ಡಿವೋರ್ಸ್ ವಿಚಾರಣೆ ಮುಗಿಸಿ ಬಂದ ಪತ್ನಿ ಮೇಲೆ ಆ್ಯಸಿಡ್ ಎರಚಿದ ಪತಿ, ಪೊಲೀಸ್ ಠಾಣೆ ಎದುರಲ್ಲೇ ನಡೆಯಿತು ಘಟನೆ!
ಪತಿಯ ಕಿರುಕುಳ ತಾಳಲಾರದೆ ವಿಚ್ಚೇದನ ಕೇಳಿದ್ದ ಪತ್ನಿಯ ಮೇಲೆ ಆ್ಯಸಿಡ್ ಎರಚಲಾಗಿದೆ. ಪತಿ ಕ್ರೌರ್ಯಕ್ಕೆ ಪತ್ನಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಭೀಕರ ಘಟನೆ ಕೋರ್ಟ್, ಪೊಲೀಸ್ ಠಾಣೆ ಸಮೀಪದಲ್ಲೇ ನಡೆದಿದೆ.
ಚೆನ್ನೈ(ಮಾ.23): ಆ್ಯಸಿಡ್ ದಾಳಿ ಪ್ರಕರಣಗಳು ಇತ್ತೀತೆಗೆ ಹೆಚ್ಚಾಗುತ್ತಿದೆ. ಇದೀಗ ಪತಿಯ ಕಿರುಕುಳ ತಾಳಲಾರದೆ 3 ತಿಂಗಳ ಹಿಂದೆ ವಿಚ್ಚೇದನ ಬಯಸಿದ್ದ ಪತ್ನಿಯ ಮೇಲೆ ಆ್ಯಸಿಡ್ ಎರಚಿ ಹತ್ಯೆ ಮಾಡಿದ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದೆ. 47 ವರ್ಷದ ಮಹಿಳೆ ವಿಚ್ಚೇದನ ಕೋರಿದ್ದಾರೆ. ಆದರೆ ಪತ್ನಿ ತನಗೆ ಮೋಸ ಮಾಡಿದ್ದಾಳೆ ಎಂದು ಪತಿ ದೂರು ದಾಖಲಿಸಿದ್ದಾನೆ. ಹೀಗಾಗಿ ಪೊಲೀಸ್ ವಿಚಾರಣೆಗೆ ಆಗಮಿಸಿದ ಪತ್ನಿ, ಪತಿಜೊತೆ ಬದುಕಲು ಸಾಧ್ಯವಿಲ್ಲ ಎಂದಿದ್ದಾರೆ. ವಿಚಾರಣೆ ಬಳಿಕ ಮನೆಗೆ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಮತ್ತೆ ಪ್ರತ್ಯಕ್ಷನಾದ ಪತಿ, ನೇರವಾಗಿ ಆ್ಯಸಿಡ್ ಎರಚಿದ್ದಾನೆ. ತೀವ್ರ ನೋವಿನಿಂದ ನರಳಾಡಿದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.
ನಕ್ಕಲ್ ಜಿಲ್ಲೆಯ 47 ವರ್ಷದ ರೇವತಿ ಪತಿ ಯೇಸುದಾಸ್‌ನಿಂದ ಡಿವೋರ್ಸ್ ಬಯಸಿದ್ದರು. 3 ತಿಂಗಳ ಅರ್ಜಿಹಾಕಿದ್ದಾರೆ. ಬಳಿಕ ಮೂರು ಮಕ್ಕಳ ಜೊತೆ ತಾಯಿ ಮನೆಗೆ ತೆರಳಿದ್ದಾರ. ಇತ್ತ ಪತಿ, ರೇವತಿ ತನಗೆ ಮೋಸ ಮಾಡಿದ್ದಾಳೆ ಎಂದು ದೂರು ದಾಖಲಿಸಿದ್ದ. ಹೀಗಾಗಿ ರೇವತಿ ತನ್ನ ತಾಯಿ ಜೊತೆ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ತನಗಾಗಿರುವ ಅನ್ಯಾಯವನ್ನು ಪೊಲೀಸರ ಮುಂದೆ ಹೇಳಿಕೊಂಡಿದ್ದಾರೆ. ಇತ್ತ ಪೊಲೀಸರು ಯೇಸುದಾಸ್ ಕಿರುಕುಳಕ್ಕೆ ಗರಂ ಆಗಿದ್ದಾರೆ.
ಕೋರ್ಟ್ ಹಾಲ್‌ನಲ್ಲೇ ಪತ್ನಿ ಮೇಲೆ ಆ್ಯಸಿಡ್ ಎರಚಿದ ಪಾಪಿ ಪತಿ..!
ಪೊಲೀಸ್ ವಿಚಾರಣೆ ಮುಗಿಸಿ ಮನೆಗೆ ತೆರಳಲು ತಾಯಿ ಜೊತೆ ರೇವತಿ ಬಸ್ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಈ ವೇಳೆ ಬಸ್‌ಗಾಗಿ ಕಾಯುತ್ತಿದ್ದ ಜನರ ನಡುವಿನಿಂದ ದಿಢೀರ್ ಪ್ರತ್ಯಕ್ಷಗೊಂಡ ಯೇಸುದಾಸ್, ಪತ್ನಿ ರೇವತಿ ಮುಖಕ್ಕೆ ಆ್ಯಸಿಡ್ ಎರಚಿದ್ದಾರೆ. ಪತಿಯ ಕ್ರೌರ್ಯದಿಂದ ರೇವತಿಯ ಶೇಕಡಾ 70 ರಷ್ಟು ಸುಟ್ಟಗಾಯಗಳಿಂದ ನರಳಿದ್ದಾರೆ. ತೀವ್ರ ನೋವಿನಿಂದ ಚೀರಾಡಿದ್ದಾರೆ.
ತಕ್ಷಣವೇ ರೇವತಿ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೇವತಿ ಮಮೃತಪಟ್ಟಿದ್ದಾರೆ. ಇತ್ತ ಯೇಸುದಾಸ್ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ಹಲವು ಸಂಘಟನೆಗಳು ಯೇಸುದಾಸ್‌ಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದೆ. ಆ್ಯಸಿಡ್ ದಾಳಿ ಪ್ರಕರಣ ಹೆಚ್ಚಾಗುತ್ತಿರುವ ಕಾರಣ, ಯಾರೇ, ಯಾವುದೇ ಕಾರಣಕ್ಕೆ ಆ್ಯಸಿಡ್ ದಾಳಿ ಮಾಡಿದ್ದರೆ, ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಆಗ್ರಹ ಹೆಚ್ಚಾಗಿದೆ.
ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಸಿಟ್ಟು: 12 ಕಾರುಗಳ ಮೇಲೆ ಆಸಿಡ್ ಆಟ್ಯಾಕ್