Asianet Suvarna News Asianet Suvarna News

Bengaluru; ಖಾಸಗಿ ಟ್ರಾನ್ಸ್‌ಪೋರ್ಟ್‌ನಿಂದ ರಕ್ತಚಂದನ ಸ್ಮಗ್ಲಿಂಗ್‌

 ಖಾಸಗಿ ಟ್ರಾನ್ಸ್‌ಪೋರ್ಟ್‌ ನಿಂದ  ರಕ್ತಚಂದನ ಸ್ಮಗ್ಲಿಂಗ್‌ ಮಾಡುತ್ತಿದ್ದ  ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ 51 ಲಕ್ಷ ಮೌಲ್ಯದ ರಕ್ತಚಂದನ ಜಪ್ತಿ ಮಾಡಲಾಗಿದೆ.

seshadripuram cops seized red sandalwood worth 51 lakh in bengaluru gow
Author
Bengaluru, First Published Jul 2, 2022, 10:52 AM IST

ಬೆಂಗಳೂರು (ಜು.2): ಲಾಕ್‌ಡೌನ್‌ನಿಂದ ಬ್ಯಾಂಕ್‌ಗೆ ವಾಹನಗಳ ಇಐಎಂ ಕಟ್ಟಲಾಗದೆ ಸಂಕಷ್ಟದಿಂದ ರಕ್ತ ಚಂದನ ಮರ ತುಂಡುಗಳನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಖಾಸಗಿ ಟ್ರಾನ್ಸ್‌ಪೋರ್ಟ್‌ ಏಜೆನ್ಸಿ ಮಾಲೀಕ ಸೇರಿ ಇಬ್ಬರನ್ನು ಶೇಷಾದ್ರಿಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ರಾಜ್ಯದ ಎಸ್‌.ವಿಘ್ನೇಶ್‌ ಹಾಗೂ ಎಂ.ಚಂದ್ರು ಬಂಧಿತರಾಗಿದ್ದು, ಆರೋಪಿಗಳಿಂದ 51 ಲಕ್ಷ ರು. ಮೌಲ್ಯದ 4.53 ಕ್ವಿಂಟಾಲ್‌ ರಕ್ತ ಚಂದನ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕಾಳಿಯಪ್ಪನ್‌, ಶಿವ, ಅಸ್ಲಾಂ ಹಾಗೂ ಮೌಲಾ ಪತ್ತೆಗೆ ತನಿಖೆ ಮುಂದುವರೆದಿದೆ. ಕೆಲ ದಿನಗಳ ಹಿಂದೆ ಆರ್‌.ಪಿ.ರಸ್ತೆಯಲ್ಲಿ ವಾಹನ ತಪಾಸಣೆ ವೇಳೆ ಅನುಮಾನದ ಮೇರೆಗೆ ವಿಘ್ನೇಶ್‌ ಕಾರನ್ನು ಜಪ್ತಿ ಮಾಡಲಾಯಿತು. ಬಳಿಕ ಠಾಣೆಗೆ ಕರೆತಂದು ವಿಚಾರಿಸಿದಾಗ ರಕ್ತ ಚಂದನ ಕಳ್ಳ ಸಾಗಾಣಿಕೆ ಬಯಲಾಯಿತು.

Kolar Crime News: ಸರ್ಕಾರಿ ಭೂ ಮಂಜೂರಿಗಾಗಿ ಜಿಲ್ಲಾಧಿಕಾರಿ ನಕಲಿ ಸಹಿ: ಕಂದಾಯ ಇಲಾಖೆಯ ಇಬ್ಬರು ಅರೆಸ್ಟ್!

300 ಗೆ ಖರೀದಿಸಿ .2 ಸಾವಿರಕ್ಕೆ ಮಾರಾಟ: ತನ್ನೂರಿನಲ್ಲಿ ಕ್ಯಾಂಟರ್‌ ಹಾಗೂ ಕಾರುಗಳನ್ನು ಇಟ್ಟುಕೊಂಡು ಟ್ರಾವೆಲ್ಸ್‌ ಏಜೆನ್ಸಿ ನಡೆಸುತ್ತಿದ್ದ ತಮಿಳುನಾಡಿನ ಚಂದ್ರು, ಎರಡು ವರ್ಷಗಳ ಹಿಂದೆ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ದೇಶದಲ್ಲಿ ಜಾರಿಗೊಂಡ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ. ಟ್ರಾನ್ಸ್‌ಪೋರ್ಟ್‌ ವ್ಯವಹಾರ ನಡೆಯದೆ ಕ್ಯಾಂಟರ್‌ಗಳು ಮನೆಯಲ್ಲೇ ನಿಂತವು. ಇತ್ತ ಬ್ಯಾಂಕ್‌ ಅಧಿಕಾರಿಗಳು, ಸಾಲ ತೀರಿಸದ ಕಾರಣಕ್ಕೆ ಚಂದ್ರುಗೆ ಸೇರಿದ ಕ್ಯಾಂಟರ್‌ಗಳನ್ನು ಜಪ್ತಿ ಮಾಡಿದ್ದರು. ಕೊನೆಗೆ ಈ ಸಾಲ ತೀರಿಸಲು ಆತ ‘ಕಳ್ಳ’ ಮಾರ್ಗ ಹಿಡಿದಿದ್ದಾನೆ. ಇನ್ನು ವಿಘ್ನೇಶ್‌ ಕೂಲಿ ಕಾರ್ಮಿಕನಾಗಿದ್ದು, ಈ ಮೊದಲು ರಕ್ತಚಂದನ ದಂಧೆಕೋರರ ಬಳಿ ಮರ ಕಡಿಯುವ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ತಮ್ಮ ಸಹಚರರ ಜತೆ ಸೇರಿ ರಕ್ತಚಂದನ ಮರದ ತುಂಡುಗಳ ಸಾಗಾಣಿಕೆಗೆ ಆರಂಭಿಸಿದ ಚಂದ್ರು, ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ರಕ್ತದ ಚಂದನ ಮರದ ತುಂಡಿಗೆ ಕೆಜಿಗೆ 300 ರು.ನೀಡಿ ಖರೀದಿಸಿ ಬಳಿಕ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ವಿದೇಶಕ್ಕೆ ರಫ್ತು ಮಾಡುವ ರಕ್ತಚಂದನ ದಂಧೆಕೋರರಿಗೆ .2 ಸಾವಿರಕ್ಕೆ ಮಾರುತ್ತಿದ್ದರು. ಕಳೆದ ಏಳೆಂಟು ತಿಂಗಳಿಂದ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಬೀಗ ಹಾಕಿದ ಮನೆಗಳೇ ಖದೀಮನ ಟಾರ್ಗೆಟ್‌: ತಂದೆ-ಮಗ ಸೇರಿ ಮೂವರ ಬಂಧನ

ಸ್ಮಗ್ಲಿಂಗ್‌ಗೆ ಕಾರು ಕಳವು: ರಕ್ತ ಚಂದನದ ಕಳ್ಳ ಸಾಗಾಣಿಕೆ ಸಲುವಾಗಿಯೇ ತಮಿಳುನಾಡಿನಲ್ಲಿ ಸ್ಕಾರ್ಫಿಯೋ, ಇನ್ನೋವಾ ಸೇರಿದಂತೆ ಮೂರು ಕಾರುಗಳನ್ನು ಆರೋಪಿಗಳು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios