅಪ್ಪಾ.. 8ನೇ ಮಹಡಿಯಿಂದ ಜಿಗಿದ TCS ಕಂಪನಿಯ ಪ್ರೊಜೆಕ್ಟ್ ಮ್ಯಾನೇಜರ್ 

ಎಂಟನೇ ಮಹಡಿಯಿಂದ ಜಿಗಿಯುತ್ತಿದ್ದಂತೆ ಯುವತಿ ಸಾವನ್ನಪ್ಪಿದ್ದಾಳೆ. ಎಲ್ಲಾ ಆಯಾಮದಲ್ಲಿಯೂ ತನಿಖೆ ಆರಂಭಿಸಲಾಗಿದೆ. ಯುವತಿಯ ಪೋಷಕರಿಂದಲೂ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಸಿ.ಬಿ.ಸಿಂಗ್ ಹೇಳಿದ್ದಾರೆ.

TCS Company emlpoyee died by suicide in indore mrq
Author
First Published Jun 24, 2024, 8:37 PM IST

ಇಂದೋರ್: ಟಿಸಿಎಸ್ ಕಂಪನಿಯ ಮಹಿಳಾ ಉದ್ಯೋಗಿ (TCS Company Employee) 8ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ (Died By Suicide) ಮಾಡಿಕೊಂಡಿದ್ದಾರೆ. ಮೃತ ಯುವತಿಯನ್ನು 37 ವರ್ಷದ ಸುರಭಿ ಜೈನ್ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುರಭಿ ಜೈನ್ ಟಿಸಿಎಸ್‌ ಕಂಪನಿಯಲ್ಲಿ ಪ್ರೊಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದರು. ಇಂದು ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಸುರಭಿ ಡೆತ್ ನೋಟ್ (Death Note) ಬರೆದಿದ್ದು, I am Sorry Daddy ಎಂದು ಬರೆಯಲಾಗಿತ್ತು. 

ಸುರಭಿ ಜೈನ್ ಇಂದೋರ್‌ನ ವಿಜಯ ನಗರದಲ್ಲಿ ಪೋಷಕರ ಜೊತೆ ವಾಸವಾಗಿದ್ದರು. ಸೋಮವಾರ ಬಿಸಿಎಸ್ ಹೈಟ್ಸ್ ಕಟ್ಟಡದ ಎಂಟನೇ ಮಹಡಿಯಿಂದ ಜಿಗಿದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ರವಾನಿಸಿದ್ದಾರೆ. ಎಂಟನೇ ಮಹಡಿಯಿಂದ ಜಿಗಿಯುತ್ತಿದ್ದಂತೆ ಯುವತಿ ಸಾವನ್ನಪ್ಪಿದ್ದಾಳೆ. ಎಲ್ಲಾ ಆಯಾಮದಲ್ಲಿಯೂ ತನಿಖೆ ಆರಂಭಿಸಲಾಗಿದೆ. ಯುವತಿಯ ಪೋಷಕರಿಂದಲೂ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ಸಿ.ಬಿ.ಸಿಂಗ್ ಹೇಳಿದ್ದಾರೆ.

ಆಫಿಸ್‌ಗೆ ಹೋಗುವೆ ಅಂತ ಹೇಳಿದ್ದ ಸುರಭಿ 

ಇಂದು ಬೆಳಗ್ಗೆ ಮನೆಯಿಂದ ಹೊರಡುವ ಮುನ್ನ ಪೋಷಕರಿಗೆ ಆಫಿಸ್‌ಗೆ ಎಂದು ಹೇಳಿ ಹೊರ ಹೋಗಿದ್ದರು. ಘಟನಾ ಸ್ಥಳದಲ್ಲಿ ಸಿಕ್ಕ ಡೆತ್‌ನೋಟ್‌ನಲ್ಲಿ ತಂದೆಗಾಗಿ  ಭಾವುಕ ಪತ್ರವೊಂದನ್ನು ಸುರಭಿ ಬರೆದಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಸುರಭಿ ತಂದೆ ಅಶೋಕ್ ಕುಮಾರ್ ಜೈನ್, ಮಗಳು ಸುರಭಿ ಖಿನ್ನತೆಗೊಳಗಿದ್ದಳು. ಆಕೆಗೆ ಚಿಕಿತ್ಸೆ ಸಹ ಕೊಡಿಸಲಾಗುತ್ತಿತ್ತು.  ಎಂದಿನಂತೆ ಸೋಮವಾರ ಬೆಳಗ್ಗೆ ಕೆಲಸಕ್ಕೆ ಅಂತೆ ಮನೆಯಿಂದ ಹೊರಗೆ ಹೋಗಿದ್ದಳು ಎಂದು ಹೇಳಿದ್ದಾರೆ. 

ಮದ್ವೆಯಾಗಿದ್ರೂ ಲಿವ್ ಇನ್ ರಿಲೇಶನ್‌ಶಿಪ್; ಹಾಲಿ ಗೆಳತಿಯೊಂದಿಗೆ ಸೇರಿ ಮಾಜಿ ಗೆಳತಿಯನ್ನು ಕೊಂದು ಜೈಲುಪಾಲು

ಮನೆಯಿಂದ ಹೊರ ಬಂದವಳು ಬಿಸಿಎಂ ಹೈಟ್ ಕಟ್ಟಡ ಮೇಲಿನಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ. ಇರೋ ಒಬ್ಬ ಮಗಳು ಮನೆಗೆ ವಾಪಸ್‌ ಬರಲಿಲ್ಲ ಎಂದು ಅಶೋಕ್ ಕುಮಾರ್ ಜೈನ್ ಕಣ್ಣೀರು ಹಾಕುತ್ತಾರೆ. ಸುರಭಿ ಬಳಸುತ್ತಿದ್ದ  ಮೊಬೈಲ್ ಕಟ್ಟಡ ಮೇಲ್ಭಾಗದಲ್ಲಿ ಸಿಕ್ಕಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಖಿನ್ನತೆ ಯಾಕೆ? 

ಸುರಭಿ ಗಂಡನಿಂದ ಬೇರೆಯಾಗಿ ಡಿವೋರ್ಸ್ ಪಡೆದುಕೊಂಡು ಪೋಷಕರ ಜೊತೆಯಲ್ಲಿ ವಾಸವಾಗಿದ್ದರು. ಗಂಡನಿಂದ ದೂರವಾದ ಬಳಿಕ ಸುರಭಿ ಮಾನಸಿಕವಾಗಿ ಕುಗ್ಗಿದ್ದರು. ಹೀಗಾಗಿ ಸುರಭಿ ಯಾರ ಜೊತೆಯಲ್ಲಿಯೂ ಹೆಚ್ಚು ಮಾತನಾಡುತ್ತಿರಲಿಲ್ಲ. ಇಂದು ಬೆಳಗ್ಗೆ ಕೆಲಸಕ್ಕೆ ತೆರಳುವ ಮುನ್ನ ತನ್ನ ಎಲ್ಲಾ ಚಿನ್ನಾಭರಣಗಳನ್ನು ತಂದೆಗೆ ನೀಡಿ ತೆಗೆದಿಡುವಂತೆ ಹೇಳಿದ್ದರು ಎಂಬ ವಿಷಯ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ಕೊಳೆತ ಸ್ಥಿತಿಯಲ್ಲಿ ಹಿರಿಯ ದಂಪತಿ ಶವ ಪತ್ತೆ, ಇತ್ತ ಸಾಕಿದ್ದ 50 ಪಾರಿವಾಳಗಳೂ ಸಾವು

Latest Videos
Follow Us:
Download App:
  • android
  • ios