Asianet Suvarna News Asianet Suvarna News

Bengaluru; ಸಾಲ ಕಟ್ಟದ್ದಕ್ಕೆ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ, ಮೂವರ ಬಂಧನ

  •  ಸಾಲ ಕಟ್ಟದ್ದಕ್ಕೆ ಮಹಿಳೆಯ ಮನೆಗೆ ನುಗ್ಗಿ ಬಟ್ಟೆ ಬಿಚ್ಚಿ ಮರಣಾಂತಿಕವಾಗಿ ಹಲ್ಲೆ
  • ದೊಮ್ಮಸಂದ್ರ ವ್ಯಾಪ್ತಿಯ ನೆರಿಗಾ ಗ್ರಾಮದಲ್ಲಿ ಅಮಾನುಷ ಘಟನೆ
  • ದೂರು ಸ್ವೀಕರಿಸಲು ಪೊಲೀಸರ ನಕಾರ
  • ವರ್ಷದ ಹಿಂದೆ 1 ಲಕ್ಷ ಸಾಲ ಪಡೆದಿದ್ದ ಮಹಿಳೆ
  • ಸಕಾಲಕ್ಕೆ ಸಾಲ ಕಟ್ಟಲು ಆಗದೆ ಸಂಕಷ್ಟ

 

Women stripped and assaulted in Bengaluru Sarjapur for not repaying loan gow
Author
Bengaluru, First Published Jul 2, 2022, 11:25 AM IST

ದೊಮ್ಮಸಂದ್ರ (ಜು.2): ಸಾಲ ಮತ್ತು ಬಡ್ಡಿ ಕಟ್ಟದ್ದಕ್ಕೆ ಮಹಿಳೆಯನ್ನು ಬೆತ್ತಲೆಗೊಳಿಸಿ ಅಮಾನುಷವಾಗಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಸರ್ಜಾಪುರ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.  ನೆರಿಗಾ ಗ್ರಾಮದ ಸುನೀಲ್‌ ಕುಮಾರ್‌, ರಾಮಕೃಷ್ಣಾರೆಡ್ಡಿ, ಇಂದ್ರಮ್ಮನನ್ನು ಬುಧವಾರ ಬೆಳಗ್ಗೆ ಸರ್ಜಾಪುರ ಠಾಣೆಯ ಇನ್‌ಸ್ಪೆಕ್ಟರ್‌ ರಾಘವೇಂದ್ರ ಇಂಬ್ರಾಪುರ್‌ ಅವರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಸಾಲ ಮತ್ತು ಬಡ್ಡಿ ಕಟ್ಟದ್ದಕ್ಕೆ ನೆರಿಗಾ ಗ್ರಾಮದ ಸುಬ್ಬಾ ರೆಡ್ಡಿ ಅವರ ಪುತ್ರಿ ಶಾಂತಿ ಪ್ರಿಯಾ ಮತ್ತು ಭಾನುಪ್ರಿಯಾ ಮೇಲೆ ಸುನೀಲ್‌ ಮತ್ತು ಆತನ ಪೋಷಕರಾದ ರಾಮಕೃಷ್ಣಾರೆಡ್ಡಿ, ಇಂದ್ರಮ್ಮ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. 

ಸುನೀಲ್‌ ಶಾಂತಿಪ್ರಿಯಾ ಅವರನ್ನು ಬೆತ್ತಲೆಗೊಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಹಲ್ಲೆ ನಡೆಸಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಗೊಂಡು ವ್ಯಾಪಕ ಟೀಕೆಗೆ ಒಳಗಾಗಿತ್ತು. ಅಲ್ಲದೆ ಪೊಲೀಸರು ದೂರು ಸ್ವೀಕರಿಸಲು ನಕಾರ ಮಾಡಿದ್ದ ಬಗ್ಗೆ ಸಮಾಜದ ಗಣ್ಯರು ಪೊಲೀಸರ ವಿರುದ್ಧ ಹರಿಹಾಯ್ದಿದ್ದರು. ಬಳಿಕ ಶಾಂತಿಪ್ರಿಯಾ ಅವರನ್ನು ಮಂಗಳವಾರ ರಾತ್ರಿ ಠಾಣೆಗೆ ಕರೆಸಿಕೊಂಡ ಇನ್‌ಸ್ಪೆಕ್ಟರ್‌ ದೂರು ಸ್ವೀಕರಿಸಿ, ಆರೋಪಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

BENGALURU; ಖಾಸಗಿ ಟ್ರಾನ್ಸ್‌ಪೋರ್ಟ್‌ನಿಂದ ರಕ್ತಚಂದನ ಸ್ಮಗ್ಲಿಂಗ್‌

ಘಟನೆ ಹಿನ್ನೆಲೆ: ಕೊಟ್ಟಸಾಲ ಹಿಂತಿರುಗಿಸದ್ದಕ್ಕೆ ಮಹಿಳೆಯೊಬ್ಬರ ಬಟ್ಟೆಬಿಚ್ಚಿ ಅವಮಾನಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಬೆಂಗಳೂರು ನಗರ ಜಿಲ್ಲೆಯ ಅನೇಕಲ್‌ ತಾಲೂಕಿನ ಸರ್ಜಾಪುರ ವ್ಯಾಪ್ತಿಯ ದೊಮ್ಮಸಂದ್ರದಲ್ಲಿ ನಡೆದಿತ್ತು. ಅಷ್ಟೇ ಅಲ್ಲದೆ ಘಟನೆ ನಡೆದು 2 ದಿನಗಳಾದರೂ ದೂರು ಸ್ವೀಕರಸಲು ಸರ್ಜಾಪುರ ಠಾಣೆಯ ಪೊಲೀಸರು ನಕಾರ ಮಾಡಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೊಶ ವ್ಯಕ್ತವಾದ ಬಳಿಕ ದೂರು ಸ್ವೀಕರಿಸಿ ಅಮಾನವೀಯವಾಗಿ ವರ್ತಿಸಿದ್ದರು.

ದೊಮ್ಮಸಂದ್ರ ವ್ಯಾಪ್ತಿಯ ನೆರಿಗಾ ಗ್ರಾಮದ ನಿವಾಸಿ ಸುಬ್ಬಾರೆಡ್ಡಿ ಅವರ ಪುತ್ರಿಯರಾದ ಶಾಂತಿ ಪ್ರಿಯಾ ಮತ್ತು ಭಾನುಪ್ರಿಯಾ ಅವರ ಮೇಲೆ ದೌರ್ಜನ್ಯ ನಡೆದಿತ್ತು. ಇದೇ ಗ್ರಾಮದ ನಿವಾಸಿಗಳಾದ ತಂದೆ ರಾಮಕೃಷ್ಣಾ ರೆಡ್ಡಿ, ತಾಯಿ ಇಂದ್ರಮ್ಮ, ಇವರ ಪುತ್ರ ಸುನೀಲ್‌ ಕುಮಾರ್‌ ಮಹಿಳೆಯ ಬಟ್ಟೆಬಿಚ್ಚಿ ಹಲ್ಲೆ ನಡೆಸಿದ ಆರೋಪಿಗಳಾಗಿದ್ದರು.

1.16 ಕೋಟಿ ವಾಪಾಸ್ ಕೇಳಿದ ವೈದ್ಯನ ಹನಿಟ್ರ್ಯಾಪ್ ಮಾಡಿ ಮತ್ತಷ್ಟು ಸುಲಿಗೆ!

ಶಾಂತಿಪ್ರಿಯಾ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಾಮಕೃಷ್ಣಾ ರೆಡ್ಡಿ ಅವರಿಂದ ವರ್ಷದ ಹಿಂದೆ ಶೇಕಡ 30 ಬಡ್ಡಿ ದರದಲ್ಲಿ .1 ಲಕ್ಷ ಸಾಲವನ್ನು ಪಡೆದಿದ್ದರು. ಕಾಲ ಕಾಲಕ್ಕೆ ಬಡ್ಡಿ ಕಟ್ಟುತ್ತಾ ಬಂದಿದ್ದರು. ಆದರೆ ಇತ್ತೀಚೆಗೆ ಅಸಲು ನೀಡುವಂತೆ ಸುನೀಲ್‌ ಒತ್ತಡ ಹಾಕಿದ್ದ. ಆದರೆ ಹಣ ಇಲ್ಲದ್ದರಿಂದ ಗ್ರಾಮಸ್ಥರ ಸಮ್ಮುಖದಲ್ಲಿ ರಾಜಿ ನಡೆದಿತ್ತು. ಅದರಂತೆ ಆಸ್ತಿ ಮಾಡಿ ಬಂದ ಹಣದಲ್ಲಿ ಸಾಲ ತೀರಿಸಲು ಒಪ್ಪಂದವಾಗಿತ್ತು. ಆದರೂ ಕೂಡ ಭಾನುವಾರ ಬೆಳಗ್ಗೆ ಶಾಂತಿಪ್ರಿಯಾ ಅವರ ಮನೆಗೆ ನುಗ್ಗಿದ ಸುನೀಲ್‌, ರಾಮಕೃಷ್ಣರೆಡ್ಡಿ, ಇಂದ್ರಮ್ಮ ಅವರು ಶಾಂತಿಪ್ರಿಯಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶಾಂತಿಪ್ರಿಯಾ ಅವರ ಮೈಮೇಲಿದ್ದ ಬಟ್ಟೆಯನ್ನು ಬಿಚ್ಚಿದ ಸುನೀಲ್‌, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ರಾಮಕೃಷ್ಣರೆಡ್ಡಿ ಮತ್ತು ಇಂದ್ರಮ್ಮ ದೊಣ್ಣೆಯಿಂದ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದರು.

ಈ ಸಂಬಂಧ ಶಾಂತಿಪ್ರಿಯಾ ಅವರು ತಮ್ಮ ಸಹೋದರಿಯೊಂದಿಗೆ ಸರ್ಜಾಪುರ ಠಾಣೆಗೆ ತೆರಳಿ ದೂರು ನೀಡಲು ಮುಂದಾದರು. ಆದರೆ ಠಾಣೆಯ ಇನ್ಸ್‌ಸ್ಪೆಕ್ಟರ್‌ ರಾಘವೇಂದ್ರ ಇಂಬ್ರಾಪುರ್‌, ದೂರು ಸ್ವೀಕರಿಸಲು ನಿರಾಕರಿಸಿದ್ದರು. ರಾಜಿ ಮೂಲಕ ಸಮಸ್ಯೆ ಬಗೆ ಹರಿಸಿಕೊಳ್ಳುವಂತೆ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬಳಿಕ ಮಾಧ್ಯಮಗಳ ಮುಂದೆ ಶಾಂತಿಪ್ರಿಯಾ ತಮಗಾದ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದರು. ಈ ವೇಳೆಗಾಗಲೇ ಮೈಮೇಲಿನ ಹಲ್ಲೆಯ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿ, ಸ್ಥಳೀಯರ ಆಕ್ರೋಶಕ್ಕೂ ಕಾರಣವಾಗಿತ್ತು. ಸಮಾಜದ ಗಣ್ಯರು, ಮಾಧ್ಯಮದವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಶಾಂತಿಪ್ರಿಯಾ ಅವರನ್ನು ಠಾಣೆಗೆ ಕರೆಸಿಕೊಂಡ ಪೊಲೀಸರು ದೂರು ಸ್ವೀಕರಿಸಿದರು. ಸಹೋದರಿಯಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
 

Follow Us:
Download App:
  • android
  • ios